BEML ITI Trainee Recruitment 2024: ಐಟಿಐ ಟ್ರೈನಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

Follow Us:

ಬಿಇಎಂಎಲ್‌ ಲಿಮಿಟೆಡ್‌ ಬೆಂಗಳೂರು ಘಟಕ ಸೇರಿದಂತೆ ತನ್ನ ವಿವಿಧ ಘಟಕಗಳಲ್ಲಿ ಖಾಲಿ ಇರುವ ಐಟಿಐ ಟ್ರೈನಿ ಮತ್ತು ವಿವಿಧ ಗ್ರೂಪ್‌ ಸಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನಲ್ಲಿ ದೇಶದಾದ್ಯಂತ ಇರುವ ವಿವಿಧ ಘಟಕಗಳಿಗೆ ಈ ನೇಮಕಾತಿ ಪ್ರಕ್ರಿಯೆ ಮೂಲಕ ಗ್ರೂಪ್‌ ಸಿ ಪೋಸ್ಟ್‌ ಭರ್ತಿ ಮಾಡಲಾಗುತ್ತಿದ್ದು. ಐಟಿಐ ಹಾಗೂ ಪದವಿ / ಡಿಪ್ಲೊಮ ಪಾಸಾದವರು ಸರ್ಕಾರಿ ಉದ್ಯೋಗ ಹುಡುಕುತ್ತಿದ್ದರೆ ಇದೊಂದು ಸದಾವಕಾಶವಾಗಿದೆ‌.  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿರ್ದಿಷ್ಟ ಕಾರ್ಯ ಅನುಭವದ ಅವಶ್ಯಕತೆ ಇದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನಿಗದಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳು, ಕಾರ್ಯಾನುಭವದ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ, ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

Beml Iti Trainee Recruitment 2024
Beml Iti Trainee Recruitment 2024

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳ BEML ITI Trainee Recruitment 2024 ನೇಮಕಾತಿಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ bemlindia.in ಗೆ ಭೇಟಿ ನೀಡಿ, ಸೆಪ್ಟೆಂಬರ್ 04 ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಲೇಖನದಲ್ಲಿ BEML ITI Trainee Notification 2024ರ ನೇಮಕಾತಿ ಕುರಿತು ಹೆಚ್ಚಿನ ‌ಮಾಹಿತಿಯನ್ನು ನೀಡಲಾಗಿದ್ದು, ಗಮನವಿಟ್ಟು ಓದಿರಿ.

Shortview of BEML Vacancy 2024

Organization Name – Bharat Earth Movers Limited (BEML)
Post Name – Group ‘C’ Posts
Total Vacancy – 100
Application Process: Online
Job Location – India (Bengaluru)

ನೇಮಕಾತಿಯ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 14-08-2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04-Sep-2024

ಖಾಲಿ ಇರುವ ಹುದ್ದೆಗಳ ವಿವರ:

  • ಐಟಿಐ ಟ್ರೈನಿ – ಟರ್ನರ್ – 11
  • ಐಟಿಐ ಟ್ರೈನಿ – ಮಷಿನಿಸ್ಟ್‌ – 10
  • ಐಟಿಐ ಟ್ರೈನಿ – ಎಲೆಕ್ಟ್ರಿಷಿಯನ್ – 8
  • ಐಟಿಐ ಟ್ರೈನಿ – ವೆಲ್ಡರ್ – 18
  • ಆಫೀಸ್ ಅಸಿಸ್ಟಂಟ್ ಟ್ರೈನಿ – 46

ವಿದ್ಯಾರ್ಹತೆ:

ಐಟಿಐ ಟ್ರೈನಿ ಹುದ್ದೆಗಳಿಗೆ –  ವಿವಿಧ ಟ್ರೇಡ್ ಗಳಲ್ಲಿ ಐಟಿಐ(ITI) ಪೂರ್ಣಗೊಳ್ಳಿಸಿರಬೇಕು ಜೊತೆಗೆ ಜತೆಗೆ 3 ವರ್ಷಗಳ ಕಾರ್ಯಾನುಭವವನ್ನು ಅಪ್ರೆಂಟಿಸ್ ತರಬೇತಿ ನಂತರದಲ್ಲಿ ಪಡೆದಿರಬೇಕು.

ಆಫೀಸ್ ಅಸಿಸ್ಟೆಂಟ್ ಟ್ರೈನಿ ಹುದ್ದೆಗಳಿಗೆ – ಡಿಪ್ಲೊಮ ಇನ್ ಕಂಪ್ಯೂಟರ್ ಅಪ್ಲಿಕೇಶನ್ ಅಥವಾ ಪದವಿ ಪೂರ್ಣಗೊಳ್ಳಿಸಿರಬೇಕು. ಜೊತೆಗೆ ಜತೆಗೆ 3 ವರ್ಷಗಳ ಕಾರ್ಯಾನುಭವವನ್ನು ಅಪ್ರೆಂಟಿಸ್ ತರಬೇತಿ ನಂತರದಲ್ಲಿ ಪಡೆದಿರಬೇಕು.

ವಯಸ್ಸಿನ ಮಿತಿ:

ಬಿಇಎಂಎಲ್‌ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಗರಿಷ್ಠ ವಯಸ್ಸು ಸೆಪ್ಟೆಂಬರ್ 04, 2024 ರಂತೆ 32 ವರ್ಷಗಳ ಒಳಗೆ ಇರಬೇಕು.

ವಯೋಮಿತಿ ಸಡಿಲಿಕೆ:
• OBC ಅಭ್ಯರ್ಥಿಗಳು: 03 ವರ್ಷಗಳು
• SC/ST ಅಭ್ಯರ್ಥಿಗಳು: 05 ವರ್ಷಗಳು
• PwD ಅಭ್ಯರ್ಥಿಗಳು: 10 ವರ್ಷಗಳು

ಆಯ್ಕೆ ಪ್ರಕ್ರಿಯೆ:

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನಿಗದಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳು, ಕಾರ್ಯಾನುಭವದ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ, ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ವೇತನ ವಿವರ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಲಿಮಿಟೆಡ್‌ನ ಹುದ್ದೆಗಳಿಗೆ ₹18,780–₹67,390 ಮಾಸಿಕ ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ:

  • ಸಾಮಾನ್ಯ/EWS/OBC ಅಭ್ಯರ್ಥಿಗಳು: ₹200/
  • SC/ST/PWD ಅಭ್ಯರ್ಥಿಗಳು: ಯಾವುದೇ ಅರ್ಜಿ ಶುಲ್ಕ ಇಲ್ಲ
  • ಪಾವತಿ ವಿಧಾನ: ಆನ್‌ಲೈನ್

Also Read: Karnataka Guest Lecturer Recruitment 2024: ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

How to Apply for BEML ITI Trainee Recruitment 2024

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ…?

  • ಮೊದಲಿಗೆ BEML ನ ಅಧಿಕೃತ ವೆಬ್‌ಸೈಟ್‌ ಗೆ bemlindia.in ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ “Careers” ವಿಭಾಗಕ್ಕೆ ಹೋಗಿ
  • ನಂತರ Current Careers ಆಯ್ಕೆ ಮಾಡಿ.
  • ಅಲ್ಲಿ ಕಾಣುವ Recruitment of Group ‘C’ Positions across BEML Limited: ITI & Office Assistant Trainees Apply Online ಲಿಂಕ್ ಕ್ಲಿಕ್ ಮಾಡಿ.
  • Registration ವಿಭಾಗದಲ್ಲಿ ಕೇಳಲಾಗುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
  • ಫೋಟೋ ಮತ್ತು ಸಹಿಯ ಜೊತೆಗೆ ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ.
  • ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್ ತಗೆದುಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ

ಸೀನಿಯರ್ ಮ್ಯಾನೇಜರ್ (HR), ನೇಮಕಾತಿ ಸೆಲ್ ಅನ್ನು ಇಮೇಲ್ ಐಡಿಯಲ್ಲಿ ಮಾತ್ರ ಸಂಪರ್ಕಿಸಬಹುದು : recruitment@bemlltd.in

Important Direct Links:

Official Notification PDFDownload
Online Application Form LinkApply Here
Official Websitebemlindia.in
More UpdatesKarnataka Help.in

Leave a Comment