‘ಏಮ್ಸ್‌’ನಲ್ಲಿ ನರ್ಸಿಂಗ್ ಆಫೀಸರ್ ಹುದ್ದೆಗಳ ಬೃಹತ್ ಭರ್ತಿ: ಅಪ್ಲೈ ಹೀಗೆ ಮಾಡಿ.!

ಏ.11ಕ್ಕೆ ಪೂರ್ವಭಾವಿ ಪರೀಕ್ಷೆ | ನೋಂದಣಿಗೆ ಮಾ.16ರ ಗಡುವು

Published on:

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(AIIMS) ನವದೆಹಲಿ ಮತ್ತು ಇತರೆ ಏಮ್ಸ್‌ ಸಂಸ್ಥೆಗಳಲ್ಲಿನ ನರ್ಸಿಂಗ್ ಆಫೀಸರ್ ಹುದ್ದೆಗಳ ಭರ್ತಿ ಸಂಬಂಧ ನರ್ಸಿಂಗ್‌ ಆಫೀಸರ್‌ ನೇಮಕಾತಿ ಸಾಮಾನ್ಯ ಅರ್ಹತಾ ಪರೀಕ್ಷೆ ಆವೃತ್ತಿ 10ರ ನೋಂದಣಿಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ.

ಒಟ್ಟು 2551 ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಬಿ.ಎಸ್ಸಿ. ನರ್ಸಿಂಗ್/ಜನರಲ್ ನರ್ಸಿಂಗ್ ಮಿಡ್‌ವೈಫರಿಯಲ್ಲಿ ಡಿಪ್ಲೊಮಾ ಅರ್ಹತೆ ಹೊಂದಿರುವವರು ನೋಂದಣಿ ಮಾಡಲು ಮಾ.16ರವೆರೆಗೆ ಅವಕಾಶವಿದೆ. ಏಮ್ಸ್‌ ಅಧಿಕೃತ ಜಾಲತಾಣ https://aiimsexams.ac.in/ಕ್ಕೆ ಭೇಟಿ ನೀಡಿ ನೋಂದಣಿ ಮಾಡಿ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಫೆಬ್ರವರಿ 24, 2026
  • ಅರ್ಜಿ ಸಲ್ಲಿಸಲು‌ ಕೊನೆಯ ದಿನಾಂಕ – ಮಾರ್ಚ್ 16, 2026
  • ಸರ್ಕಾರಿ/ಅರೆ ಅಥವಾ ಅರೆ ಸರ್ಕಾರಿ/ಪಿಎಸ್‌ಯುಗಳು/ಸ್ವಾಯತ್ತ ಸಂಸ್ಥೆಗಳು ಅಥವಾ ಸರ್ಕಾರದಿಂದ ಅನುದಾನ ಪಡೆದ ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಅರ್ಜಿದಾರರಿಗೆ NOC ಸಲ್ಲಿಸಲು‌ ಕೊನೆಯ ದಿನಾಂಕ – ಮಾರ್ಚ್ 20, 2026
  • ಹಂತ I NORCET ಪೂರ್ವಭಾವಿ ಪರೀಕ್ಷೆಯ ದಿನಾಂಕ – ಏಪ್ರಿಲ್ 11, 2026
  • ಹಂತ II NORCET ಮುಖ್ಯ ಪರೀಕ್ಷೆಯ ದಿನಾಂಕ – ಏಪ್ರಿಲ್ 30, 2026

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ. ನರ್ಸಿಂಗ್/ಜನರಲ್ ನರ್ಸಿಂಗ್ ಮಿಡ್‌ವೈಫರಿಯಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ವಯೋಮಿತಿ:

ಕನಿಷ್ಠ ಮಿತಿ – 18 ವರ್ಷಗಳು
ಗರಿಷ್ಠ ಮಿತಿ – 30 ವರ್ಷಗಳು

ವಯೋಮಿತಿ ಸಡಿಲಿಕೆ; ಪ.ಜಾತಿ, ಪ.ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪಿಡಬ್ಲ್ಯೂ ಬಿಡಿ ಅಭ್ಯರ್ಥಿಗಳಿಗೆ – 10-15 ವರ್ಷಗಳು.

ಆಯ್ಕೆ ವಿಧಾನ:

  • ಹಂತ I NORCET ಪೂರ್ವಭಾವಿ ಪರೀಕ್ಷೆ
  • ಹಂತ II NORCET ಮುಖ್ಯ ಪರೀಕ್ಷೆ
  • ಸಂದರ್ಶನ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಸಂಬಳ:

₹9300-34800 ಮತ್ತು ಗ್ರೇಡ್ ಪೇ ₹4600 ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ – ₹3000
ಪ.ಜಾತಿ, ಪ.ಪಂಗಡ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – ₹2,400
ಪಿಡಬ್ಲ್ಯೂಬಿಡಿ – ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ‌ ಸಲ್ಲಿಸುವ ಕ್ರಿಯೆ ಹೇಗೆ..?

• ಏಮ್ಸ್‌ ಅಧಿಕೃತ ಜಾಲತಾಣ https://www.aiimsexams.ac.in/advertisement/699d90c3a5c5ab7d59ac721bಕ್ಕೆ ಭೇಟಿ ನೀಡಿ.

• ನಂತರ *ನರ್ಸಿಂಗ್ ಅಧಿಕಾರಿ ನೇಮಕಾತಿ ಸಾಮಾನ್ಯ ಅರ್ಹತಾ ಪರೀಕ್ಷೆ (NORCET-10)* ಶೀರ್ಷಿಕೆ ಕೆಳಗೆ ನೀಡಲಾಗಿರುವ “ಅಪ್ಲಿಕೇಶನ್_ನೋಂದಣಿಅರ್ಜಿ ಸಲ್ಲಿಸಲು ಲಾಗಿನ್ ಮಾಡಿ” ಆಯ್ಕೆಯ ಮೇಲೆ ಟ್ಯಾಪ್ ಮಾಡಿ.

• ಅಭ್ಯರ್ಥಿ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.

• ನಂತರ ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ.

• ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಪಾವತಿ ಮಾಡಿ.

• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಎಚ್ಚರಿಕೆಯಿಂದ ಪರಿಶೀಲಿಸಿ ಸಲ್ಲಿಸಿ.

• ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.

Important Direct Links:

Official Notification PDFDownload
Online Application Form LinkApply Now
Official Websitewww.aiimsexams.ac.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

2 thoughts on “‘ಏಮ್ಸ್‌’ನಲ್ಲಿ ನರ್ಸಿಂಗ್ ಆಫೀಸರ್ ಹುದ್ದೆಗಳ ಬೃಹತ್ ಭರ್ತಿ: ಅಪ್ಲೈ ಹೀಗೆ ಮಾಡಿ.!”

Leave a Comment