ಆದರ್ಶ ವಿದ್ಯಾಲಯ: 6ನೇ ತರಗತಿ ಪ್ರವೇಶ ಪರೀಕ್ಷೆಗೆ ನೋಂದಣಿ ಗಡುವು ವಿಸ್ತರಣೆ

ಮಾ.22ಕ್ಕೆ ಪ್ರವೇಶ ಪರೀಕ್ಷೆ

Published on:

2026-27ನೇ ಶೈಕ್ಷಣಿಕ ಸಾಲಿನ ಆದರ್ಶ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಆಸಕ್ತ ವಿದ್ಯಾರ್ಥಿಗಳಿಂದ ನೋಂದಣಿ ಪ್ರಕ್ರಿಯೆ ಜ.23ರಿಂದ ಪ್ರಾರಂಭವಾಗಿದೆ.

ಮಾ.22ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ರಾಜ್ಯ ಅಥವಾ ಹೊರ ರಾಜ್ಯದ ಶಾಲೆಯಲ್ಲಿ ಪ್ರಸ್ತುತ 5ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಬಹುದು. ಪರೀಕ್ಷೆ ನೋಂದಣಿಗೆ ಮಾ.02 ಕೊನೆಯ ದಿನವಾಗಿದೆ. ಸ್ವ ನೋಂದಣಿ ಮಾಡಲು http://164.100.133.7:82/frmsatschk.aspxಗೆ ಭೇಟಿ ನೀಡಿ.

ಮುಖ್ಯ ದಿನಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ – ಜನವರಿ 23
ಅರ್ಜಿ ಸಲ್ಲಿಸಲು ಕೊನೆ ದಿನಾಂಕ – ಮಾರ್ಚ್‌ 02 (ವಿಸ್ತರಣೆ)
ಪ್ರವೇಶ ಪರೀಕ್ಷೆಯ ದಿನ – ಮಾರ್ಚ್‌ 22(ವಿಸ್ತರಣೆ)

ನೋಂದಣಿಗೆ ಅಗತ್ಯವಿರುವ ದಾಖಲೆಗಳು

  • ಎಸ್‌ಎಟಿಎಸ್‌(SATS) ಸಂಖ್ಯೆ
  • ವಿದ್ಯಾರ್ಥಿಯ ಭಾವಚಿತ್ರ
  • ಜಾತಿ ಪ್ರಮಾಣ ಮತ್ತು ಆದಾಯ ಪ್ರಮಾಣ ಪತ್ರ
  • ವಾಸಸ್ಥಳ ಪ್ರಮಾಣಪತ್ರ
  • ಅಧ್ಯಯನ ಪ್ರಮಾಣಪತ್ರ(ಹೊರ ರಾಜ್ಯದ ಅಭ್ಯಸಿಸುತ್ತಿರುವವರಿಗೆ ಮಾತ್ರ ಅನ್ವಯ)

ನೋಂದಣಿ ಮಾಡುವ ಪರಿ ಹೇಗೆ..?

■ ಹಂತ-1 ಅಧಿಕೃತ ಜಾಲತಾಣ http://164.100.133.7:82/home.aspxಕ್ಕೆ ಭೇಟಿ

■ ಹಂತ-2 ನಂತರ ಮೆನು ವಿಭಾಗದಲ್ಲಿ “2026-27 ನೇ ಸಾಲಿನ 6 ನೇ ತರಗತಿಗೆ ಪ್ರವೇಶ” ದಡಿ “ಪರೀಕ್ಷೆಗೆ ಅರ್ಜಿ ಸಲ್ಲಿಸಿ” ಶಿರ್ಷಿಕೆ ಲಿಂಕ್‌ ಒತ್ತಿ.

■ ಹಂತ-3 ಪ್ರಸ್ತುತ 5ನೇ ತರಗತಿ ಅಭ್ಯಸಿಸುತ್ತಿರುವ ರಾಜ್ಯ ಆಯ್ಕೆ ಮಾಡಿ, ವಿದ್ಯಾರ್ಥಿಯ ಎಸ್‌ಎಟಿಎಸ್‌ ಸಂಖ್ಯೆ ನಮೂದಿಸಿ ಹಾಗೂ ಭದ್ರತಾ ಕೋಡ್‌ ಹಾಕಿ, “ಸಲ್ಲಿಸು” ಬಟನ್‌ ಮೇಲೆ ಒತ್ತಿ(ಕೆಳಗೆ ತೋರಿಸಿರುವಂತೆ- ಚಿತ್ರ-1).

ಮುಂದೆ ನೀವು ನಮೂದಿಸಿರುವ ಎಸ್‌ಎಟಿಎಸ್‌ ಸಂಖ್ಯೆಯ ಮುಖೇನ ವಿದ್ಯಾರ್ಥಿಯ ಸವಿವರ ತೋರಿಸಲಾಗುತ್ತದೆ(ಕೆಳಗೆ ಚಿತ್ರದಲ್ಲಿ ತೋರಿಸಿರುವಂತೆ- ಚಿತ್ರ-2), ಅಲ್ಲಿ ಮತ್ತೊಮ್ಮೆ ಸಲ್ಲಿಸು ಬಟನ್‌ ಮೇಲೆ ಒತ್ತಿ.

Adarsha Vidyalaya Admission 2026-27 Online Form Step-1
ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆ – ಚಿತ್ರ-1
Adarsha Vidyalaya Admission 2026-27 Online Form Step-2
ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆ – ಚಿತ್ರ-2

■ ಹಂತ-4 ಮುಂದೆ ಅರ್ಜಿ ವಿವರಗಳಲ್ಲಿ ಕೇಳಲಾಗುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ತುಂಬಿ ಮಾಡಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್ಲೋಡ್‌ ಮಾಡಿ. ಅರ್ಜಿ ಸಲ್ಲಿಸುವ ಮೊದಲು ಪೂರ್ವವೀಕ್ಷಣೆ ಮಾಡಿ, “ಸಲ್ಲಿಸು” ಬಟನ್‌ ಒತ್ತಿ..

ಗಮನಿಸಿ: ಒಮ್ಮೆ ಸಲ್ಲಿಕೆಯಾದ ಅರ್ಜಿ ತಿದ್ದುಪಡಿ ಮಾಡಲು ಆನ್‌ಲೈನ್‌ನಲ್ಲಿ ಅವಕಾಶವಿರುವುದಿಲ್ಲ. ಆದ್ದರಿಂದ ಅಭ್ಯರ್ಥಿಗಳು ನೋಂದಣಿ ಮಾಡುವಾಗ ಎಚ್ಚರಿಕೆಯಿಂದ ಸರಿಯಾದ ಮಾಹಿತಿ ತುಂಬಬೇಕು. ಪೂರ್ವವೀಕ್ಷಣೆ ಮಾಡುವಾಗ ತಪ್ಪು ಕಂಡುಬಂದಲ್ಲಿ.. ಮುಚ್ಚಿ(Close) ಬಟನ್‌ ಒತ್ತಿ, ಅರ್ಜಿ ತಿದ್ದುಪಡಿ ಮಾಡಬಹುದು.

ಒಂದು ವೇಳೆ ತಪ್ಪಾಗಿದ್ದಲ್ಲಿ: ಅರ್ಜಿ ನಮೂನೆಯಲ್ಲಿ ತಪ್ಪಾದ ಮಾಹಿತಿ/ವಿವರ ಭರ್ತಿ ಮಾಡಿದ್ದಲ್ಲಿ. ನೀವು ಅರ್ಜಿ ನಮೂನೆಯಲ್ಲಿ ಆಯ್ಕೆ ಮಾಡಿರುವ ಆದರ್ಶ ವಿದ್ಯಾಲಯಕ್ಕೆ ನಿಗದಿತ ಕೊನೆ ದಿನಾಂಕದೊಳಗೆ ದಾಖಲೆಗಳ ಸಮೇತ ಭೇಟಿ ನೀಡಿ, ತಿದ್ದುಪಡಿ ಮಾಡುವ ಅವಕಾಶವಿದೆ.

Important Direct Links:

Adarsha Vidyalaya Admission Exam 2026-27 Registration LinkRegister Now
Print Acknowledgement LinkPrint Now
Adarsha Vidyalaya 2026 -27 Guidelines PDFDownload
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

4 thoughts on “ಆದರ್ಶ ವಿದ್ಯಾಲಯ: 6ನೇ ತರಗತಿ ಪ್ರವೇಶ ಪರೀಕ್ಷೆಗೆ ನೋಂದಣಿ ಗಡುವು ವಿಸ್ತರಣೆ”

Leave a Comment