ಭಾರತದ ಪ್ರಧಾನ ನೋಂದಣಿ ಕಚೇರಿ: ಕಾರ್ಯನಿರ್ವಾಹಕ ಅಧಿಕಾರಿಗಳ ನೇಮಕ

Published on:

ಕೇಂದ್ರ ಗೃಹ ಸಚಿವಾಲಯದ ಭಾರತದ ಪ್ರಧಾನ ನೋಂದಣಿ ಕಚೇರಿ(ORGI)ಯು ಜನಗಣತಿ-2027ರ ಸಲುವಾಗಿ ತಾತ್ಕಾಲಿಕವಾಗಿ ಸೃಜಿಸಲಾದ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 58 ಸ್ಥಾನಗಳುಗೆ ಅಭ್ಯರ್ಥಿಗಳನ್ನು ನಿಯೋಜನೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು https://censusindia.gov.in/nada/index.php/homeನಲ್ಲಿ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ, “ಅಧೀನ ಕಾರ್ಯದರ್ಶಿ, ಆಡಳಿತ ವಿಭಾಗ II, ಜಂಗಣನ ಭವನ, ಟವರ್-ಎ, 3ನೇ ಮಹಡಿ, 2/ಎ, ಮಾನ್ಸಿಂಗ್ ರಸ್ತೆ ನವದೆಹಲಿ-110011″ಗೆ ಏ.02 ರೊಳಗೆ ತಲುಪಿಸಬೇಕು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಕಟಣೆಯ ದಿನಾಂಕ – ಫೆಬ್ರವರಿ 02, 2026
  • ಅರ್ಜಿ ಸಲ್ಲಿಸಲು‌ ಕೊನೆಯ ದಿನಾಂಕ – ಏಪ್ರಿಲ್ 02, 2026 (ಉದ್ಯೋಗ ಸುದ್ದಿಯಲ್ಲಿ ಪ್ರಕಟಿಸಿದ ದಿನಾಂಕದಿಂದ 60 ದಿನಗಳ ಒಳಗೆ)

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರಬೇಕು.

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು.

• ಜನಗಣತಿ ಅಥವಾ ಸಮೀಕ್ಷೆ ಚಟುವಟಿಕೆಗಳು ಅಥವಾ ಸಂಕಲನ, ದತ್ತಾಂಶ ವಿಶ್ಲೇಷಣೆ ಮತ್ತು ವರದಿ ಬರವಣಿಗೆ ಅಥವಾ ಯೋಜನೆಗಳು ಅಥವಾ ಕಾರ್ಯಕ್ರಮಗಳ ಸೂತ್ರೀಕರಣ ಅಥವಾ ಅನುಷ್ಠಾನ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಅಥವಾ ತರಬೇತಿ ಅಥವಾ ಸಂಪರ್ಕ ಮತ್ತು ಸಮನ್ವಯ ಕೆಲಸದಲ್ಲಿ 05 ವರ್ಷಗಳ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ:

ಗರಿಷ್ಠ ವಯಸ್ಸಿನ ಮಿತಿ – 56 ವರ್ಷಗಳು

ಆಯ್ಕೆ ವಿಧಾನ:

ರಿಜಿಸ್ಟ್ರಾರ್ ಜನರಲ್ ಕಚೇರಿ ನಿಯಮಗಳ ಅನುಸಾರ

ವೇತನ:

ಅಭ್ಯರ್ಥಿಗಳಿಗೆ ಪೇ ಮ್ಯಾಟ್ರಿಕ್ಸ್ ಲೆವೆಲ್ 11ರ ನಿಯಮಗಳ ಅನುಸಾರ ಮಾಹೆಯಾನ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಉಲ್ಲೇಖಿಸಲಾಗಿರುವುದಿಲ್ಲ

ಅರ್ಜಿ‌ ಸಲ್ಲಿಸುವ ವಿಧಾನ:

• ಅರ್ಜಿದಾರರು CENSUSINDIA ಅಧಿಕೃತ ಜಾಲತಾಣ https://censusindia.gov.in/nada/index.php/catalog/47095ಕ್ಕೆ ಭೇಟಿ ನೀಡಿ.

• ಬಳಿಕ *ವಿವರಣೆ* ವಿಭಾಗದ ಕೆಳಗೆ ನೀಡಲಾಗಿರುವ “ಕಾರ್ಯನಿರ್ವಾಹಕ ಅಧಿಕಾರಿ (ಜನಗಣತಿ) ಹುದ್ದೆಯನ್ನು ನಿಯೋಜನೆ ಆಧಾರದ ಮೇಲೆ ಭರ್ತಿ ಮಾಡುವುದು, ನವದೆಹಲಿ 02-02-2026” ಲಿಂಕ್ ಮೇಲೆ ಕ್ಲಿಕ್ ಮಾಡಿ.

• ಹುದ್ದೆಯ ಅಧಿಸೂಚನೆ ಹಾಗೂ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಂಡು.

• ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ, ಭಾವಚಿತ್ರ, ಸಹಿ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಲಗತ್ತಿಸಿ.

• ಈ ಕೆಳಗಿನ ವಿಳಾಸಕ್ಕೆ ಏಪ್ರಿಲ್ 02 ರೊಳಗೆ (ಉದ್ಯೋಗ ಸುದ್ದಿಯಲ್ಲಿ ಪ್ರಕಟಿಸಿದ ದಿನಾಂಕದಿಂದ 60 ದಿನಗಳ ಒಳಗೆ) ತಲುಪುವಂತೆ ಕಳುಹಿಸಬೇಕು.

ವಿಳಾಸ: ಅಧೀನ ಕಾರ್ಯದರ್ಶಿ, ಆಡಳಿತ ವಿಭಾಗ II, ಜಂಗಣನ ಭವನ, ಟವರ್-ಎ, 3ನೇ ಮಹಡಿ, 2/ಎ, ಮಾನ್ಸಿಂಗ್ ರಸ್ತೆ ನವದೆಹಲಿ-110011

Important Direct Links:

Official Notification and Application PDFDownload
Official Websitehttp://censusindia.gov.in/
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment