ಸಾರ್ವಜನಿಕರು ಇತ್ತೀಚಿನ ದಿನಗಳಲ್ಲಿ ಫೋನ್ ಕಳೆದುಕೊಳ್ಳುವುದು ಹೆಚ್ಚಾಗಿದೆ. ಕಳೆದು ಹೋದ ಫೋನ್ ಮತ್ತೆ ಹುಡುಕೋದು ತುಂಬಾನೇ ಕಷ್ಟ ಹೀಗಿರುವಾಗ ಕೇಂದ್ರ ದೂರಸಂಪರ್ಕ ಇಲಾಖೆ ಕಳೆದು ಹೋದ ಫೋನ್(CEIR Portal Lost Phone) ಹುಡುಕಲು ಇ-ಪೋರ್ಟಲ್ ವ್ಯವಸ್ಥೆಯನ್ನು ಜಾರಿ ಮಾಡಿದೆ.
ಕೇಂದ್ರ ದೂರಸಂಪರ್ಕ ಇಲಾಖೆ ಜಾರಿಗೆ ತಂದಿರುವ ಇ – ಪೋರ್ಟಲ್ (CEIR portal) ನಿಂದ ಮನೆಯಲ್ಲಿಯೇ ಕುಳಿತು ಸುಲಭವಾಗಿ ದೂರು ದಾಖಲಿಸಬಹುದಾಗಿದೆ. ಮೊಬೈಲ್ ಕಳ್ಳತನವಾದರೆ ಅಥವಾ ಕಳೆದು ಹೋದರೆ ಈ ಪೋರ್ಟಲ್ ನ ಮೂಲಕ ಮನೆಯಲ್ಲಿಯೇ ಕುಳಿತು ಸುಲಭವಾಗಿ ದೂರು ದಾಖಲಿಸಬಹುದು ಮತ್ತು ಪತ್ತೆಯಾದ ಫೋನ್ ಅನ್ನು ಬ್ಲಾಕ್ ಮಾಡಲು ಕ್ರಮ ಕೈಗೊಳ್ಳಬಹುದು ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಫೋನ್ ಕಳೆದುಹೋದರೆ ತಕ್ಷಣ ಹೀಗೆ ಮಾಡಿ;
- ಮೊದಲಿಗೆ CEIR ನ ಅಧಿಕೃತ ಇ – ಪೋರ್ಟಲ್ https://www.ceir.gov.in/Home/index.jsp ಗೆ ಭೇಟಿ ನೀಡಿ.
- ಪೋರ್ಟಲ್ ನಲ್ಲಿ ಹೋಗಿ ದೂರು ನೋಂದಣಿ ಫಾರ್ಮ್(Request for blocking lost/stolen mobile) ಅನ್ನು ಭರ್ತಿ ಮಾಡಿ.
- IMEI ನಂಬರ್ ನಿಂದ ಮೊಬೈಲ್ ಫೋನ್ ಅನ್ನು ವೆಬ್‌ಸೈಟ್‌ನಲ್ಲಿ ಸಲ್ಲಿಸಿದ ಫಾರ್ಮ್ ಮೂಲಕ ನಿರ್ಬಂಧಿಸಬಹುದು.
- ಫೋನ್ ಅನ್ನು ನಿರ್ಬಂಧಿಸಿದ ನಂತರ, ಅದನ್ನು ಭಾರತದಾದ್ಯಂತ ಯಾವುದೇ ನೆಟ್‌ವರ್ಕ್‌ನಲ್ಲಿ ಬಳಸಲಾಗುವುದಿಲ್ಲ.
IMEI ಎಂದರೇನು?
- IMEI ಎಂದರೆ (ಅಂತರರಾಷ್ಟ್ರೀಯ ಮೊಬೈಲ್ ಸಲಕರಣೆ ಗುರುತು).
- ಫೋನ್ ಕಳೆದುಹೋದರೆ ಅಥವಾ ಕಳುವಾದರೆ ಅದರ IMEI ಅನ್ನು ನಿರ್ಬಂಧಿಸಬೇಕು.
- IMEI ಎನ್ನುವುದು ಪ್ರತಿಯೊಂದು ಮೊಬೈಲ್ ಫೋನ್‌ಗೆ ಅದರ ತಯಾರಿಕೆಯ ಸಮಯದಲ್ಲಿ ನಿಯೋಜಿಸಲಾದ ವಿಶಿಷ್ಟ 15-ಅಂಕಿಯ ಸರಣಿ ಸಂಖ್ಯೆಯಾಗಿದೆ.
- IMEI ಎನ್ನುವುದು ಪ್ರತಿಯೊಂದು ಮೊಬೈಲ್ ಬಿಲ್ ನಲ್ಲಿ ಇರುತ್ತದೆ.
- ಮೊಬೈಲ್ ದೊರೆತ ಬಳಿಕ ಮತ್ತೆ IMEI ನಂಬರನ್ನು ಅನ್ಲಾಕ್ ಮಾಡಬಹುದು.
Important Direct Links:
CEIR Request for blocking lost/stolen Mobile Link | Click Here |
Official Website | www.ceir.gov.in |
More Updates | Karnataka Help.in |