CTET July 2024 Answer Key: ಕೇಂದ್ರೀಯ ಶಿಕ್ಷಕ ಅರ್ಹತಾ ಪರೀಕ್ಷೆ (CTET) 2024 ರ ಜುಲೈ ತಿಂಗಳ ಪರೀಕ್ಷೆಗೆ ಸಂಬಂಧಿಸಿದ ಕೀ ಉತ್ತರಗಳನ್ನು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ಬಿಡುಗಡೆ ಮಾಡಿದೆ.
CTET ಜುಲೈ ಪರೀಕ್ಷೆಯನ್ನು 2024 ಜುಲೈ 7 ರಂದು ದೇಶದಾದ್ಯಂತ 136 ನಗರಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ಪರೀಕ್ಷೆಯು ಎರಡು ಪಾಳಿಗಳಲ್ಲಿ ನಡೆಯಿತು – ಪತ್ರಿಕೆ 2 ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಪತ್ರಿಕೆ 1 ಮಧ್ಯಾಹ್ನ 2 ರಿಂದ 4:30 ರವರೆಗೆ ನಡೆಸಲಾಗಿತ್ತು. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ctet.nic.in ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.ಕೀ ಉತ್ತರಗಳ ಸಹಾಯದಿಂದ ಅಭ್ಯರ್ಥಿಗಳು ತಮ್ಮ ಪರೀಕ್ಷೆಯ ಅಂಕಗಳನ್ನು ಅಂದಾಜು ಮಾಡಿಕೊಳ್ಳಬಹುದು.
ಪ್ರಕಟಿಸಿರುವ ಕೀ ಉತ್ತರಗಳಲ್ಲಿ ತಪ್ಪುಗಳಿದ್ದರೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಆಕ್ಷೇಪಣೆಗಳನ್ನು ಸಲ್ಲಿಸಲು, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡಬೇಕು ಮತ್ತು ಪ್ರತಿ ಪ್ರಶ್ನೆಗೆ ₹1000 ಶುಲ್ಕವನ್ನು ಪಾವತಿಸಬೇಕು. ಈ ಲೇಖನದಲ್ಲಿ ಅಧಿಕೃತ ಕೀ ಉತ್ತರಗಳನ್ನು ಡೌನಲೋಡ್ ಮಾಡುವುದು ಹೇಗೆ ಎಂಬ ಮಾಹಿತಿಯನ್ನು ನೀಡಲಾಗಿದ್ದು, ಗಮನವಿಟ್ಟು ಓದಿರಿ.
How to Download CTET July 2024 Answer Key
ಕೀ ಉತ್ತರಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ:
ಅಧಿಕೃತ CTET ವೆಬ್‌ಸೈಟ್ ctet.nic.in ಗೆ ಭೇಟಿ ನೀಡಿ.
“CTET Key Answer 2024” ಲಿಂಕ್ ಕ್ಲಿಕ್ ಮಾಡಿ.
ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
“ಸಲ್ಲಿಸಿ” ಬಟನ್ ಕ್ಲಿಕ್ ಮಾಡಿ.
ಉತ್ತರ ಪತ್ರಿಯನ್ನು PDF ಸ್ವರೂಪದಲ್ಲಿ ಡೌನ್‌ಲೋಡ್ ಮಾಡಿ.
Step by Step Objection Process of CTET July 2024 Answer Key
ಕೀ ಉತ್ತರಗಳ ಮೇಲಿನ ಆಕ್ಷೇಪಣೆ ಸಲ್ಲಿಸುವುದು ಹೇಗೆ…?
ಮೊದಲಿಗೆ ಅಧಿಕೃತ ವೆಬ್ ಸೈಟ್ ctet.nic.in ಭೇಟಿ ನೀಡಿ.
ಮುಖಪುಟದಲ್ಲಿ ಲಭ್ಯವಿರುವ CTET ಉತ್ತರ ಕೀ 2024 ಲಿಂಕ್ ಅನ್ನು ಕ್ಲಿಕ್ ಮಾಡಿ.
ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಸಲ್ಲಿಸು ಕ್ಲಿಕ್ ಮಾಡಿ.
ನಿಮ್ಮ ಕೀ ಉತ್ತರಗಳು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
ಈ ಉತ್ತರಗಳನ್ನು ಪರಿಶೀಲಿಸಿ ಮತ್ತು ನೀವು ಆಕ್ಷೇಪಣೆಯನ್ನು ಸಲ್ಲಿಸಲು ಬಯಸುವ ಪ್ರಶ್ನೆಯ ಮೇಲೆ ಕ್ಲಿಕ್ ಮಾಡಿ.
ನಂತರ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಸಲ್ಲಿಸು ಕ್ಲಿಕ್ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ.