ಬೆಂಗಳೂರು: 2025-26ನೇ ಶೈಕ್ಷಣಿಕ ಸಾಲಿನ ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯ ಮತ್ತು ಖಾಸಗಿ ಡಿ.ಫಾರ್ಮಸಿ ವಿದ್ಯಾಸಂಸ್ಥೆಗಳಲ್ಲಿನ ಸರ್ಕಾರಿ ಕೋಟಾದಡಿ ಪ್ರಥಮ ಡಿ.ಫಾರ್ಮಸಿ ಕೋರ್ಸಿನ ಸೀಟುಗಳ ಪ್ರವೇಶಾತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಮತ್ತು ಕರ್ನಾಟಕೇತರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಸರ್ಕಾರಿ ಕಾಲೇಜಿನಲ್ಲಿ 60 ಸೀಟುಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ₹4 ಸಾವಿರ ಸೀಟು ಲಭ್ಯವಿರುತ್ತವೆ. ವಿಜ್ಞಾನ ವಿಷಯದಲ್ಲಿ ಪಿಯುಸಿ ಅಥವಾ ತತ್ಸಮಾನ ಅರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಸೀಟು ಹಂಚಿಕೆ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಡಲಿದ್ದು, ಅರ್ಹ ಆಸಕ್ತ ವಿದ್ಯಾರ್ಥಿಗಳು ಕೆಇಎ ಜಾಲತಾಣ https://cetonline.karnataka.gov.in/dpharma2025/ಕ್ಕೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಡಿ.20 ಕೊನೆಯ ದಿನವಾಗಿದೆ ಎಂದು ಪರೀಕ್ಷಾ ಪ್ರಾಧಿಕಾರ ಮಂಡಳಿ (ಡಿ.ಫಾರ್ಮ) ಹೊರಡಿಸಿದ ಪ್ರವೇಶ ಪ್ರಕಟಣೆ ತಿಳಸಿದೆ.
ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ, ಗಣಿತ) ವಿಷಯದಲ್ಲಿ ತೇರ್ಗಡೆ ಹೊಂದಿರಬೇಕು.
ಪ್ರವೇಶ ಶುಲ್ಕ:
ಕರ್ನಾಟಕ ವಿದ್ಯಾರ್ಥಿಗಳಿಗೆ ರೂ. 14,300/- ಮತ್ತು ಕರ್ನಾಟಕೇತರ ವಿದ್ಯಾರ್ಥಿಗಳಿಗೆ ರೂ. 17,500/- (ಸರ್ಕಾರಿ ಖೋಟಾದ ಸೀಟಿಗೆ ಮಾತ್ರ)
ಅರ್ಜಿ ಶುಲ್ಕ:
ಕರ್ನಾಟಕದ ವಿದ್ಯಾರ್ಥಿಗಳಿಗೆ – ₹600/- ಕರ್ನಾಟಕೇತರ ವಿದ್ಯಾರ್ಥಿಗಳಿಗೆ – ₹1,500/-
ಕೌನ್ಸಿಲಿಂಗ್ ಪ್ರಕ್ರಿಯೆ ಹೇಗೆ.?
ಕರ್ನಾಟಕದ ವಿದ್ಯಾರ್ಥಿಗಳಿಗೆ ವರ್ಗ ಆಧಾರಿತ ಸೀಟುಗಳ ಹಂಚಿಕೆ ನಂತರ de-categorized ಸೀಟುಗಳ ಹಂಚಿಕೆ ಮಾಡಿದ ನಂತರ ಉಳಿಕೆಯಾದ ಸೀಟುಗಳನ್ನು ಕರ್ನಾಟಕೇತರ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ..
ಹಂತ-1 ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/ಕ್ಕೆ ಭೇಟಿ ನೀಡಿ.
ಹಂತ-2 ನಂತರ ಪ್ರವೇಶಗಳು ವಿಭಾಗದಲ್ಲಿ ನೀಡಲಾದ “ಡಿಪ್ಲೊಮಾ ಫಾರ್ಮಸಿ 2025” ಶಿರ್ಷೀಕೆ ಲಿಂಕ್ ಮೇಲೆ ಒತ್ತಿ.
ಹಂತ-3 ಮುಂದೆ ಅಲ್ಲಿ “ಡಿಪ್ಲೊಮಾ ಇನ್ ಫಾರ್ಮಸಿ 2025 ಆನ್ಲೈನ್ ಅರ್ಜಿ ಲಿಂಕ್. 15-12-2025” ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು.
Important Direct Links:
Karnataka Diploma Pharmacy Admission 2025-26 Application Link