ಹಿಂದುಳಿದ ವರ್ಗಗಳ ನಿಗಮದಿಂದ ವಿವಿಧ ಸಹಾಯಧನ ಯೋಜನೆಗಳಿಗೆ ಅರ್ಜಿ ಆಹ್ವಾನ | Devaraj Arasu Loan Scheme 2024-25 Apply Online

Follow Us:

Devaraj Arasu Loan Scheme 2023

Devaraj Arasu Loan Scheme 2024-25: ಕರ್ನಾಟಕ ಹೆಲ್ಪ್ ಗೆ ಸ್ವಾಗತ, ಇಂದು ನಾವು “ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ” ದಿಂದ ನೀಡುವ ವಿವಿಧ ಯೋಜನೆಗಳ (D Devaraj Urs Backward Classes Development Corporation) ಬಗ್ಗೆ ಮಾಹಿತಿ ನೀಡಲಿದ್ದೇವೆ, ಹಲವಾರು ಜನರಿಗೆ ಈ ಯೋಜನೆಯ ಬಗ್ಗೆ ಮಾಹಿತಿಯೇ ಇಲ್ಲ. ಆದ್ದರಿಂದ ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಯಿಸಿದ್ದೇವೆ.

ಹಿಂದುಳಿದ ವರ್ಗಗಳ ನಿಗಮದಿಂದ ವಿವಿಧ ಸಹಾಯಧನ ಯೋಜನೆಗಳಿಗಾಗಿ ಅರ್ಜಿ ಸಲ್ಲಿಸಬಯಸುವ ಅರ್ಹ ಫಲಾನುಭವಿಗಳು ಈ ಲೇಖನವನ್ನು ಸಂಪೂರ್ಣವಾಗಿ ಓದಿ, ಜೊತೆಗೆ ನಿಮ್ಮ ಹಿತೈಶಿಗಳಿಗೂ ತಪ್ಪದೇ ಶೇರ್ ಮಾಡಿ.

Devaraj Arasu Loan Scheme 2023
Devaraj Arasu Loan Scheme

Devaraj Arasu Loan Scheme 2024-25

2024-25ನೇ ಸಾಲಿನಲ್ಲಿ ಅನುಷ್ಠಾನ ಗೊಳಿಸುತ್ತಿರುವ ಈ ಕೆಳಕಂಡ ಯೋಜನೆಗಳಲ್ಲಿ ಸೌಲಭ್ಯ ಪಡೆಯಬಯಸುವವರಿಂದ ಆನ್‌ ಲೈನ್‌ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

☞ ಗಂಗಾ ಕಲ್ಯಾಣ ನೀರಾವರಿ ಯೋಜನೆ (Ganga Kalyana Irrigation Scheme)
☞ ಅರಿವು-ಶೈಕ್ಷಣಿಕ ಸಾಲ ಯೋಜನೆ (Arivu Education Loan Scheme)
☞ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ (Interest Free Loan for Higher Education in foreign university)
☞ ಸ್ವಾವಲಂಬಿ ಸಾರಥಿ ಯೋಜನೆ
☞ ಸ್ವಯಂ ಉದ್ಯೋಗ ಸಾಲ ಯೋಜನೆ(D Devaraj Urs Individual Loan Scheme)
☞ ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆ(Swatantrya Amrutha Mahotsava Munnade scheme)

ಗಂಗಾ ಕಲ್ಯಾಣ ನೀರಾವರಿ ಯೋಜನೆ (Ganga Kalyana Irrigation Scheme):

  • ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು. ವೈಯಕ್ತಿಕ ಕೂಳವೆ ಬಾವಿ ಯೋಜನೆಗೆ ಒಟ್ಟು ಘಟಕ ವೆಚ್ಚ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಿಗೆ ರೂ.4.75 ಲಕ್ಷ ಇದರಲ್ಲಿ ವಿದ್ಯುದ್ದೀಕರಣ ವಚ್ಚ ಪ್ರತಿ ಕೊಳವ ಬಾವಿಗೆ ರೂ.75,000/-ಗಳನ್ನು ಎಸ್ಕಾಂಗಳಿಗೆ ಪಾವತಿಸಲಾಗುವುದು.
  • ಇನ್ನುಳಿದ ಜಿಲ್ಲೆಗಳಿಗೆ ರೂ.3.75 ಲಕ್ಷ ಇದರಲ್ಲಿ ವಿದ್ಯುದ್ದೀಕರಣ ವೆಚ್ಚ ಪ್ರತಿ ಕೊಳವೆ ಬಾವಿಗೆ ರೂ.75,000/-ಗಳನ್ನು ಎಸ್ಕಾಂಗಳಿಗೆ ಪಾವತಿಸಲಾಗುವುದು. ಘಟಕ ಪೂರ್ಣಗೊಳಿಸಲು ಸಾಧ್ಯವಾಗದಿದ್ದಲ್ಲಿ ರೂ.50,000/-ಗಳ ಸಾಲವನ್ನು ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು.
  • ಈ ಯೋಜನೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಉಳಿಕೆ ಜಿಲ್ಲೆಗಳಲ್ಲಿ ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಇರುವ ಕನಿಷ್ಠ 2 ಎಕರೆ ಜಮೀನು ಇರಬೇಕು.

ಅರಿವು-ಶೈಕ್ಷಣಿಕ ಸಾಲ ಯೋಜನೆ (Arivu Education Loan Scheme):

ಈ ಯೋಜನೆಯಡಿ CET ಮೂಲಕ ಆಯ್ಕೆಯಾಗಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ಎಲ್ಲಾ ಪವರ್ಗಗಳ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಾದ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮುಂತಾದ 28 ಕೋರ್ಸ್ ಗಳ ವ್ಯಾಸಂಗಕ್ಕೆ ವಾರ್ಷಿಕ 1.00 ಲಕ್ಷ ರೂ.ಗಳಂತೆ ಕೋರ್ಸ್‌ನ ಅವಧಿಗೆ ಗರಿಷ್ಠ 4.00 ಲಕ್ಷ ರೂ.ಗಳಿಂದ ರೂ 5.00 ಲಕ್ಷ ರೂ.ಗಳಿಗೆ ವಾರ್ಷಿಕ ಶೇ.2ರ ಬಡ್ಡಿದರಲ್ಲಿ ಸಾಲ ಮಂಜೂರು ಮಾಡಲಾಗುವುದು. ಅಭ್ಯರ್ಥಿ ಮತ್ತು ಅವರ ಕುಟುಂಬದವರ ವಾರ್ಷಿಕ ವರಮಾನವು ರೂ.3.50 ಲಕ್ಷಗಳ ಮಿತಿಯಲ್ಲಿರಬೇಕು.

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ (Interest Free Loan for Higher Education in foreign university):

ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಲು ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಪಿ.ಹೆಚ್.ಡಿ. ಪೋಸ್ಟ್ ಡಾಲ್ ಮತ್ತು ಮಾಸ್ಟರ್ ಡಿಗ್ರಿ (ಇಂಜಿನಿಯರಿಂಗ್ & ಟೆಕ್ನಾಲಜಿ, ಮ್ಯಾನೇಜ್ ಮೆಂಟ್ & ಕಾಮರ್ಸ್, ಸೈನ್ಸ್ & ಟೆಕ್ನಾಲಜಿ, ಅಗ್ರಿಕಲ್ಕರ್ & ಅಲೈಡ್ ಸೆನ್ಸಸ್/ಟೆಕ್ನಾಲಜಿ, ಮೆಡಿಸಿನ್, ಹುಮ್ಯಾನಿಟೀಸ್ & ಸೋಸಿಯಲ್ ಸೈನ್ಸಸ್) ವ್ಯಾಸಂಗಕ್ಕೆ ಪ್ರವೇಶ ಪಡೆದ ಹಿಂದುಳಿದ ವರ್ಗಗಳ ಪವರ್‌ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು.

ಸೌಲಭ್ಯ ವಡೆಯ ಬಯಸುವವರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. (ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯತ ಕಾಡುಗೊಲ್ಲ, ಹಟ್ಟಿಗೊಲ್ಲ, ಮರಾಠ, ಮತ್ತು ಇದರ ಉಪ ಸಮುದಾಯಗಳು ಹೊರತುಪಡಿಸಿ)

ಸ್ವಾವಲಂಬಿ ಸಾರಥಿ ಯೋಜನೆ:

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸ್ವಾವಲಂಬಿ ಸಾರಧಿ ಯೋಜನೆಯಡಿ ನಾಲ್ಕು ಚಕ್ರಗಳ ವಾಹನ ಖರೀದಿಗೆ ಬ್ಯಾಂಕ್‌ಗಳಿ ಪಡೆಯುವ ಸಾಲಕ್ಕೆ ಶೇ.50 ರಷ್ಟು ಗರಿಷ್ಟ ರೂ.3.00 ಲಕ್ಷಗಳ ಸಹಾಯಧನ ಮಂಜೂರು ಮಾಡಲಾಗುವುದು.

ಸ್ವಯಂ ಉದ್ಯೋಗ ಸಾಲ ಯೋಜನೆ(D Devaraj Urs Individual Loan Scheme):

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಹಿಂದುಳಿದ ವರ್ಗಗಳಿಗೆ ಸೇರಿದವರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ಅವರು ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳು / ಉದ್ಯಮಗಳಿಗೆ ವಾಣಿಜ್ಯ ಬ್ಯಾಂಕುಗಳ ಮೂಲಕ ಸಾಲ ವಡದಲ್ಲಿ ನಿಗಮದಿಂದ ಶೇ.20ರಷ್ಟು ಗರಿಷ್ಠ ರೂ.1.00 ಲಕ್ಷಗಳ ಸಹಾಯಧನ ಮಂಜೂರು ಮಾಡಲು ಉಳಿಕೆ ಮೊತ್ತವನ್ನು ಬ್ಯಾಂಕ್‌ನಿಂದ ಸಾಲ ಪಡೆಯುವ ಯೋಜನೆಯು ಇದಾಗಿದೆ.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆ(Swatantrya Amrutha Mahotsava Munnade scheme):

ಹಿಂದುಳಿದ ವರ್ಗಗಳ ವಿದ್ಯಾವಂತ ಯುವಜನರನ್ನು ಗುರುತಿಸಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ತರಬೇತಿಯನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ITIs, GTTC, KGTTI, ATDC ಗಳ ಮೂಲಕ ವಿವಿಧ ಅಲ್ಪಾವಧಿ ಮತ್ತು ಉತ್ಕೃಷ್ಟ ಕೌಶಲ್ಯ ತರಬೇತಿಯನ್ನು ನೀಡಿ ಅವರ ಉದ್ಯೋಗ ಸಾಮರ್ಥ್ಯವನ್ನು ಹಾಗೂ ಸಾಮಾಜಿಕ/ಆರ್ಥಿಕ ಸ್ಥಿತಿಗತಿಗಳನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಉದ್ಯೋಗಿ ಮುಖಿಗಳನ್ನಾಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

Devaraj Arasu Loan Contact Number: ಸಹಾಯವಾಣಿ ಸಂಖ್ಯೆ:080-22374832 ಮತ್ತು 8050770004 ಅಥವಾ 8050770005/ 08226-223587

Last Date of Devaraj Arasu Loan Scheme 2024-25

ಶೈಕ್ಷಣಿಕ ಸಾಲ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ Last Date: 31 August 2024

ಗಮನಿಸಿ: ಅರ್ಹ ಫಲಾಪೇಕ್ಷಿಗಳು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ-ಒನ್, ಕರ್ನಾಟಕ-ಒನ್ ಹಾಗೂ ಬೆಂಗಳೂರು-ಒನ್ ನಾಗರಿಕ ಕೇಂದ್ರಗಳಿಗೆ ಭೇಟಿ ನೀಡಿ ಈ ಕೆಳಗಿನ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸತಕ್ಕದು.

ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

Important Direct Links:

Devaraj Arasu Loan Scheme 2024-25 Notice PDFDownload
Official Webdbcdc.karnataka.gov.in
More UpdatesKarnatakaHelp.in

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ವಿವಿಧ ಸಹಾಯಧನ ಯೋಜನೆಗಳಿಗೆ ಅರ್ಜಿ ಆಹ್ವಾನ| KVLDCL.Karnataka.Gov.In Loan Scheme

ಗಂಗಾ ಕಲ್ಯಾಣ ಉಚಿತ ಬೋರ್‌ವೇಲ್ ಯೋಜನೆ ಅರ್ಜಿ ಸಲ್ಲಿಕೆ ಪ್ರಾರಂಭ | Ganga Kalyana Yojane Online Application 2024 Apply Online

ಸ್ವಾವಲಂಬಿ ಸಾರಥಿ ಅರ್ಜಿ ಸಲ್ಲಿಕೆ ಪ್ರಾರಂಭ | Swavalambi Sarathi 2024 Karnataka Apply Online

ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ | Karnataka Free Sewing Machine Scheme Apply Online

‘ಐರಾವತ ಯೋಜನೆ’ 5.00 ಲಕ್ಷ ಸಹಾಯಧನ | Airavata Scheme Karnataka Online Application 2024

FAQs

How to Apply For Devaraj Arasu Loan Scheme 2024-25?

Apply online through Seva Sindhu Portal at Bangalore-One/Karnataka-One/Atalji Janasnehi Kendra and Civil Service Centers.