ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ವತಿಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಶುಶ್ರೂಷಣಾಧಿಕಾರಿ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಿದೆ.
ಒಟ್ಟು 55 ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದೆ. ಆಸಕ್ತರು ಜನವರಿ 27ರಿಂದ ಸಂಘದ ಕಚೇರಿಯಲ್ಲಿ ಜರುಗಲಿರುವ ಸಂದರ್ಶನಕ್ಕೆ ನಿಗದಿತ ದಾಖಲೆಗಳೊಂದಿಗೆ ಹಾಜರಾಗುವ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಬಹುದಾದ ಪ್ರಮುಖ ದಿನಾಂಕಗಳು – ಜನವರಿ 27, ಫೆಬ್ರವರಿ 02, 09, 16, 23, ಮಾರ್ಚ್ 02, 09, 16 ದಿನಾಂಕಗಳಂದು ಮಾತ್ರ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮಾರ್ಚ್ 16, 2026
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ನರ್ಸಿಂಗ್ ಶಾಲೆಯಲ್ಲಿ ಜಿಎನ್ಎಂ/ಬಿ.ಎಸ್ಸಿ ಪೂರ್ಣಗೊಳಿಸಬೇಕು ಜೊತೆಗೆ ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ನೋಂದಣಿ ಆಗಿರಬೇಕು ಹಾಗೂ ಕಂಪ್ಯೂಟರ್ ಸಾಕ್ಷರತೆ ಜ್ಞಾನವನ್ನು ಹೊಂದಿರಬೇಕು.
ವಯೋಮಿತಿ:
ಗರಿಷ್ಠ ವಯೋಮಿತಿ – 45 ವರ್ಷಗಳು
ಆಯ್ಕೆ ವಿಧಾನ:
ಎನ್ಹೆಚ್ಎಂ ಮಾರ್ಗಸೂಚಿಗಳನ್ವಯ ರೋಸ್ಟರ್ ಕಮ್ ಮೇರಿಟ್ ಅನ್ವಯ ದಾಖಲಾತಿ ಪರಿಶೀಲನೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಸಂಬಳ:
ಶುಶ್ರೂಷಣಾಧಿಕಾರಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ₹18,714ವರೆಗೆ ಮಾಹೆಯಾನ ವೇತನವನ್ನು ನೀಡಲಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳು ಕಾರ್ಯನಿರ್ವಹಿಸಬೇಕಾದ ಸ್ಥಳಗಳು:
• ಸಾರ್ವಜನಿಕ ಆಸ್ಪತ್ರೆ ಆನೇಕಲ್-02 • ಸಿ.ವಿ ರಾಮನ್ ಆಸ್ಪತ್ರೆ-08 • ಕೆ.ಸಿ ಜನರಲ್ ಆಸ್ಪತ್ರೆ-21 • ಸಾರ್ವಜನಿಕ ಆಸ್ಪತ್ರೆ ಜಯನಗರ-19 • ಸಾರ್ವಜನಿಕ ಆಸ್ಪತ್ರೆ ಕೆ.ಆರ್ ಪುರಂ-03 • ಸಾರ್ವಜನಿಕ ಆಸ್ಪತ್ರೆ ಯಲಹಂಕ-02
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಅರ್ಜಿ ಸಲ್ಲಿಸುವುದು ಹೇಗೆ.?
ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು – ಜನವರಿ 27, ಫೆಬ್ರವರಿ 02, 09, 16, 23, ಮಾರ್ಚ್ 02, 09, 16 ದಿನಾಂಕಗಳಂದು ಬೆಳ್ಳಿಗೆ 10.30 ರಿಂದ ಮದ್ಯಾಹ್ನ 1 ಗಂಟೆ ಒಳಗಾಗಿ ತಮ್ಮ ಮೂಲ ದಾಖಲಾತಿ ಹಾಗೂ ನಕಲು ಪ್ರತಿಗಳೊಂದಿಗೆ ಈ ಕೆಳಗೆ ನೀಡಲಾಗಿರುವ ವಿಳಾಸದಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಪಡೆದು ನೋಂದಣಿ ಮಾಡಿಕೊಳ್ಳಬಹುದು.
ವಿಳಾಸ: ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಆವರಣ, ಹಳೇ ಟಿ.ಬಿ ಆಸ್ಪತ್ರೆ, ಹಳೇ ಮದ್ರಾಸ್ ರಸ್ತೆ, ಸ್ವಾಮಿ ವಿವೇಕನಂದ ಮೇಟ್ರೋ ನಿಲ್ದಾಣದ ಹತ್ತಿರ, ಇಂದಿರಾನಗರ, ಬೆಂಗಳೂರು-38