ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇರ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳುವ ಮೂಲಕ ಹುದ್ದೆಗಳನ್ನು ಪಡೆದುಕೊಳ್ಳಬಹುದಾಗಿದೆ.
ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ PM-ARHIM ಯೋಜನೆಯ ಅಡಿಯಲ್ಲಿ 2024-25 ನೇ ಸಾಲಿಗೆ ವಿವಿಧ ತಜ್ಞ ವೈದ್ಯರು, ಶುಶ್ರೂಷಕ ಅಧಿಕಾರಿ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೋಲರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗವಹಿಸಬೇಕು. ಈ ಲೇಖನದಲ್ಲಿ DHFWS Kolar Recruitment 2024 ಕುರಿತು ಹೆಚ್ಚು ಮಾಹಿತಿ ನೀಡಲಾಗಿದ್ದು, ಗಮನವಿಟ್ಟು ಓದಿರಿ.
Shortview of DHFWS Kolar Vacancy 2024
Organization Name – District Health and Family Welfare Society
Post Name – Various posts
Total Vacancy – 79
Application Process: Online
Job Location – Kolar
ಪ್ರಮುಖ ದಿನಾಂಕಗಳು:
- ಸಂದರ್ಶನ ನಡೆಯುವ ದಿನಾಂಕ – ಅಗಸ್ಟ್ 30, 2024
- ಸಂದರ್ಶನದ ಸಮಯ – ಬೆಳಗ್ಗೆ 10 ರಿಂದ ಸಂಜೆ 4ರ ವರೆಗೆ
ವಿದ್ಯಾರ್ಹತೆ:
ವೈದ್ಯ ತಜ್ಞ ಹುದ್ದೆಗಳಿಗೆ – MBBS ಪದವಿಯ ಜೊತೆ ಕರ್ನಾಟಕ ಮೆಡಿಕಲ್ ಕೌನ್ಸಿಲಿಂಗ್ ನಲ್ಲಿ ನೊಂದಣಿಯಾಗಿರಬೇಕು.
ಶುಶ್ರೂಷಕ ಅಧಿಕಾರಿ ಹುದ್ದೆಗಳಿಗೆ – ಮಾನ್ಯತೆ ಪಡೆದ ನರ್ಸಿಂಗ್ ಶಾಲೆಯಲ್ಲಿ ಜಿಎನ್‌ಎಂ | ಬಿ.ಎಸ್.ಸಿ ನರ್ಸಿಂಗ್ ನಲ್ಲಿ ಕೆಎನ್‌ಸಿ ನೋಂದಣಿ ಹೊಂದಿರಬೇಕು. ಹಾಗೂ ಕಂಪ್ಯೂಟರ್ ಸಾಕ್ಷರತೆಯನ್ನು ಹೊಂದಿರಬೇಕು.
ಪ್ರಯೋಗಾಶಾಲಾ ತಂತ್ರಜ್ಞ ಹುದ್ದೆಗಳಿಗೆ – ಎಸ್‌ಎಸ್‌ಎಲ್‌ಸಿ/ಪಿಯುಸಿ ಮತ್ತು ಪ್ರಯೋಗಶಾಲಾ ತಂತ್ರಜ್ಞತೆಯ ಡಿಪ್ಲೋಮಾ ಉತ್ತೀರ್ಣ ಹೊಂದಿರಬೇಕು. ಕಡ್ಡಾಯವಾಗಿ ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯ ನೋಂದಣಿ ಮತ್ತು
- ಕಂಪ್ಯೂಟರ್ ಸಾಕ್ಷರತೆಯನ್ನು ಹೊಂದಿರಬೇಕು.
ಗಮನಿಸಿ: ಹುದ್ದೆಗಳಿಗೆ ಆಧಾರಿತವಾಗಿ ಶೈಕ್ಷಣಿಕ ಅರ್ಹತೆ ನಿಗದಿಪಡಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಲೇಖನದ ಕೊನೆಯಲ್ಲಿ ನೀಡಲಾಗಿರುವ ಅಧಿಕೃತ ಅಧಿಸೂಚನೆ ಓದಲು ಸೂಚನೆ..
ವಯಸ್ಸಿನ ಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯು 60 ವರ್ಷಗಳ ಒಳಗಿರಬೇಕು.
ವೇತನ ವಿವರ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ₹12,600 ರಿಂದ ₹1,00,000 ನೀಡಲಾಗುತ್ತದೆ.
( ಹುದ್ದೆಗಳ ಅನುಸಾರ ವೇತನ ಶ್ರೇಣಿಯು ಬದಲಾವಣೆ ಆಗುತ್ತದೆ)
ಆಯ್ಕೆ ವಿಧಾನ:
ರೋಸ್ಟರ್ ಕಮ್ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
How to Apply DHFWS Kolar Recruitment 2024
ಅರ್ಜಿ ಸಲ್ಲಿಸುವ ಪ್ರಕ್ರಿಯೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ನಿರ್ದಿಷ್ಟ ಪ್ರಕ್ರಿಯೆಯನ್ನು ತಿಳಿಸಿಲ್ಲ ನಡೆಯುವ ಮೂಲ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಭಾಗಿಯಾಗುವ ಮೂಲಕ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಸಂದರ್ಶನ ನಡೆಯುವ ಸ್ಥಳ – ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣಾಧಿಕಾರಿಗಳ ಕಛೇರಿ ಕೆ.ಎನ್.ಟಿ.ಬಿ. ಸ್ಯಾನಿಟೋರಿಯಂ ಆಸ್ಪತ್ರೆ ಆವರಣ, ಬಂಗಾರಪೇಟೆ ರಸ್ತೆ, ಕೋಲಾರ
Important Direct Links:
Official Notification PDF | Download |
Official Website | kolar.nic.in |
More Updates | Karnataka Help.in |