GATE 2026ರ ಕೀ ಉತ್ತರ ಪ್ರಕಟ

Published on:

ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ ಗುವಾಹಟಿ ಸಂಸ್ಥೆಯು ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್ (GATE) 2026ರ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಕೀ ಉತ್ತರವನ್ನು ಭಾನುವಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಫೆಬ್ರವರಿ 07, 08, 14 ಮತ್ತು 15 ರಂದು ದೇಶಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿತ್ತು. ಅಭ್ಯರ್ಥಿಗಳು ಕೀ ಉತ್ತರವನ್ನು https://goaps.iitg.ac.in/loginಗೆ ಭೇಟಿ ಪರಿಶೀಲಿಸಬಹುದು.

GATE 2026ರ ಕೀ ಉತ್ತರ ಪರಿಶೀಲಿಸುವ ವಿಧಾನ

• ಮೊದಲಿಗೆ ವಿದ್ಯಾರ್ಥಿಗಳು IITG ಅಧಿಕೃತ ಜಾಲತಾಣ https://gate2026.iitg.ac.in/index.html ಕ್ಕೆ ಭೇಟಿ ನೀಡಿ.

• ನಂತರ *ಅಧಿಸೂಚನೆಗಳು* ವಿಭಾಗದಲ್ಲಿ ನೀಡಲಾಗಿರುವ “ಅಭ್ಯರ್ಥಿಯ ಪ್ರತಿಕ್ರಿಯೆ URL, ಮಾಸ್ಟರ್ ಪ್ರಶ್ನೆ ಪತ್ರಿಕೆ ಮತ್ತುಮಾಸ್ಟರ್ ಪ್ರಶ್ನೆ ಪತ್ರಿಕೆಯ ಉತ್ತರ ಕೀಲಿಯನ್ನು GOAPS ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.” ಲಿಂಕ್ ಮೇಲೆ ಕ್ಲಿಕ್ ಮಾಡಿ.

• ಬಳಿಕ ಅಭ್ಯರ್ಥಿಯ ಲಾಗಿನ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.

• “ಗೇಟ್ 2026ರ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಕೀ ಉತ್ತರ” ಆಯ್ಕೆ ಮಾಡಿ.

• ಪ್ರಕಟಿತ ಕೀ ಉತ್ತರಗಳೊಂದಿಗೆ ನಿಮ್ಮ ಉತ್ತರಗಳನ್ನು ಪರಿಶೀಲಿಸಿಕೊಳ್ಳಿ.

• ನಂತರ ಸದರಿ ಪ್ರಕಟಿತ ಕೀ ಉತ್ತರಗಳಲ್ಲಿ ಆಕ್ಷೇಪಣೆಗಳಿದ್ದಲ್ಲಿ, ಆಕ್ಷೇಪಣೆ ಸಲ್ಲಿಕೆ ಆಯ್ಕೆ ಮಾಡಿ.

• ಆಕ್ಷೇಪಣೆ ಸಲ್ಲಿಸಲು ಕೇಳಲಾಗುವ ಅರ್ಜಿ ಶುಲ್ಕ ಪಾವತಿಸಿ ಸರಿಯಾದ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಬಹುದು.

Important Direct Links:

GATE 2026 Answer Key Check LinkLogin and Check
Official Websitehttps://gate2026.iitg.ac.in/
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

2 thoughts on “GATE 2026ರ ಕೀ ಉತ್ತರ ಪ್ರಕಟ”

Leave a Comment