ಯುಜಿ-ಸಿಇಟಿ 2026: ನೋಂದಣಿ; ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಅರ್ಜಿ ಸಲ್ಲಿಕೆಗೆ ಫೆ.27ರ ಗಡುವು

Published on:

ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2026ನೇ ಸಾಲಿಗೆ ಇಂಜಿನಿಯರಿಂಗ್‌, ಕೃಷಿವಿಜ್ಞಾನ, ಪಶುಸಂಗೋಪನೆ, ಫಾರ್ಮಸಿ, ಬಿ.ಎಸ್ಸಿ(ನರ್ಸಿಂಗ್) ಸೇರಿ ಇತರೆ ವೃತ್ತಿಪರ ಕೋರ್ಸಗಳ ಪ್ರವೇಶಕ್ಕಾಗಿ ನಡೆಸುವ ಪದವಿಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆ(ಯುಜಿಸಿಇಟಿ)ಯ ನೋಂದಣಿಯ ಕೊನೆಯ ದಿನಾಂಕವನ್ನು ಫೆ.27ರವರೆಗೆ ವಿಸ್ತರಿಸಿದೆ.

ಏ.22, 23 ಮತ್ತು 24ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯಗಳಲ್ಲಿ ಅಭ್ಯಸಿಸಿಸುತ್ತಿರುವ/ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ನೋಂದಣಿಗಾಗಿ https://cetonline.karnataka.gov.in/onlineapp2026/forms/login.aspxಗೆ ಭೇಟಿ ನೀಡಿ. ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಆಧಾರ್ ಕಾರ್ಡ್ ಹಾಗೂ ಆರ್‌ಡಿ ಪ್ರಮಾಣ ಪತ್ರಗಳಲ್ಲಿ ಇರುವ ಹೆಸರು ಒಂದೇ ರೀತಿಯಲ್ಲಿ ಇರಬೇಕು ಎಂದು ಕೆಇಎ ತಿಳಿಸಿದೆ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭದ ದಿನಾಂಕ – ಜನವರಿ 17
  • ಅರ್ಜಿ ಸಲ್ಲಿಸಲು ಕೊನೆಯ ದಿನ – ಫೆಬ್ರವರಿ 27
    • ‌ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ – ಮಾರ್ಚ್‌ 03

ಶೈಕ್ಷಣಿಕ ಅರ್ಹತೆ:

ದ್ವಿತೀಯ ಪಿಯುಸಿ/ತತ್ಸಮಾನ ಪರೀಕ್ಷೆಯಲ್ಲಿ ಭೌತಶಾಸ್ತ್ರ/ಗಣಿತ/ರಸಾಯನಶಾಸ್ತ್ರ/ಬಯೋ-ಟೆಕ್ನಾಲಜಿ/ಜೀವಶಾಸ್ತ್ರ/ಎಲೆಕ್ಟ್ರಾನಿಕ್ಸ್ /ಕಂಪ್ಯೂಟರ್ ಸೈನ್ಸ್‌ ಅಥವಾ ಇತರೆ ಸಂಬಂಧಿತ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಐಚ್ಛಿಕ ವಿಷಯವನ್ನಾಗಿ ಹಾಗೂ ಇಂಗ್ಲೀಷನ್ನು ಒಂದು ಭಾಷಾ ವಿಷಯವನ್ನಾಗಿ ಅಭ್ಯಸಿಸಿರಬೇಕು.

ಹಾಗೂ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಆಯಾ ನಿಗದಿತ ವಿಷಯದಲ್ಲಿ ತೇರ್ಗಡೆ ಹೋಮದಿರಬೇಕು. ಹೆಚ್ಚಿನ ಮಾಹಿತಿಗಾಗಿ ಕೆಇಎ ಹೊರಡಿಸಿದ ಮಾಹಿತಿ ಬುಲೆಟಿನ್‌ ಓದಿರಿ.

ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳ ವಿವರ:

➛ ವಿದ್ಯಾರ್ಥಿಯ ಫೋಟೋ, ವಿದ್ಯಾರ್ಥಿಯ ಸಹಿ
➛ 10ನೇ ತರಗತಿ ಅಂಕಪಟ್ಟಿ
➛ ಆಧಾರ್ ಕಾರ್ಡ್ ಮತ್ತು ಜಾತಿ, ಆದಾಯ ಪ್ರಮಾಣ ಪತ್ರಗಳು
➛ ವಿದ್ಯಾರ್ಥಿಯ ವಾಟ್ಸಪ್ ಹೊಂದಿರುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸ
➛ ಕನ್ನಡ ಮಾಧ್ಯಮ/ಗ್ರಾಮೀಣ ಮಾಧ್ಯಮ/371ಜೆ/ಇತರೆ ಪ್ರಮಾಣ ಪತ್ರಗಳು (ಅನ್ವಯಿಸಿದರೆ)

ಯುಜಿಸಿಇಟಿ 2026ರ ಪ್ರವೇಶ ಪರೀಕ್ಷೆಯ ವೇಳಾಪಟ್ಟಿ

ದಿನಾಂಕವಿಷಯದ ಹೆಸರುಪರೀಕ್ಷಾ ಸಮಯಅಂಕ
ಏಪ್ರಿಲ್‌ 22
(ಗುರುವಾರ)
ಭೌತಶಾಸ್ತ್ರಬೆಳಿಗ್ಗೆ 10.30 ರಿಂದ 11.50ರವರೆಗೆ60
ರಸಾಯನಶಾಸ್ತ್ರಮಧ್ಯಾಹ್ನ 02.30 ರಿಂದ 03.50ರವರೆಗೆ60
ಏಪ್ರಿಲ್‌ 24
(ಶುಕ್ರವಾರ)
ಗಣಿತಶಾಸ್ತ್ರಬೆಳಿಗ್ಗೆ 10.30 ರಿಂದ 11.50ರವರೆಗೆ60
ಜೀವಶಾಸ್ತ್ರಮಧ್ಯಾಹ್ನ 02.30 ರಿಂದ 03.50ರವರೆಗೆ60

ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ(ಬೆಂಗಳೂರು, ಬೆಳಗಾವಿ, ವಿಜಯಪುರ ಮತ್ತು ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ)

ದಿನಾಂಕಸಮಯಅಂಕ
ಏಪ್ರಿಲ್‌ 22ಬೆಳಿಗ್ಗೆ 10.30 ರಿಂದ 11.30ರ ವರೆಗೆ4ನೇ ತರಗತಿ ಮಟ್ಟದ50

ಅರ್ಜಿ ಸಲ್ಲಿಕೆ ಹೀಗೆ..

ಹಂತ-1 ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kea/indexnewಕ್ಕೆ ಭೇಟಿ ನೀಡಿ

ಹಂತ-2 ನಂತರ ಮುಖಪುಟಪ್ರವೇಶಗಳು ವಿಭಾಗದಡಿ ↦ ಯುಜಿ ಸಿಇಟಿ-2026 ↦ “UGCET – 2026 ಆನ್‌ಲೈನ್ ಅರ್ಜಿ ಲಿಂಕ್. 16/01/2026” ಶೀರ್ಷಿಕೆ ಲಿಂಕ್‌ ಮೇಲೆ ಒತ್ತುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

Ug-Cet 2026 Online Application Form
Ugcet 2026 Application Form

Important Direct Links:

UGCET 2026 Online Application Last Date Extension Notice PDF (21/02/2026)Download
UGCET 2026 Online Application Last Date Extension Notice PDF (13/02/2026)Download
UGCET 2026 Information Bulletin PDFDownload
Online Application Form LinkApply Now
Official Websitehttps://cetonline.karnataka.gov.in/kea
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

2 thoughts on “ಯುಜಿ-ಸಿಇಟಿ 2026: ನೋಂದಣಿ; ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ”

Leave a Comment