ಮೈಸೂರು ಜಿಲ್ಲೆಯಲ್ಲಿನ ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ 16 ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನದ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ತಜ್ಞ ವೈದ್ಯಾಧಿಕಾರಿಗಳು, ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳು, ಹಿರಿಯ ವೈದ್ಯಾಧಿಕಾರಿಗಳು ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಈ ಲೇಖನದಲ್ಲಿ ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
Highlights of Employment News
Organization Name – District Health and Family Welfare Society
Post Name – Various posts
Total Vacancy – 19
Application Process – Walk-in-Interview
Job Location – Mysore
ಖಾಲಿ ಇರುವ ಹುದ್ದೆಗಳ ವಿವರ:
- ತುರ್ತು ಚಿಕಿತ್ಸ್ ವೈದ್ಯಾಧಿಕಾರಿಗಳು, ಹಿರಿಯ ವೈದ್ಯಾಧಿಕಾರಿಗಳು ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು – 13 ಹುದ್ದೆಗಳು
- ತಜ್ಞ ವೈದ್ಯಾಧಿಕಾರಿಗಳು – 3 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳು, ಹಿರಿಯ ವೈದ್ಯಾಧಿಕಾರಿಗಳು ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗೆ – ಎಂ.ಬಿ.ಬಿ.ಎಸ್. ತೇರ್ಗಡೆ(ಹೌಸ್‌ಮನ್ ಶಿಫ್ ಪೂರೈಸಿರಬೇಕು)
ತಜ್ಞ ವೈದ್ಯಾಧಿಕಾರಿಗಳ ಹುದ್ದೆಗೆ – ಎಂ.ಬಿ.ಬಿ.ಎಸ್. ಜೊತೆಗೆ ಸ್ನಾತಕೋತ್ತರ ( ಜನರಲ್ ಮೆಡಿಸಿನ್ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಹಾಗೂ ಅರವಳಿಕೆ ತಜ್ಞರು) ವಿದ್ಯಾರ್ಹತೆಯನ್ನು ಪಡೆದಿರಬೇಕು.
ವಯೋಮಿತಿ:
- ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ – 42 ವರ್ಷಗಳು
- ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ – 45 ವರ್ಷ
- ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಗರಿಷ್ಠ 47 ವರ್ಷಗಳು
ಅಗತ್ಯವಿರುವ ದಾಖಲಾತಿಗಳು:
ಅರ್ಹರು ತಮ್ಮ ಎಲ್ಲಾ ಧೃಡೀಕೃತ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ.
ವೇತನ:
ಮಾಸಿಕ ಸಂಚಿತ ವೇತನ, ಪ್ರೋತ್ಸಾಹಧನ ರೂ.60,000/- + 2000/- ನೀಡಲಾಗುತ್ತದೆ.
ಜನರಲ್ ಮೆಡಿಸನ್ ಹುದ್ದೆಗೆ – ಪ್ರೋತ್ಸಾಹಧನ ರೂ.80,000/-(ಎಂಬತ್ತು ಸಾವಿರ) + 10,000/-
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು ಹಾಗೂ ಅರವಳಿಕೆ ತಜ್ಞರು ಹುದ್ದೆಗೆ – ರೂ.1,40,000/- (ಒಂದು ಲಕ್ಷದ ನಲವತ್ತು ಸಾವಿರ) ಮಾಸಿಕ ಸಂಚಿತ ವೇತನ ಮಾತ್ರ ನೀಡಲಾಗುವುದು.
ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ನೇರ ಸಂದರ್ಶನ ನಡೆಯುವ ದಿನಾಂಕ ಹಾಗೂ ಸ್ಥಳ
ಆಸಕ್ತ ಅಭ್ಯರ್ಥಿಗಳು ಮೇ 12 ರಂದು ಬೆಳಗ್ಗೆ 10.30 ಗಂಟೆಗೆ ಮೈಸೂರಿನ ನಜರ್‌ಬಾದ್ ನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ನಡೆಸಲಾಗುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮತ್ತು ಸದಸ್ಯ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Important Direct Links:
Official Website | mysore.nic.in |
More Updates | Karnataka Help.in |