ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ(ನಿ) (ಮೈಸೂರು) ವತಿಯಿಂದ 2025-26ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್ ಹಾಗೂ ಪಾರ್ಸಿ ಜನಾಂಗದವರಿಗೆ ಅರಿವು ವಿದ್ಯಾಭ್ಯಾಸ ಸಾಲ(Education Loan) ಯೋಜನೆಯಡಿಯಲ್ಲಿ ನಿಗಮದಿಂದ ಸಾಲ ಸೌಲಭ್ಯಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA Via/CET/NEET) ಎಂ.ಬಿ,ಬಿ,ಎಸ್, ಬಿ.ಡಿ,ಎಸ್, ಬಿ.ಆಯುಷ್, ಬ್ಯಾಚುಲರ್ ಆಫ್ ಆರ್ಕ್, ಬಿ.ಇ/ ಬಿ.ಟೆಕ್, ಪಾರ್ಮಸ್ಸಿ, ಅಗ್ರಿಕಲ್ಚರ್ ಸೈನ್ಸ್ ಹಾಗೂ ವೆಟರ್‌ನರಿ ವ್ಯಾಸಂಗಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಾಲವನ್ನು ನೀಡಲಾಗುತ್ತದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆಯವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
CET/NEET ಮುಖೇನ ಪ್ರವೇಶ ಪಡೆಯ ಬಯಸುವ ವಿದ್ಯಾರ್ಥಿಗಳಿಗೆ ‘ಅರಿವು’ ಯೋಜನೆಯಡಿ ಶೈಕ್ಷಣಿಕ ಸಾಲವನ್ನು ಪಡೆಯಲು ಅರ್ಹರಾಗಿರುತ್ತಾರೆ.
ಎಂ.ಬಿ,ಬಿ,ಎಸ್, ಬಿ.ಡಿ,ಎಸ್, ಬಿ.ಆಯುಷ್, ಬ್ಯಾಚುಲರ್ ಆಫ್ ಆರ್ಕ್, ಬಿ.ಇ/ ಬಿ.ಟೆಕ್, ಪಾರ್ಮಸ್ಸಿ, ಅಗ್ರಿಕಲ್ಚರ್ ಸೈನ್ಸ್ ಹಾಗೂ ವೆಟರ್‌ನರಿ ವ್ಯಾಸಂಗಗಳಿಗೆ ಆಯ್ಕೆಯಾದ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
ಪಿಯುಸಿ ಅಂಕಪಟ್ಟಿ
ಆಧಾರ್‌ಕಾರ್ಡ್
ಭಾವಚಿತ್ರ 4
ಸಿಇಟಿ ಹಾಲ್‌ಟಿಕೆಟ್ ಪ್ರತಿಗಳು
ನೋಟರಿ ಮಾಡಿಸಿದ ರೂ.100/-ರ ಛಾಪಾ ಕಾಗದದಲ್ಲಿ ಇಂಡೆಮ್ನಿಟಿ ಬಾಂಡ್
ಅರ್ಜಿ ಸಲ್ಲಿಸುವ ವಿಧಾನ
ನಿಗಮದ ವೆಬ್‌ಸೈಟ್ kmdconline.karnataka.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.
ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಕಂಪ್ಯೂಟರ್‌ನಲ್ಲಿ ಭರ್ತಿ ಮಾಡಿದ ಕೂಡಲೇ ಅರ್ಜಿಯನ್ನು ಪ್ರಿಂಟ್ ಔಟ್ ಪಡೆದು.
ಕ್ಯೂಆರ್ ಕೋಡ್ ಹೊಂದಿದ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಆಧಾರ್‌ಕಾರ್ಡ್, ಭಾವಚಿತ್ರ 4 ಸಿಇಟಿ ಹಾಲ್‌ಟಿಕೆಟ್ ಪ್ರತಿಗಳು ಮತ್ತು ನೋಟರಿ ಮಾಡಿಸಿದ ರೂ.100/-ರ ಛಾಪಾ ಕಾಗದದಲ್ಲಿ ಇಂಡೆಮ್ನಿಟಿ ಬಾಂಡ್ ಈ ಎಲ್ಲಾ ದಾಖಲಾತಿಗಳನ್ನು ಈ ಕೆಳಗಿನ ಕಚೇರಿಗೆ ತಲುಪಿಸಬೇಕು.
ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ(ನಿ) 1ನೇ ಮಹಡಿ, ಮೌಲಾನ್ ಆಜಾ಼ದ್ ಭವನ, ಶೋಬಾ ಗಾರ್ಡನ್ ಪಕ್ಕ, ಭರತ್‌ನಗರ, ಬೆಂಗಳೂರು-ಮೈಸೂರು ರಸ್ತೆ, ಮೈಸೂರು ಜಿಲ್ಲೆ
ಹೆಚ್ಚಿನ ಮಾಹಿತಿಗಾಗಿ – ಕಛೇರಿಯ ದೂರವಾಣಿ ಸಂಖ್ಯೆ: 0821-2430080 ಅನ್ನು ಸಂಪರ್ಕಿಸಬಹುದಾಗಿದೆ.