ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್ ಯೋಜನೆ (PM-SYM) ಒಂದು ಸ್ವಯಂಪ್ರೇರಿತ ಮತ್ತು ಕೊಡುಗೆ ಆಧಾರಿತ ಪಿಂಚಣಿ ಯೋಜನೆಯಾಗಿದ್ದು, ಇದನ್ನು ಅಸಂಘಟಿತ ಕಾರ್ಮಿಕರ ಅಡಿಯಲ್ಲಿ ಬರುವ ಅಡಿಯಲ್ಲಿ ಬರುವವರು ಹೆಚ್ಚಾಗಿ ಗೃಹಾಧಾರಿತ ಕಾರ್ಮಿಕರು, ರಸ್ತೆ ಬದಿಯ ವ್ಯಾಪಾರಿಗಳು, ಮಧ್ಯಾಹ್ನದ ಊಟ ತಯಾರು ಮಾಡುವ ಕೆಲಸಗಾರರು, ಭಾರ ಹೊರುವವರು, ಇಟ್ಟಿಗೆ ಕೆಲಸಗಾರರು, ಚಮ್ಮಾರರು, ಚಿಂದಿ ತೆಗೆಯುವವರು, ಗೃಹ ಕಾರ್ಮಿಕರು, ರಿಕ್ಷಾ ಎಳೆಯುವವರು, ಕೃಷಿ ಕಾರ್ಮಿಕರು, ನಿರ್ಮಾಣ ಕಾರ್ಮಿಕರು, ಬೀಡಿ ಕಾರ್ಮಿಕರು, ಚರ್ಮದ ಕೆಲಸಗಾರರು, ಕೈಮಗ್ಗ ಕಾರ್ಮಿಕರು ಇತ್ಯಾದಿ ಆಗಿರುತ್ತಾರೆ. 60 ವರ್ಷ ವಯಸ್ಸಿನ ನಂತರ ಖಚಿತವಾದ ಮಾಸಿಕ ಪಿಂಚಣಿಯನ್ನು ಒದಗಿಸಲು 2019 ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯು ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಈ ಯೋಜನೆಯ ಅಡಿಯಲ್ಲಿ ಚಂದಾದಾರರು 60 ವರ್ಷ ದಾಟಿದ ನಂತರ ತಿಂಗಳಿಗೆ ಕನಿಷ್ಠ ₹3,000 ಪಿಂಚಣಿಯನ್ನು ಕುಟುಂಬ ಪಿಂಚಣಿಯಾಗಿ ಪಡೆಯುತ್ತಾರೆ. ಸರ್ಕಾರವು ಅರ್ಹ ಚಂದಾದಾರರು ತುಂಬಿದ ಕಂತಿನಷ್ಟು ಸಮಾನ ಮೊತ್ತವನ್ನು ನೀಡುತ್ತದೆ. ಹಾಗಾದರೆ ಈ ಯೋಜನೆಯ ಪ್ರಯೋಜನಗಳೇನು?, ಯಾರು ಈ ಯೋಜನೆಗೆ ಅರ್ಹರಾಗುತ್ತಾರೆ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ ಎಂಬುವುದರ ಕುರಿತು ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಗಮನವಿಟ್ಟು ಓದಿರಿ.
ಯಾವುದೇ ಉದ್ಯೋಗಿ ಪಿಂಚಣಿ ಯೋಜನೆ (EPF, NPS ಇತ್ಯಾದಿ) ಅಥವಾ ಎಸ್‌ಐಸಿ ಅಡಿಯಲ್ಲಿ ನೊಂದಣಿ ಆಗಿರಬಾರದು.
₹15,000 ವಾರ್ಷಿಕ ಆದಾಯ ಮಿತಿಯನ್ನು ಮೀರುವಂತಿಲ್ಲ.
Benefits of the PM Shram Yogi Maandhan Yojana(PM-SYM)
ಯೋಜನೆಯ ಪ್ರಯೋಜನಗಳು;
60 ವರ್ಷ ವಯಸ್ಸಿನ ನಂತರ ಖಚಿತವಾದ ಮಾಸಿಕ ಪಿಂಚಣಿ ₹3000
ಮರಣದ ಸಂದರ್ಭದಲ್ಲಿ, ಪತ್ನಿಗೆ 50% ಮಾಸಿಕ ಪಿಂಚಣಿ
ಒಟ್ಟು ₹6000 ಮಾಸಿಕ ಪಿಂಚಣಿಗೆ ಅರ್ಹರಾದ ದಂಪತಿಗಳು
ಅಂಗವೈಕಲ್ಯದ ಸಂದರ್ಭದಲ್ಲಿ, ಖಚಿತವಾದ ಮಾಸಿಕ ಪಿಂಚಣಿ ಮತ್ತು ಅಂಗವೈಕಲ್ಯ ಪ್ರಯೋಜನಗಳು
ಅರ್ಜಿದಾರರು 60 ವರ್ಷ ವಯಸ್ಸನ್ನು ತಲುಪಿದ ನಂತರ, ಅವನು/ಅವಳು ಪಿಂಚಣಿ ಮೊತ್ತವನ್ನು ಕ್ಲೈಮ್ ಮಾಡಬಹುದು. ಪ್ರತಿ ತಿಂಗಳು ನಿಗದಿತ ಪಿಂಚಣಿ ಮೊತ್ತವನ್ನು ಆಯಾ ವ್ಯಕ್ತಿಯ ಪಿಂಚಣಿ ಖಾತೆಗೆ ಜಮಾ ಮಾಡಲಾಗುತ್ತದೆ.
ಪ್ರೀಮಿಯಂಗಳು:
18 ರಿಂದ 40 ವರ್ಷದೊಳಗಿನ ಅರ್ಜಿದಾರರು 60 ವರ್ಷ ವಯಸ್ಸಿನವರೆಗೆ ಮಾಸಿಕ ₹55 ರಿಂದ ₹200 ರೂಪಾಯಿಗಳವರೆಗೆ ಪ್ರತಿ ತಿಂಗಳು ವಂತಿಕೆ ಕಟ್ಟಬೇಕು.
ನೀವು ಕಟ್ಟಿರುವ ವಂತಿಕೆ ನಿಗದಿತ ಬಡ್ಡಿಯೊಂದಿಗೆ ಹಿಂಪಡೆಯಲು ಅರ್ಹರಾಗಿರುತ್ತಾರೆ.
ಗಮನಿಸಿ: ವಯೋಮಿತಿಯ ಆಧಾರಿತವಾಗಿ ಕಟ್ಟುವ ಹಣ ನಿಗಧಿಪಡಿಸಲಾಗಿದೆ.. ಕೆಳಗೆ ನೀಡಲಾದ ಚಾರ್ಟ್ ಓದಿ..
Eshram Card Pension Scheme
Documents required of PM Shram Yogi Maandhan Yojana
ಆಧಾರ್ ಕಾರ್ಡ್
ಇ ಶ್ರಮ್ ಕಾರ್ಡ್
ಮೊಬೈಲ್ ನಂಬರ್
ಉಳಿತಾಯ ಬ್ಯಾಂಕ್ ಖಾತೆ (Savings)
ಇತರೆ ದಾಖಲಾತಿಗಳು
How to Apply for eShram Card Pension Scheme
ಅರ್ಹ ಫಲಾನುಭವಿಗಳು ನಿಮಗೆ ಹತ್ತಿರದ “ಸಾಮಾನ್ಯ ಸೇವಾ ಕೇಂದ್ರ (CSC)” ಗಳಲ್ಲಿ ಯೋಜನೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಂತಿಮ ನುಡಿ: ನಾವು ನೀಡಿದ ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.