ಗೃಹ ವ್ಯವಹಾರಗಳ ಸಚಿವಾಲಯದ ರಾಷ್ಟ್ರೀಯ ಗುಪ್ತಚರ ಗ್ರಿಡ್(NATGRID)ನಲ್ಲಿ 23 ವಿವಿಧ ನಿರ್ದೇಶಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ನಿರ್ದೇಶಕ 01 ಹುದ್ದೆ, ಉಪನಿರ್ದೇಶಕ 05 ಹುದ್ದೆ, ಸಹಾಯಕ ನಿರ್ದೇಶಕ 17 ಹುದ್ದೆ ಅಭ್ಯರ್ಥಿಗಳನ್ನು ಡೆಪ್ಯೂಟೇಶನ್ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದ್ದು, ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅರ್ಜಿದಾರರು ಅಧಿಕೃತ ಜಾಲತಾಣ ದಲ್ಲಿ ಪ್ರಚುರಪಡಿಸಿರುವ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ, “ಅಧೀನ ಕಾರ್ಯದರ್ಶಿ (estt), NATGRID, ಗೃಹ ವ್ಯವಹಾರಗಳ ಸಚಿವಾಲಯ, 1, ಅಂಧೇರಿಯಾ ಮೋರ್, ವಸಂತ್ ಕುಂಜ್ ರಸ್ತೆ, ನವದೆಹಲಿ-110074” ವಿಳಾಸಕ್ಕೆ ಏ.20ರೊಳಗೆ ತಲುಪಿಸಬೇಕು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಮಾರ್ಚ್ 06, 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಏಪ್ರಿಲ್ 20, 2026 (ಉದ್ಯೋಗ ಸುದ್ದಿಯಲ್ಲಿ ಪ್ರಕಟಿಸಿದ ದಿನಾಂಕದಿಂದ 45 ದಿನಗಳ ಒಳಗೆ)
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
ಅಭ್ಯರ್ಥಿಗಳು ಕೇಂದ್ರ ಸರ್ಕಾರ/ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶಗಳು/ ಸ್ವಾಯತ್ತ ಸಂಸ್ಥೆಗಳು/ಶಾಸನಬದ್ಧ ಸಂಸ್ಥೆಗಳು/ ಸಾರ್ವಜನಿಕ ವಲಯದ ಸಂಸ್ಥೆಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು/ಮಾನ್ಯತೆ ಪಡೆದ ಸಂಶೋಧನಾ ಸಂಸ್ಥೆಗಳಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರಬೇಕು.
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ ಅಥವಾ ಬಿ.ಇ/ಬಿ.ಟೆಕ್ ಪದವಿ ಪೂರ್ಣಗೊಳಿಸಿರಬೇಕು ಜೊತೆಗೆ ಸಂಬಂಧಿತ ವಿಭಾಗದ ನಿರ್ವಹಣೆಯಲ್ಲಿ ಕನಿಷ್ಠ ವೃತ್ತಿ ಅನುಭವವನ್ನು ಹೊಂದಿರಬೇಕು.
• ಹೆಚ್ಚಿನ ಅರ್ಹತೆ ಹಾಗೂ ಶೈಕ್ಷಣಿಕ ಅರ್ಹತೆಯ ವಿವರಗಳಿಗಾಗಿ ಅಭ್ಯರ್ಥಿಗಳು ತಪ್ಪದೇ ಅಧಿಕೃತ ಅಧಿಸೂಚನೆಯನ್ನು ಓದಬೇಕು.
ವಯೋಮಿತಿ:
ಗರಿಷ್ಠ ವಯಸ್ಸಿನ ಮಿತಿ – 54 ವರ್ಷಗಳು
ಆಯ್ಕೆ ವಿಧಾನ:
ರಾಷ್ಟ್ರೀಯ ಗುಪ್ತಚರ ಗ್ರಿಡ್ (NATGRID) ನಿಯಮಗಳ ಅನುಸಾರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಸಂಬಳ:
ನಿರ್ದೇಶಕರ ಹುದ್ದೆಗಳಿಗೆ – ₹1,23,100-2,15,900
ಉಪನಿರ್ದೇಶಕರ ಹುದ್ದೆಗಳಿಗೆ – ₹67,700-2,08,700
ಸಹಾಯಕ ನಿರ್ದೇಶಕರ ಹುದ್ದೆಗಳಿಗೆ – ₹47,600-1,51,100
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಅರ್ಜಿ ಸಲ್ಲಿಕೆ ಹೇಗೆ..?
• ಅಭ್ಯರ್ಥಿಗಳು MHA ಅಧಿಕೃತ ವೆಬ್ಸೈಟ್ https://www.mha.gov.in/en/notifications/vacancies ಗೆ ಭೇಟಿ ನೀಡಿ.
• ನಂತರ ಪ್ರಸ್ತುತ ನೇಮಕಾತಿ ಹುದ್ದೆಗಳು ವಿಭಾಗದ ಕೆಳಗೆ ನೀಡಲಾಗಿರುವ ಕ್ರೀಡಾ “ಗೃಹ ಸಚಿವಾಲಯದ ರಾಷ್ಟ್ರೀಯ ಗುಪ್ತಚರ ಗ್ರಿಡ್‌ನಲ್ಲಿ ಡೆಪ್ಯುಟೇಶನ್ ಮೇಲೆ (ಅಲ್ಪಾವಧಿಯ ಒಪ್ಪಂದ ಸೇರಿದಂತೆ) ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಖಾಲಿ ಹುದ್ದೆಗಳ ಸುತ್ತೋಲೆ -ನೋಂದಣಿ.’ ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನೇಮಕಾತಿಯ ಅಧಿಸೂಚನೆ ಹಾಗೂ ಅರ್ಜಿ ನಮೂನೆಯ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
• ಬಳಿಕ ಅರ್ಜಿಯಲ್ಲಿ ಕೇಳಲಾಗುವ ಮೂಲ ಮಾಹಿತಿ, ಭಾವಚಿತ್ರ, ಸಹಿ, ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.
• ಈ ಕೆಳಗಿನ ವಿಳಾಸಕ್ಕೆ ಏಪ್ರಿಲ್ 20ರೊಳಗೆ (ಉದ್ಯೋಗ ಸುದ್ದಿಯಲ್ಲಿ ಪ್ರಕಟಿಸಿದ ದಿನಾಂಕದಿಂದ 45 ದಿನಗಳ ಒಳಗೆ) ತಲುಪುವಂತೆ ಕಳುಹಿಸಬೇಕು.
ವಿಳಾಸ: ಅಧೀನ ಕಾರ್ಯದರ್ಶಿ (estt), NATGRID, ಗೃಹ ವ್ಯವಹಾರಗಳ ಸಚಿವಾಲಯ, 1, ಅಂಧೇರಿಯಾ ಮೋರ್, ವಸಂತ್ ಕುಂಜ್ ರಸ್ತೆ, ನವದೆಹಲಿ-110074
Important Direct Links:
| Official Notification and Application Form PDF | Download |
| Official Website | www.mha.gov.in/ |
| More Updates | KarnatakaHelp.in |