ಕೊಚ್ಚಿನ್ ಶಿಪ್‌ಯಾರ್ಡ್ GME ಕೋರ್ಸ್ ಪ್ರವೇಶಾತಿ ಪ್ರಾರಂಭ

Published on:

ನೇವಿಯಲ್ಲಿ ಮರೈನ್ ಎಂಜಿನಿಯರ್‌ಗಳಾಗಿ ವೃತ್ತಿಜೀವನವನ್ನು ಮುಂದುವರಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಉತ್ತಮ ಸದಾವಕಾಶ, ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಕೊಚ್ಚಿಯ ಮರೈನ್ ಎಂಜಿನಿಯರಿಂಗ್ ತರಬೇತಿ ಸಂಸ್ಥೆಯು ಗ್ರಾಜುಯೇಟ್ ಮರೈನ್ ಎಂಜಿನಿಯರಿಂಗ್ ಕೋರ್ಸ್‌ ಪ್ರವೇಶಾತಿಗಾಗಿ ನೋಂದಣಿ ಪ್ರಾರಂಭಿಸಿದೆ.

ಗ್ರಾಜುಯೇಟ್ ಮರೈನ್ ಎಂಜಿನಿಯರಿಂಗ್ ಕೋರ್ಸ್ ಪೂರ್ವ ತರಬೇತಿಯನ್ನು 01 ವರ್ಷದ ಅವಧಿಯವರೆಗೆ ನೀಡಲಾಗುತ್ತದೆ, ಯಶಸ್ವಿಯಾಗಿ ಕೋರ್ಸು ಪೂರ್ಣಗೊಳಿಸಿದ ಅಭ್ಯರ್ಥಿಗಳು ನೇವಿ ಮರೈನ್ ಎಂಜಿನಿಯರ್ ಆಫೀಸರ್ ಪ್ರಮಾಣೀಕರಣಕ್ಕೆ ಅರ್ಹರಾಗುತ್ತಾರೆ. ಪತ್ರಿ ವರ್ಷ 160 ಸೀಟುಗಳನ್ನು ಭರ್ತಿ ಮಾಡಿಕೊಳ್ಳುತ್ತದೆ. ಸದರಿ ಕೋರ್ಸುಗಳ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಆಸಕ್ತ ಅಭ್ಯರ್ಥಿಗಳು CSL ಅಧಿಕೃತ ಜಾಲತಾಣ https://cslmeti.in/index.html ಕ್ಕೆ ಭೇಟಿ ನೀಡಿ. ಆನ್‌ಲೈನ್ ಮೂಲಕ ನೋಂದಣಿ ಮಾಡಬಹುದು.

GME ಕೋರ್ಸು ಪ್ರವೇಶಾತಿಯ ಪ್ರಮುಖ ದಿನಾಂಕಗಳು

  • ಪ್ರವೇಶಾತಿಯ ಪ್ರಮುಖ ದಿನಾಂಕಗಳು – ಆಗಸ್ಟ್ 1 ರಿಂದ 15 ಮತ್ತು ಡಿಸೆಂಬರ್ 1 ರಿಂದ 15 ರವರೆಗೆ
  • ಹಾಸ್ಟೆಲ್‌ನಲ್ಲಿ ವರದಿ ಮಾಡುವ ಪ್ರಮುಖ ದಿನಾಂಕಗಳು – ಆಗಸ್ಟ್ 30/31 ಮತ್ತು ಡಿಸೆಂಬರ್ 30/31
  • ತರಬೇತಿ ಆರಂಭದ ಪ್ರಮುಖ ದಿನಾಂಕಗಳು – ಜನವರಿ 01 ಮತ್ತು ಸೆಪ್ಟೆಂಬರ್ 01

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌/ನಾವೆಲ್‌ ಆರ್ಕಿಟೆಕ್ಚರ್‌ ವಿಭಾಗದಲ್ಲಿ ಇಂಜಿಯರಿಂಗ್‌/ಮೆರಿನ್‌ ಇಂಜಿನಿಯರಿಂಗ್‌ನಲ್ಲಿ ಬಿಇ/ಬಿ.ಟೆಕ್‌ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:

ಗರಿಷ್ಠ ವಯಸ್ಸಿನ ಮಿತಿ – 28 ವರ್ಷಗಳು

ಆಯ್ಕೆ ವಿಧಾನ:

  • ಲಿಖಿತ ಪರೀಕ್ಷೆ
  • ಸಂದರ್ಶನ
  • ವೈದ್ಯಕೀಯ ಪರೀಕ್ಷೆ

ಕೋರ್ಸ್ & ಪ್ರವೇಶ ಶುಲ್ಕ

• ಕೋರ್ಸ್‌ ಶುಲ್ಕ 4,75,000ರೂ. ಮತ್ತು ಪ್ರವೇಶ ಶುಲ್ಕ 10,000ರೂ.

• ಪ್ರವೇಶದ ಸಮಯದಲ್ಲಿ ಅಭ್ಯರ್ಥಿಯು 2,42,500ರೂ. ಮೊತ್ತವನ್ನು ಆನ್‌ಲೈನ್ ಬ್ಯಾಂಕ್ ವರ್ಗಾವಣೆಯ ಮೂಲಕ ಅಥವಾ ಯಾವುದೇ ಬ್ಯಾಂಕಿನ ಡಿಮ್ಯಾಂಡ್ ಡ್ರಾಫ್ಟ್ ಮೂಲಕ “ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್” ಹೆಸರಿನಲ್ಲಿ ಎರ್ನಾಕುಲಂನಲ್ಲಿ ಪಾವತಿಸಬೇಕು. ಬಾಕಿ ಮೊತ್ತವನ್ನು ಕೋರ್ಸ್ ಪ್ರಾರಂಭವಾದ 3 ತಿಂಗಳೊಳಗೆ ಪಾವತಿಸಬೇಕು.

ಆನ್‌ಲೈನ್‌ ಮೂಲಕ ನೋಂದಣಿ ಹೇಗೆ.?

• ಮೊದಲಿಗೆ ಅಭ್ಯರ್ಥಿಗಳು CSL ಅಧಿಕೃತ ಜಾಲತಾಣ https://cslmeti.in/index.htmlಕ್ಕೆ ಭೇಟಿ ನೀಡಿ.

• ಬಳಿಕ “GME ಪ್ರವೇಶ ಸೆಪ್ಟೆಂಬರ್ 2026” ಲಿಂಕ್ ಮೇಲೆ ಕ್ಲಿಕ್ ಮಾಡಿ.

• ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ಲಾಗಿನ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.

• ಬಳಿಕ ಅರ್ಜಿಯಲ್ಲಿ ಕೇಳಲಾಗುವ ಮೂಲ ಮಾಹಿತಿ, ಸಹಿ, ಭಾವಚಿತ್ರ ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಪರಿಶೀಲಿಸಿ ಸಲ್ಲಿಸಿ.

• ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.

Important Direct Links:

Official Notification PDFDownload
METI GME Application Online Form LinkApply Now
Official Websitecslmeti.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

1 thought on “ಕೊಚ್ಚಿನ್ ಶಿಪ್‌ಯಾರ್ಡ್ GME ಕೋರ್ಸ್ ಪ್ರವೇಶಾತಿ ಪ್ರಾರಂಭ”

Leave a Comment