ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಮೊದಲನೇ ಗ್ಯಾರಂಟಿ “ಗೃಹ ಜ್ಯೋತಿ” (Gruha Jyothi Scheme), ಈ ಯೋಜನೆಯನ್ನು ಜೂನ್ 18 ರಿಂದ ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಈ ಯೋಜನೆಯು ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ಗಳವರೆಗೆ ಉಚಿತವಾಗಿ ವಿದ್ಯುತ್ ನೀಡುವುದಾಗಿ ಆದೇಶ ಹೊರಡಿಸಲಾಗಿದೆ.
ಸೇವಾ ಸಿಂಧು ಪೋರ್ಟಲ್ (Gruha Jyoti Scheme Apply Online New Link ) ನಲ್ಲಿ ಅರ್ಜಿ ಸಲ್ಲಿಸಲು ಲಕ್ಷಾಂತರ ಜನ ಏಕಕಾಲಕ್ಕೆ ಭೇಟಿ ನೀಡುವುದರಿಂದ ವೆಬ್ ಸೈಟ್ ಸರ್ವರ್ ಡೌನ್ ಆಗುತ್ತಾ ಇತ್ತು, ಇದೀಗ ವೆಬ್ಸೈಟ್ ಬಳಕೆದಾರ ಇಂಟರ್ಫೇಸ್ ಬೇರೆ ರೀತಿಯಾಗಿ ರಚನೆ ಮಾಡಲಾಗಿದೆ. ಇದನ್ನು ಸರ್ವರ್ ಡೌನ್ ಆಗುವುದನ್ನು ತಪ್ಪಿಸಲು ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಇದಕ್ಕೆ ಸಂಬಂದಿಸಿದ ಮಾಹಿತಿಯನ್ನ ಈ ಕೆಳಗೆ ನೀಡಲಾಗಿದೆ.
ಗೃಹ ಜ್ಯೋತಿ ಯೋಜನೆಗೆ ಅಗತ್ಯವಿರುವ ದಾಖಲೆಗಳು (Gruha Jyoti scheme OnlineRegistrationRequired Documents)
ಆಧಾರ್ ಸಂಖ್ಯೆ,
ಬಿಲ್ಲಿನಲ್ಲಿ ನಮೂದಿಸಲಾಗಿರುವ ಗ್ರಾಹಕರ ಸಂಖ್ಯೆ/ಖಾತೆ ಸಂಖ್ಯೆ ಬಾಡಿಗೆ ಭೋಗ್ಯದ ಕರಾರು ಪತ್ರ (ಬಾಡಿಗೆ/ಭೋಗ್ಯ ದಾರರಾಗಿದ್ದಲ್ಲಿ) ಸಲ್ಲಿಸುವುದು ಅಥವ ಸಂಬಂಧಿತ ವಿಳಾಸವನ್ನು ಸೂಚಿಸುವ ವೋಟರ್ ID ಸಲ್ಲಿಸುವುದು.
ಅಂತಿಮ ನುಡಿ : ನಾವು ನೀಡಿದ ಮಾಹಿತಿಯು ನಿಮಗೆ ಉಪಯೋಗವಾಗಿದೆ ಎಂದು ನಾವು ಭಾವಿಸಿದ್ದೇವೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಬಹುದಾಗಿದೆ . ಟೀಮ್ ಕರ್ನಾಟಕ ಹೆಲ್ಪ್ ಧನ್ಯವಾದಗಳು