ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಸೆಕ್ರೆಟರಿಯೇಟ್ ಸೆಕ್ಯುರಿಟಿ ಫೋರ್ಸ್(SSF)ನಲ್ಲಿ ಗ್ರೂಪ್ ‘ಸಿ’ ನಾನ್-ಗೆಜೆಟೆಡ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಕಿರು ಅಧಿಸೂಚನೆ ಬಿಡುಗಡೆಯಾಗಿದ್ದು, ಅರ್ಜಿ ಸಲ್ಲಿಕೆ ಮಾ.30ರಿಂದ ಪ್ರಾರಂಭವಾಗಲಿದೆ.
03 ಕಾನ್‌ಸ್ಟೆಬಲ್ (ಕ್ಷೌರಿಕ) ಹಾಗೂ 07 ಕಾನ್‌ಸ್ಟೆಬಲ್ (ವಾಷರ್‌ಮನ್) ಸೇರಿದಂತೆ ಒಟ್ಟು 10 ಸ್ಥಾನಗಳಿಗೆ ತಾತ್ಕಾಲಿಕ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಿದೆ. ಅರ್ಹ ಪುರುಷ ಅಭ್ಯರ್ಥಿಗಳು ಐಟಿಬಿಟಿ ಅಧಿಕೃತ ಜಾಲತಾಣ https://recruitment.itbpolice.nic.in/rect/index.phpಕ್ಕೆ ಭೇಟಿ ನೀಡಿ, ಏ.28ರೊಳಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಮಾರ್ಚ್ 30, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಏಪ್ರಿಲ್ 28, 2026
ಶೈಕ್ಷಣಿಕ ಅರ್ಹತೆ:
ITBP ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ 10ನೇ ತರಗತಿ/ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ವೃತ್ತಿ ಸಂಬಂಧಿತ ಟ್ರೇಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ:
ಕನಿಷ್ಠ ಮಿತಿ 18 ವರ್ಷಗಳು
ಗರಿಷ್ಠ ಮಿತಿ 23 ವರ್ಷಗಳು
ವಯೋಮಿತಿ ಸಡಿಲಿಕೆ; ಸೆಕ್ರೆಟರಿಯೇಟ್ ಸೆಕ್ಯುರಿಟಿ ಫೋರ್ಸ್ (SSF) ನಿಯಮಗಳ ಅನುಸಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.
ಆಯ್ಕೆ ಪ್ರಕ್ರಿಯೆ:
- ದೈಹಿಕ ದಕ್ಷತೆ ಪರೀಕ್ಷೆ (PET)
- ದೈಹಿಕ ಗುಣಮಟ್ಟ ಪರೀಕ್ಷೆ (PST)
- ಲಿಖಿತ ಪರೀಕ್ಷೆ
- ಟ್ರೇಡ್ ಪರೀಕ್ಷೆ
- ದಾಖಲೆಗಳ ಪರಿಶೀಲನೆ
- ವಿವರವಾದ ವೈದ್ಯಕೀಯ ಪರೀಕ್ಷೆ (DME)
- ವೈದ್ಯಕೀಯ ಪರೀಕ್ಷೆಯ ಪರಿಶೀಲನಾ ಪರೀಕ್ಷೆ (RME)
ಸಂಬಳ:
7ನೇ CPC ಪ್ರಕಾರ ನಿಯಮಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ ₹19,900-63,200ವರೆಗೆ ವೇತನವನ್ನು ಪ್ರತಿ ತಿಂಗಳು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – ₹100
ಪ.ಜಾತಿ ಮತ್ತು ಮಾಜಿ ಸೈನಿಕ – ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ.?
• ಅಭ್ಯರ್ಥಿಗಳು ಐಟಿಬಿಪಿ ಅಧಿಕೃತ ಜಾಲತಾಣ https://recruitment.itbpolice.nic.in/rect/index.phpಕ್ಕೆ ಭೇಟಿ ನೀಡಿ.
• ಬಳಿಕ *ಸೆಕ್ರೆಟರಿಯೇಟ್ ಸೆಕ್ಯುರಿಟಿ ಫೋರ್ಸ್ (SSF) ನಲ್ಲಿ ಕಾನ್ಸ್ಟೇಬಲ್ (ಕ್ಷೌರಿಕ) ಮತ್ತು ಕಾನ್ಸ್ಟೇಬಲ್ (ವಾಷರ್ಮನ್)-2025 ಹುದ್ದೆಗಳಿಗೆ ನೇಮಕಾತಿ* ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ ಅರ್ಜಿ ಸಲ್ಲಿಸು ಆಯ್ಕೆಯನ್ನು ಆರಿಸಿ.
• ಹೊಸ ಬಳಕೆದಾರರಾಗಿದ್ದಲ್ಲಿ, ನೋಂದಾಯಿಸಿ ಅಥವಾ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಅಂತಿಮವಾಗಿ ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
Important Direct Links:
| Official Short Notification PDF | Download |
| Official Detailed Notification PDF | Soon |
| Online Application Form Link(ಮಾ.30 ರಿಂದ) | Apply |
| Official Website | itbpolice.nic.in |
| More Updates | KarnatakaHelp.in |
Mahesh yadagere 🤙 me
Hii sir
Sudeep
ದಯವಿಟ್ಟು ನನನು ಈ ಉದ್ಯೋಗದಲ್ಲಿ ಸೇರಿಸಿ ಕೋಳಿ
I love my country..🇮🇳