ಫಾಸ್ಟ್ ಫುಡ್‌(ಚಾಟ್ಸ್‌ ಸೆಂಟರ್) ತಯಾರಿಕೆ  ತರಬೇತಿ; ಸಂದರ್ಶನಕ್ಕೆ ಆಹ್ವಾನ

Published on:

ಹೊಸಕೋಟೆ: ತಾಲ್ಲೂಕಿನ ಸೊಣ್ಣಹಳ್ಳಿಪುರದ ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯು ನಿರುದ್ಯೋಗಿ ಪುರುಷ ಹಾಗೂ ಮಹಿಳೆಯರಿಗೆ 12 ದಿನದ ಉಚಿತ ಫಾಸ್ಟ್‌ ಫುಡ್‌ (ಚಾಟ್ಸ್‌ ಸೆಂಟರ್) ತಯಾರಿಕೆ ತರಬೇತಿ ಶಿಬಿರವನ್ನು ಏ.4ರಿಂದ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಅಂಬರೀಶ ಬಿ ಸಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏನೇನು ಕಲೆಯುವಿರಿ?

ಶಿಬಿರದಲ್ಲಿ ಪಾನಿ ಪೂರಿ, ಬೇಲ್‌ ಪೂರಿ, ದಹಿ ಪೂರಿ, ಸೇವ್‌ ಪೂರಿ, ಚಾಟ್‌ ಮಸಾಲ, ಕಚೋರಿ, ಗೋಬಿ ಮಂಚೂರಿ, ಪ್ರೈಡ್‌ ರೈಸ್‌, ಸಮೋಸ ಇನ್ನಿತರೆ ಚಾಟ್ಸ್‌ ಗಳ ತಯಾರಿಕೆಯ ಬಗ್ಗೆ ತರಬೇತಿ ನೀಡಲಾಗುವುದು.

ಯಾರು ಅರ್ಹರು.? ಊಟ-ವಸತಿ ಹೇಗೆ.?

ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ 18 ರಿಂದ 49 ವರ್ಷ ವಯೋಮಾನದ ಪುರುಷ ಹಾಗೂ ಮಹಿಳೆಯರು ಪಾಲ್ಗೊಳ್ಳಬಹುದು. ಊಟ, ವಸತಿ ಸೌಕರ್ಯಗಳು ಉಚಿತವಾಗಿ ಶಿಬಿರಾರ್ಥಿಗಳಿಗೆ ಒದಗಿಸಲಾಗುತ್ತದೆ. ಗ್ರಾಮೀಣ ಭಾಗದ ಬಿಪಿಎಲ್‌ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ. ಶಿಬಿರದಲ್ಲಿ ಯಶಸ್ವಿಯಾಗಿ ಭಾಗವಹಿಸಿದವರಿಗೆ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಪ್ರಮಾಣ ಪತ್ರವನ್ನು ವಿತರಿಸಲಾಗುವುದು.

ಅರ್ಜಿ ಸಲ್ಲಿಕೆ ಹೇಗೆ.?

ಆಸಕ್ತರು ಮಾ.23 (ಸೋಮವಾರ) ಬೆಳಗ್ಗೆ 9.30 ಗಂಟೆಗೆ ಈ ಕೆಳಗಿನ ವಿಳಾಸದಲ್ಲಿ ನಡೆಯಲಿರುವ ನೇರ ಸಂದರ್ಶನಕ್ಕೆ ತಮ್ಮ ವಿದ್ಯಾರ್ಹತೆ ಮತ್ತು ವಿಳಾಸದ ಪುರಾವೆಗಳೊಂದಿಗೆ ಹಾಜರಾಗಬೇಕು.

ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹಸಿಗಾಳ (ಅಂಚೆ).

ಕಾರಣಾಂತರಗಳಿಂದ ಸಂದರ್ಶನಕ್ಕೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ ಮಾ.23ರೊಳಗೆ ಸಂಸ್ಥೆಯ ದೂರವಾಣಿ ಸಂಖ್ಯೆ 8970476050, 9591514754, 6363139123, 9686248369, 9505894247ಗಳಿಗೆ ಸಂಪರ್ಕಿಸಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಲು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

ಮತ್ತಷ್ಟು ಸುದ್ದಿಗಾಗಿ KarnatakaHelp.inಗೆ ಭೇಟಿ ನೀಡಿ.

About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

1 thought on “ಫಾಸ್ಟ್ ಫುಡ್‌(ಚಾಟ್ಸ್‌ ಸೆಂಟರ್) ತಯಾರಿಕೆ  ತರಬೇತಿ; ಸಂದರ್ಶನಕ್ಕೆ ಆಹ್ವಾನ”

Leave a Comment