Happy Holi 2023 Kannada Song ಹೋಳಿ ಹೋಳಿ – Holi Holi (Preethse)

Follow Us:

Happy Holi 2023 Karnataka – ಎಲ್ಲರಿಗೂ ಹೋಳಿ ಹಬ್ಬದ ಹಾರ್ದಿಕ ಶುಭಾಶಗಳು. Wish You Happy Holi Friends

Happy Holi 2023 Kannada Song ಹೋಳಿ ಹೋಳಿ – Holi Holi (Preethse)

ಹೋಳಿ ಹೋಳಿ – Holi Holi (Preethse) Song Lyrics

ಹೋಳಿ ಹೋಳಿ ಹೋಳಿ ಹೋಳಿ 

ಏಳೇಳು ಬಣ್ಣದ ಬೆಳ್ಳಿ ಹೋಳಿ

ಹೋಳಿ ಹೋಳಿ ಹೋಳಿ ಹೋಳಿ

ರಾಗ ರಂಗೀನ ರಂಗು ರಂಗೋಲಿ

 

ಕಾಮನ ಬಿಲ್ಲಿಂದ ಬಣ್ಣಗಳ ಕದಿಯೋಣ

ಮೋಡದ ಕಡಲಿಂದ ಪನ್ನೀರ ಕಡೆಯೋಣ

ಬಿಳಿ ಹೆತ್ತ ಬಣ್ಣಗಳ ಬಿಳಿ ಬಿಳಿ ಬಟ್ಟೆಗೆ ಚೆಲ್ಲೋಣ 

ಓಹೋ ಓಕುಳಿ ಆಡೋಣ 

 

ಹೋಳಿ ಹೋಳಿ ಹೋಳಿ ಹೋಳಿ 

ಏಳೇಳು ಬಣ್ಣದ ಬೆಳ್ಳಿ ಹೋಳಿ

ಹೋಳಿ ಹೋಳಿ ಹೋಳಿ ಹೋಳಿ

ರಾಗ ರಂಗೀನ ರಂಗು ರಂಗೋಲಿ 

 

ಅರಿಶಿನ ಕುಂಕುಮವ ಒಂದು ಕ್ಷಣ ಬೆರೆಸೋಣ 

ಹಸಿರಿನ ಜೊತೆಯಲ್ಲಿ ಒಂದು ಕ್ಷಣ ಇರಿಸೋಣ 

ರವಿವರ್ಮ ನಕ್ಕರೆ ಕ್ಷಮಿಸು ಬಣ್ಣದ ಹಬ್ಬ ಅನ್ನೋಣ

ಓಹೋ ಓಕುಳಿ ಆಡೋಣ 

 

ಹೋಳಿ ಹೋಳಿ ಹೋಳಿ ಹೋಳಿ 

ಏಳೇಳು ಬಣ್ಣದ ಬೆಳ್ಳಿ ಹೋಳಿ

ಹೋಳಿ ಹೋಳಿ ಹೋಳಿ ಹೋಳಿ

 

ಬಣ್ಣ ಕಂಡ್ರೆ ಕುಣಿಯೋಣ ಕುಣಿಯೋಣ

ಬಳಿಯಲಿ ಬಂದ್ರೆ ಓಡೋಣ ಓಡೋಣ

ಬೇಡ ಅನ್ನೋ ಈ ಭಯವೆ ಈ ಭಯವೆ 

ಬೇಕು ಅನ್ನೋ ಬಿನ್ನಾಣ ಅಹ ಬಿನ್ನಾಣ

 

ತನುವೆಲ್ಲ ನವರಂಗು ಮನಸೆಲ್ಲ ಬೆಳದಿಂಗಳು 

ಈ ಹಬ್ಬ ಧರೆಗಿತ್ತ ಕ್ರಿಷ್ಣನಿಗೆ ನಮನಗಳು 

ಮನೆಮನೆಗೊಬ್ಬ ರಂಗಿನ ರಂಗ ರಂಗಿನ ರಂಗ 

ಗೋಕುಲ ನಂದ ಹಿಡಿಯೊ ಹಚ್ಚೊ 

ಹಿಡಿಯೊ ಹಚ್ಚೊ ಹಿಡಿಯೊ ಹಚ್ಚೊ 

 

ಹೋಳಿ ಹೋಳಿ ಹೋಳಿ ಹೋಳಿ 

ಏಳೇಳು ಬಣ್ಣದ ಬೆಳ್ಳಿ ಹೋಳಿ

ಹೋಳಿ ಹೋಳಿ ಹೋಳಿ ಹೋಳಿ

 

ಕಣ್ಣಲ್ಲೆ ಬೌಲಿಂಗ್ ಮಾಡು 

ಕಣ್ನಲ್ಲೆ ಬ್ಯಾಟಿಂಗ್ ಮಾಡು 

ಗೋಪಿಕಾಸ್ತ್ರಿ ನೋಡು 

ಸೆಂಚುರಿ ಶ್ರೀಕ್ರಿಷ್ಣನ ನೋಡು 

ಒಂದೆ ದಿನ ಒಂದೆ ಬಾಲು

ಒಂದೆ ರನ್ನು ಒಂದೆ ವಿಕೆಟ್

ಹೊಡುದ್ರೆ ವಿನ್ ಬಿಟ್ರೆ ಡ್ರಾ 

ಮತ್ತೆ ಬಾಲ್ ಬಿತ್ತು ಬೇಲ್ಸ್ 

ಬೋಲ್ಡ್ ಕ್ಲೀನ್ ಬೋಲ್ಡ್ 

 

ಒಲವು ಚೆಲುವು ಒಂದಾಗಿ 

ನಲಿದಿದೆ ಇಲ್ಲಿ ಹೆಣ್ಣಾಗಿ 

ಹೆಣ್ಣ ಕಂಡ ಬಣ್ಣಗಳೆಲ್ಲ 

ಶರಣು ಅಂದೊ ಮಂಕಾಗಿ 

 

ಕ್ರಿಷ್ಣಯ್ಯ ಬಾರಯ್ಯ 

ಒಲವಿನ ಲೋಕಕ್ಕೆ 

ಮುದ್ದಿನ ಜೇನಿನ

ಚೆಲುವಿನ ಊಟಕ್ಕೆ 

 

ಹಬ್ಬದ ಹಬ್ಬ ಒಲವಿನ ಹಬ್ಬ 

ಒಲವಿನ ಹಬ್ಬ ತುಂಬಿದೆ ಬಾಳಿನ 

ತಗ್ಗು ದಿಬ್ಬ 

ಚೆಲ್ಲೊ ಚೆಲ್ಲೊ ಬಣ್ನ ಚೆಲ್ಲೊ 

ಬಣ್ನ ಚೆಲ್ಲೊ 

 

ಹೋಳಿ ಹೋಳಿ ಹೋಳಿ ಹೋಳಿ 

ಏಳೇಳು ಬಣ್ಣದ ಬೆಳ್ಳಿ ಹೋಳಿ

ಹೋಳಿ ಹೋಳಿ ಹೋಳಿ ಹೋಳಿ

ರಾಗ ರಂಗೀನ ರಂಗು ರಂಗೋಲಿ 

 

ಕೋಗಿಲೆ ಕೊಳಲಲ್ಲಿ 

ಪಂಚಮವ ಹಿಡಿಸೋಣ 

ಮಯೂರದ ಮೈಯಿಂದ

ಲಾಸಿಲೆಯ ಬೆರೆಸೋಣ

ಹದ ಮೀರದಂತ ಹೂಗಳ

ಬಣ್ಣದ ಅಡಿಗೆ ಕಲಿಯೋಣ

ಭಾವದ ಹೋಳಿಗೆ ಮಾಡೋಣ

 

ಹೋಳಿ ಹೋಳಿ ಹೋಳಿ ಹೋಳಿ 

ಏಳೇಳು ಬಣ್ಣದ ಬೆಳ್ಳಿ ಹೋಳಿ

ಹೋಳಿ ಹೋಳಿ ಹೋಳಿ ಹೋಳಿ