ಹೆಚ್ಡಿಎಫ್ಸಿ ಬ್ಯಾಂಕಿನ ವತಿಯಿಂದ 2025-26 ಸಾಲಿಗೆ ಹೆಚ್ಡಿಎಫ್ ಬ್ಯಾಂಕ್ ಪರಿವರ್ತನಾ ಇಸಿಎಸ್ಎಸ್ ಪ್ರೋಗ್ರಾಮ್ನ ಅಡಿಯಲ್ಲಿ ಪರಿವರ್ತನಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
HDFC ಬ್ಯಾಂಕ್ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುವ ನಿಟ್ಟಿನಲ್ಲಿ, ವೈಯಕ್ತಿಕ ಅಥವಾ ಕೌಟುಂಬಿಕ ತೊಂದರೆಗಳು ಮತ್ತು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ (HDFC Bank Parivartan’s Educational Crisis Scholarship Support) ನೆರವು ನೀಡುತ್ತಾ ಬಂದಿದೆ.
ವಿದ್ಯಾರ್ಥಿವೇತನ ಕಾರ್ಯಕ್ರಮವು 1 ರಿಂದ 12 ನೇ ತರಗತಿಯವರೆಗಿನ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್, ಯುಜಿ ಮತ್ತು ಪಿಜಿ (ಸಾಮಾನ್ಯ ಮತ್ತು ವೃತ್ತಿಪರ ಎರಡೂ) ಕೋರ್ಸ್ಗಳನ್ನು ಕಲಿಯುತ್ತಿರುವವರಿಗೆ ಲಭ್ಯವಾಗಲಿದೆ. ECSS ಕಾರ್ಯಕ್ರಮದ ಅಡಿಯಲ್ಲಿ, ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಅವರ ಶಿಕ್ಷಣವನ್ನು ಬೆಂಬಲಿಸಲು ರೂ. 75,000/-ದ ವರೆಗೆ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕ:
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನ – ಅಕ್ಟೋಬರ್ 30, 2025
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
- ಭಾರತೀಯ ನಾಗರಿಕನಾಗಿರಬೇಕು.
- 1 ರಿಂದ 12 ನೇ ತರಗತಿ, ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್, ಮತ್ತು ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್ಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
- ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ 55% ಅಂಕ ಗಳಿಸಿರಬೇಕು.
- ಕುಟುಂಬದ ವಾರ್ಷಿಕ ಆದಾಯ ರೂ. 2.5 ಲಕ್ಷಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು.
- ಕಳೆದ ಮೂರು ವರ್ಷಗಳಲ್ಲಿ ವೈಯಕ್ತಿಕ ಅಥವಾ ಕೌಟುಂಬಿಕ ಬಿಕ್ಕಟ್ಟಿನಿಂದಾಗಿ ಶಿಕ್ಷಣ ಮುಂದುವರಿಸಲು ಕಷ್ಟ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:
- ಪಾಸ್ಪೋರ್ಟ್ ಸೈಜ್ ಫೋಟೋ
- ಹಿಂದಿನ ವರ್ಷದ ಅಂಕಪಟ್ಟಿ
- ಆಧಾರ್ ಕಾರ್ಡ್/ಮತದಾರರ ಗುರುತಿನ ಚೀಟಿ
- ಪ್ರಸ್ತುತ ಕೋರ್ಸ್ನ ಪ್ರವೇಶ ದಾಖಲೆ
- ಬ್ಯಾಂಕ್ ಪಾಸ್ಬುಕ್ ನಕಲು
- ಆದಾಯ ಪ್ರಮಾಣ ಪತ್ರ
- ಕುಟುಂಬದ ಆರ್ಥಿಕ ಸಂಕಷ್ಟದ ದಾಖಲೆ
ವಿದ್ಯಾರ್ಥಿಗಳಿಗೆ ಲಭ್ಯವಾಗುವ ಸಹಾಯಧನದ ಮೊತ್ತ:
- 1 ನೇ ತರಗತಿ ಯಿಂದ 6 ನೇ ತರಗತಿ ವರೆಗೆ – ರೂ.15,000/-
- 7 ನೇ ತರಗತಿ ಯಿಂದ 12 / Diploma / ITI / Polytechnic ವರೆಗೆ – ರೂ.18,000/-
- ಸಾಮಾನ್ಯ ಪದವಿಪೂರ್ವ ಕೋರ್ಸ್ಗಳಿಗೆ (Undergraduate General Courses) – ರೂ.30,000/-
- ವೃತ್ತಿಪರ ಪದವಿಪೂರ್ವ ಕೋರ್ಸ್ಗಳಿಗೆ (Undergraduate Professional Courses) – ರೂ.50,000/-
- ಸಾಮಾನ್ಯ ಸ್ನಾತಕೋತ್ತರ ಕೋರ್ಸ್ಗಳಿಗೆ (Postgraduate General Courses) – ರೂ.35,000/-
- ವೃತ್ತಿಪರ ಸ್ನಾತಕೋತ್ತರ ಕೋರ್ಸ್ಗಳಿಗೆ (Postgraduate Professional Courses) – ರೂ.75,000/-
ನಿಯಮಗಳು ಮತ್ತು ಷರತ್ತುಗಳು:
- ಒಂದು ಕುಟುಂಬದಿಂದ ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಅರ್ಜಿ ಸಲ್ಲಿಸಬಹುದು.
- ಸಹಾಯಧನದ ಹಣ ನೇರವಾಗಿ ವಿದ್ಯಾರ್ಥಿ ಅಥವಾ ಶಿಕ್ಷಣ ಸಂಸ್ಥೆಗೆ ವರ್ಗಾಯಿಸಲಾಗುತ್ತದೆ.
- ಯೋಜನೆಗೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳನ್ನು HDFC ಬ್ಯಾಂಕ್ ಸಮಯಾವಕಾಶದ ಪ್ರಕಾರ ಬದಲಾಯಿಸಬಹುದು.
- ವಿದ್ಯಾರ್ಥಿಗಳು ಮುಂದಿನ ವರ್ಷವೂ ಸಹಾಯಧನ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಬೇಕು.
ಆಯ್ಕೆ ಪ್ರಕ್ರಿಯೆ:
- ಅರ್ಜಿಗಳ ಪ್ರಾಥಮಿಕ ಪರಿಶೀಲನೆ
- ದಾಖಲೆ ದೃಢೀಕರಣ
- ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸುವುದು
ಅರ್ಜಿ ಸಲ್ಲಿಸುವುದು ಹೇಗೆ ?
- ಕೆಳಗಿನ ನೀಡಿರುವ ಅಧಿಕೃತ ವೆಬ್ ಸೈಟ್ ಮತ್ತು ಆನ್ ಲೈನ್ ಅರ್ಜಿ ಸಲ್ಲಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ನೀಡಿರುವ ಸಂಪೂರ್ಣ ವಿವರ ಓದಿರಿ.
- ನಂತರ ನೀವು ಅರ್ಜಿ ಸಲ್ಲಿಸಲು ಬಯಸುವ ತರಗತಿಯ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಕೆಳಗೆ ಕಾಣುವ Apply Now ಈಗ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಇಮೇಲ್/ಮೊಬೈಲ್/ಜಿಮೇಲ್ ಖಾತೆಯೊಂದಿಗೆ Buddy4Study ನಲ್ಲಿ ನೋಂದಾಯಿಸಿ.

- ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಲು‘Start Application’ ಬಟನ್ ಮೇಲೆ ಕ್ಲಿಕ್ ಮಾಡಿ.
- ಆನ್ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
- ಸಂಬಂಧಿತ ದಾಖಲೆಗಳನ್ನು ಅಪ್ಲೋಡ್ ಮಾಡಿ
- Terms and Conditions’ ಮತ್ತು ‘Preview’ ಮೇಲೆ ಕ್ಲಿಕ್ ಮಾಡಿ.
- ಅರ್ಜಿಯಲ್ಲಿ ಭರ್ತಿ ಮಾಡಿದ ಎಲ್ಲಾ ವಿವರಗಳು Preview ಪರದೆಯಲ್ಲಿ ಸರಿಯಾಗಿ ತೋರಿಸುತ್ತಿದ್ದರೆ, ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ‘Submit’ ಬಟನ್ ಮೇಲೆ ಕ್ಲಿಕ್ ಮಾಡಿ.
Important Direct Links:
Online Application Form 2025-26 | Apply Now |
Parivartan ECSS Programme 2025-26 Notification Details | Click Here |
Official Website | https://www.parivartanecss.com/ |
More Updates | Karnataka Help.in |
Help amount
Help amount
p
Hii
MANJUNATHA EDIGA 9353899831
Hi
I am Afsiya Begum,
From 10 th standerd in sanchiya honnamma govt girls high school
Old town bhadravathi
Very good