ಕರ್ನಾಟಕ ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್, JE, FDA, SDA ಹುದ್ದೆಗಳ ಭರ್ತಿ – ಅರ್ಜಿ ಆಹ್ವಾನ

12ನೇ, ಪದವಿ, ಬಿ.ಕಾಂ, ಬಿಇ ಅಥವಾ ಬಿ.ಟೆಕ್ ಆದವರಿಗೆ ಉದ್ಯೋಗಾವಕಾಶ । ಅ.31 ಕೊನೆಯ ದಿನ

Published on:

Updated On:

ಕರ್ನಾಟಕ ಕೃಷಿ ಮಾರಾಟ ಇಲಾಖೆಯಲ್ಲಿನ ಸಹಾಯಕ ಎಂಜಿನಿಯರ್, ಜೂನಿಯರ್ ಎಂಜಿನಿಯರ್, ಮಾರುಕಟ್ಟೆ ಮೇಲ್ವಿಚಾರಕ, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಮಾರಾಟ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿಗಳನ್ನು ಆಹ್ವಾನಿಸಿದೆ.

ಆಸಕ್ತ ಅಭ್ಯರ್ಥಿಗಳು ನೇರವಾಗಿ ಅಧಿಕೃತ ವೆಬ್ ಸೈಟ್ https://cetonline.karnataka.gov.in/kea/indexnewನಲ್ಲಿ ಅ.31ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಅಕ್ಟೋಬರ್ 09, 2025
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 31, 2025
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ನವೆಂಬರ್ 1, 2025

ಹುದ್ದೆಯ ವಿವರ:

  • ಸಹಾಯಕ ಎಂಜಿನಿಯರ್ (AE ಸಿವಿಲ್) – 10 ಹುದ್ದೆಗಳು
  • ಜೂನಿಯರ್ ಎಂಜಿನಿಯರ್ (JE ಸಿವಿಲ್) – 05 ಹುದ್ದೆಗಳು
  • ಮಾರುಕಟ್ಟೆ ಮೇಲ್ವಿಚಾರಕ – 30 ಹುದ್ದೆಗಳು
  • ಪ್ರಥಮ ದರ್ಜೆ ಸಹಾಯಕ (FDA) – 30 ಹುದ್ದೆಗಳು
  • ದ್ವಿತೀಯ ದರ್ಜೆ ಸಹಾಯಕ (SDA) – 30 ಹುದ್ದೆಗಳು
  • ಮಾರಾಟ ಸಹಾಯಕರು – 75 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಕರ್ನಾಟಕದ ಕೃಷಿ ಮಾರಾಟ ಇಲಾಖೆಯ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಈ ಕೆಳಗಿನ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ಹೊಂದಿರಬೇಕು;

ಸಹಾಯಕ ಅಭಿಯಂತರು (AE ಸಿವಿಲ್) – ಬಿಇ(ಸಿವಿಲ್)
ಜೂನಿಯರ್ ಅಭಿಯಂತರು (JE) – ಡಿಪ್ಲೊಮಾ(ಸಿವಿಲ್)
ಮಾರುಕಟ್ಟೆ ಮೇಲ್ವಿಚಾರಕ – ಬಿ.ಎಸ್ಸಿ
ಪ್ರಥಮ ದರ್ಜೆ ಸಹಾಯಕ (FDA) – ಪದವಿ
ದ್ವಿತೀಯ ದರ್ಜೆ ಸಹಾಯಕ (SDA) – ಪಿಯುಸಿ
ಮಾರಾಟ ಸಹಾಯಕರು – ಪಿಯುಸಿ

ವಯೋಮಿತಿ:

ಅಧಿಸೂಚನೆಯಲ್ಲಿ ತಿಳಿಸಿರುವಂತೆ, ಕನಿಷ್ಠ ವಯಸ್ಸಿನ ಮಿತಿ ವರ್ಷಗಳು.

ಗರಿಷ್ಠ ವಯಸ್ಸಿನ ಮಿತಿ;

  • ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ – 38 ವರ್ಷಗಳು
  • ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – 41 ವರ್ಷಗಳು
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ /ಪ್ರವರ್ಗ-1 ಅಭ್ಯರ್ಥಿಗಳಿಗೆ – 43 ವರ್ಷಗಳು

ಅರ್ಜಿ ಶುಲ್ಕ:

  • 2A, 2B, 3A, 3B ಅಭ್ಯರ್ಥಿಗಳು – ರೂ.750/-
  • ಪ.ಜಾತಿ/ಪ.ಪಂಗಡ, ಮಾಜಿ ಸೇನಾ ಅಭ್ಯರ್ಥಿಗಳು- 500/-
  • ವಿಕಲಚೇತನ ಅಭ್ಯರ್ಥಿಗಳು – 250/-

ವೇತನ:

ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ,ಮಾಸಿಕ ರೂ. 34,100/- ರಿಂದ ರೂ.̧13̧4200/- ವರೆಗೆ ವೇತನ ನೀಡಲಾಗುವುದು. (ಹುದ್ದೆಗಳ ಆಧಾರಿತವಾಗಿ)

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ
  • ದಾಖಲೆಗಳ ಪರಿಶೀಲನೆ
  • ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ:

ಅಧಿಕೃತ ಜಾಲತಾಣ https://cetonline.karnataka.gov.in/VAOResult/DigilockerReg.aspxಕ್ಕೆ ಭೇಟಿ ನೀಡಿ. ನಂತರ ನಿಮ್ಮ ಇ-ಮೇಲ್, ದೂರವಾಣಿ ಸಂಖ್ಯೆ ನೀಡಿ ರೆಜಿಸ್ಟರ್ ಆಗಿರಿ.

Agricultural Sales Department Karnataka Job Application Form-2025
Agricultural Sales Department Karnataka Job Application Form-2025
  • ಲಾಗಿನ್ ಆಗಿ ಮತ್ತು ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಎಲ್ಲ ವಿವರಗಳನ್ನು ಪೂರೈಸಿ. ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳು ಮತ್ತು ನಿಮ್ಮ ಇತ್ತೀಚಿನ ಛಾಯಾಚಿತ್ರ ಅಪ್‌ಲೋಡ್ ಮಾಡಿ.
  • ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ.
  • ನೀವು ನೀಡಿರುವ ಎಲ್ಲ ಮಾಹಿತಿಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿಕೊಂಡು ಪ್ರಿಂಟ್ ತೆಗೆದಿಟ್ಟುಕೊಳ್ಳಿ.
  • ನಂತರ ಅರ್ಜಿಯನ್ನು Submit ಮಾಡಿ ಅರ್ಜಿ ಸಂಖ್ಯೆಯನ್ನು ಸೆರೆಹಿಡಿಯಿರಿ.

Important Direct Links:

Official Notification NHKDownload
Online Application LinkApply Now
Official Websitekrishimaratavahini.karnataka.gov.in
More UpdatesKarnatakaHelp.in
About the Author

ರಾಮಕೃಷ್ಣ ಬಿ ಹೆಚ್‌ ಅವರು 2020ರಿಂದ ಉದ್ಯೋಗ ಸುದ್ದಿಯ ಮೂಲಕ ತಮ್ಮ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುತ್ತಿದ್ದಾರೆ. ವಿಶೇಷವಾಗಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದ ಕುರಿತಾಗಿ ಆಳವಾದ ಅಧ್ಯಯನವನ್ನು ಇಟ್ಟುಕೊಂಡಿದ್ದು, ಯುವಕರಿಗೆ ಉದ್ಯೋಗದ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದಾರೆ.

3 thoughts on “ಕರ್ನಾಟಕ ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್, JE, FDA, SDA ಹುದ್ದೆಗಳ ಭರ್ತಿ – ಅರ್ಜಿ ಆಹ್ವಾನ”

Leave a Comment