WhatsApp Channel Join Now
Telegram Group Join Now

HESCOM Apprentice Recruitment 2024: ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮದಲ್ಲಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ

ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮದಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮದಲ್ಲಿ ಒಂದು ವರ್ಷದ ಅಪ್ರೆಂಟಿಸ್ ತರಬೇತಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯಲ್ಲಿ ಒಟ್ಟು 338 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ಉದ್ಯೋಗ ತರಬೇತಿ ಜೊತೆಗೆ ಸ್ಟೇ ಫಂಡ್ ನೀಡಲಾಗುತ್ತದೆ.

Hescom Apprentice Recruitment 2024
Hescom Apprentice Recruitment 2024

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ತರಬೇತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನ್ಯಾಷನಲ್ ಅಪ್ರೆಂಟಿಸ್ ಶಿಪ್ ಸ್ಕೀಮ್ (NATS)ನ ಅಧಿಕೃತ ವೆಬ್ ಸೈಟ್ https://mhrdnats.gov.in ಗೆ ಭೇಟಿ ನೀಡಿ ಆಗಸ್ಟ್ 20ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಲೇಖನದಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮದ ಅಪ್ರೆಂಟಿಸ್ ನೇಮಕಾತಿ (HESCOM Apprentice Recruitment 2024)ರ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.

Shortview of HESCOM Apprenticeship 2024

Organization Name – Hubli Electricity Supply Company Limited (HESCOM)
Post Name – Apprentice
Total Vacancy – 338
Application Process: Online
Job Location – Hubli

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಆಗಸ್ಟ್ 5 , 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್ 20 , 2024
  • ಆಯ್ಕೆ ಪಟ್ಟಿ ಬಿಡುಗಡೆಯ ದಿನಾಂಕ – ಆಗಸ್ಟ್ 27, 2024
  • ದಾಖಲಾತಿ ಪರಿಶೀಲನೆಯ ದಿನಾಂಕ – ಸೆಪ್ಟೆಂಬರ್ 9, 2024

ಹುದ್ದೆಗಳ ವಿವರ:

  • ಪದವಿ ಮುಗಿಸಿದವರಿಗೆ – 200
  • ಡಿಪ್ಲೋಮೋ ಮುಗಿಸಿದವರಿಗೆ – 138

ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಮತ್ತು ಡಿಪ್ಲೋಮೋ ಮುಗಿಸಿದವರು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ:

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಪ್ರೆಂಟಿಸ್ ಶಿಪ್ ಕಾಯ್ದೆಯ ಅನುಸಾರ ಅರ್ಜಿ ಸಲ್ಲಿಸುವವರ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ:

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆಗೆ ಕರೆಯಲಾಗುತ್ತದೆ.

ವೇತನ ವಿವರ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ₹9,000 ರಿಂದ ₹8,000 ಸ್ಟೇ ಫಂಡ್ ನೀಡಲಾಗುತ್ತದೆ.

Also Read: IBPS PO Notification 2024(OUT): ವಿವಿಧ ಬ್ಯಾಂಕ್ ಗಳಲ್ಲಿ ಒಟ್ಟು 4455 ಹುದ್ದೆಗಳ ಬೃಹತ್ ಉದ್ಯೋಗಾವಕಾಶ

How to Apply for HESCOM Apprentice Recruitment 2024

ಅರ್ಜಿ ಸಲ್ಲಿಸುವ ಪ್ರಕ್ರಿಯೆ

  • ಮೊದಲಿಗೆ ಅಧಿಕೃತ ವೆಬ್ ಸೈಟಿಗೆ https://nats.education.gov.in/ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ “ಸ್ಟುಡೆಂಟ್ ಲಾಗಿನ್” ಕ್ಲಿಕ್ ಮಾಡಿ.
  • ನೀವು ಹೊಸದಾಗಿ ಪ್ರವೇಶ ನೀಡಿದ್ದರೆ ವಿದ್ಯಾರ್ಥಿ ನೊಂದಣಿಯನ್ನು ಅಗತ್ಯ ವಿವರಗಳನ್ನು ನೀಡಿ ನಿಮ್ಮ ಖಾತೆಯನ್ನು ರಚಿಸಿಕೊಳ್ಳಿ.
  • ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮಗೆ 12 ಅಂಕಿಯ ಇನ್ರೋಲ್ಮೆಂಟ್ ಸಂಖ್ಯೆ ನೀಡಲಾಗುತ್ತದೆ.
  • ಮತ್ತೆ ಮುಖಪುಟಕ್ಕೆ ಬಂದು ಲಾಗಿನ್ ಮಾಡಿ.
  • ಲಾಗಿನ್ ಮಾಡಿದ ನಂತರ ಮತ್ತೊಂದು ಫೋಟೋ ತೆಗೆದುಕೊಳ್ಳುತ್ತದೆ ಅಲ್ಲಿ “Apply against advertised vacancy” ಕ್ಲಿಕ್ ಮಾಡಿ.
  • ಅಲ್ಲಿ ಸರ್ಚ್ ವಿಭಾಗದಲ್ಲಿ “Hubli Electronic supply company” ಎಂದು ಸರ್ಚ್ ಮಾಡಿ.
  • ಕೊನೆಯದಾಗಿ ಅಲ್ಲಿ ಕ್ಲಿಕ್ ಮಾಡಿದ “Apply” ಲಿಂಕ್ ಕ್ಲಿಕ್ ಮಾಡಿ.

Important Direct Links:

Official Notification PDFDownload
Online Application Form Link(Direct Link)Apply Here
Official websiteHescom Karnataka
More UpdatesKarnataka Help.in

Leave a Comment