ಗುಪ್ತಚರ ಇಲಾಖೆಯ ಭದ್ರತಾ ಸಹಾಯಕ/ಕಾರ್ಯನಿರ್ವಾಹಕ ಹುದ್ದೆಗಳ ಭರ್ತಿಗಾಗಿ ನಡೆಸಲಾದ ಶ್ರೇಣಿ-Iರ ಪರೀಕ್ಷೆಯ ಫಲಿತಾಂಶವನ್ನು ಐಬಿ ಬುಧವಾರ ಪ್ರಕಟಿಸಿದೆ.
ದೇಶದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಸೆ.29 ಮತ್ತು 30ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಸದರಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಪಟ್ಟಿಯನ್ನು ಡಿ.17ರಂದು ಇಲಾಖೆಯ ಅಧಿಕೃತ ವೆಬ್ಸೈಟ್ https://cdn.digialm.com/EForms/configuredHtml/1258/94478/Index.htmlನಲ್ಲಿ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಶ್ರೇಣಿ-IIರ ಪರೀಕ್ಷೆಗೆ ಹಾಜರಾಗಲು ಅರ್ಹತೆ ಹೊಂದಿರುತ್ತಾರೆ.
ಶ್ರೇಣಿ-II ಪರೀಕ್ಷೆಗೆ ಸಂಬಂಧಿಸಿದ ದಿನಾಂಕ,ಸಮಯ, ಸ್ಥಳ, ಸಂಬಂಧಿತ ಸೂಚನೆಗಳು ಇತ್ಯಾದಿಗಳನ್ನು ಒಳಗೊಂಡ ಮಾಹಿತಿಯನ್ನು ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ನೋಂದಣಿ ವೇಳೆ ನೀಡಿದ ಮೊಬೈಲ್ ಅಥವಾ ಇ-ಮೇಲ್ಗೆ ಮಾಹಿತಿ ರವಾನಿಸಲಾಗುವುದು ಎಂದು ಫಲಿತಾಂಶವಿರುವ ಪಿಡಿಎಫ್ನಲ್ಲಿ ಮಾಹಿತಿ ನೀಡಲಾಗಿದೆ.
ಗುಪ್ತಚರ ಇಲಾಖೆ ಭದ್ರತಾ ಸಹಾಯಕ/ಕಾರ್ಯನಿರ್ವಾಹಕ ಶ್ರೇಣಿ-I ಫಲಿತಾಂಶ ನೋಡುವುದು ಹೇಗೆ.?
ಹಂತ-1 ಗುಪ್ತಚರ ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್ https://cdn.digialm.com/EForms/configuredHtml/1258/94478/Index.htmlಗೆ ಭೇಟಿ ನೀಡಿ.
ಹಂತ-2 ಮುಂದೆ ಮುಖಪುಟದ “GENERAL LINKS” ಲಿಂಕ್ ವಿಭಾಗದಲ್ಲಿ “Result of SA/Exe 2025 Tier-I exam“ನ ಶಿರ್ಷೀಕೆಯಡಿ ನಿಮ್ಮ ಬಲಭಾಗದಲ್ಲಿ ನೀಡಲಾದ “Click here” ಲಿಂಕ್ ಮೇಲೆ ಒತ್ತುವ ಮೂಲಕ ಗುಪ್ತಚರ ಇಲಾಖೆ ಭದ್ರತಾ ಸಹಾಯಕ/ಕಾರ್ಯನಿರ್ವಾಹಕ ಶ್ರೇಣಿ-I ಫಲಿತಾಂಶವಿರುವ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದು.
Good