ಪ್ರೊಬೇಷನರಿ ಅಧಿಕಾರಿಗಳ (PO) ಮತ್ತು ಮ್ಯಾನೇಜ್‌ಮೆಂಟ್ ಟ್ರೈನಿ(MT) ಪೂರ್ವಭಾವಿ ಪರೀಕ್ಷೆಯ ಪ್ರವೇಶ ಪತ್ರವನ್ನು ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು ಗುರುವಾರ (ಆ.14) ಬಿಡುಗಡೆ ಮಾಡಿದೆ.
2025-26ನೇ ಸಾಲಿಗೆ ಭಾಗವಹಿಸುವ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಪ್ರೊಬೇಷನರಿ ಅಧಿಕಾರಿ/ಮ್ಯಾನೇಜ್‌ಮೆಂಟ್ ಟ್ರೈನಿ (ಪಿಒ/ಎಂಟಿ) ಹುದ್ದೆಗಳ ನೇಮಕಾತಿ ಸಂಬಂಧ ಮೊದಲ ಹಂತದಲ್ಲಿ ನಡೆಸಲಾಗುವ ಪೂರ್ವಭಾವಿ ಪರೀಕ್ಷೆಯ ಪ್ರವೇಶ ಪತ್ರವನ್ನು IBPS ಅಧಿಕೃತ ವೆಬ್ಸೈಟ್ https://www.ibps.in/ನಲ್ಲಿ ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
• IBPS PO ಪೂರ್ವಭಾವಿ ಪರೀಕ್ಷೆಯನ್ನು ಆಗಸ್ಟ್ 17, 23 ಹಾಗೂ 24 ರಂದು ಪ್ರತಿದಿನ ನಾಲ್ಕು ಪಾಳಿಗಳಲ್ಲಿ ( ಬೆಳಿಗ್ಗೆ 9 ರಿಂದ ಬೆಳಿಗ್ಗೆ 10 ರವರೆಗೆ, ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 12.30 ರವರೆಗೆ, ಮಧ್ಯಾಹ್ನ 2 ರಿಂದ ಮಧ್ಯಾಹ್ನ 3 ರವರೆಗೆ ಹಾಗೂ ಸಂಜೆ 4.30 ರಿಂದ 5.30ರವರೆಗೆ) ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ.
• IBPS 2025-26ನೇ ಸಾಲಿಗೆ ಭಾಗವಹಿಸುವ 11 ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
How to Download IBPS PO/MT Prelims Admit Card 2025
IBPS PO ಪೂರ್ವಭಾವಿ ಪರೀಕ್ಷೆ ಪ್ರವೇಶ ಪತ್ರ ಡೌನ್ಲೋಡ್ ಮಾಡುವ ವಿಧಾನ;
Ibps Po Mt Prelims Admit Card 2025 Download Link
• IBPS ಅಧಿಕೃತ ವೆಬ್ಸೈಟ್ https://ibpsreg.ibps.in/crppoxvjun25/oecla_aug25/login.php?appid=f685699dad181c4349a2b421b8427275 ಗೆ ಭೇಟಿ ನೀಡಿ.
• ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕ ನಮೂದಿಸಿ.
• ಕ್ಯಾಪ್ಚವನ್ನು ಭರ್ತಿ ಮಾಡಿ ಲಾಗಿನ್ ಆಗಿ.
• ನಂತರ ನಿಮ್ಮ IBPS PO ಪೂರ್ವಭಾವಿ ಪರೀಕ್ಷೆ ಪ್ರವೇಶ ಪತ್ರ ಕಾಣಸಿಗುತ್ತದೆ.
• ಭವಿಷ್ಯದ ಉಲ್ಲೇಖಕ್ಕಾಗಿ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಿ.
A loser Mera RC card with five months Post office Rt of Please Place
Thimmaraju sira 572137
U