ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ (IDBI) ಸ್ಪೆಷಲಿಸ್ಟ್ ಆಫೀಸರ್(SO) ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯ್ ಸಹಾಯಕ ಜನರಲ್ ಮ್ಯಾನೇಜರ್ ಮತ್ತು ಮ್ಯಾನೇಜರ್ -(ಗ್ರೇಡ್ ಬಿ) ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತದೆ. ಅರ್ಜಿ ಸಲ್ಲಿಸದ ಅಭ್ಯರ್ಥಿಗಳನ್ನು ಅರ್ಹತೆ, ಅನುಭವ ಮತ್ತು ವಯಸ್ಸು ಇತ್ಯಾದಿಗಳ ಆಧಾರದ ಮೇಲೆ ಪ್ರಾಥಮಿಕ ಸ್ಕ್ರೀನಿಂಗ್ ಮತ್ತು ಶಾರ್ಟ್‌ಲಿಸ್ಟಿಂಗ್ ಮಾಡಲಾಗುತ್ತದೆ. ನಂತರ ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಗುಂಪು ಚರ್ಚೆ / ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಪದವಿ ಪಡೆದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳ IDBI Bank Specialist Officer Recruitment 2024 ನೇಮಕಾತಿಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ www.idbibank.in ಗೆ ಭೇಟಿ ನೀಡಿ, ಸೆಪ್ಟೆಂಬರ್ 15 ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಲೇಖನದಲ್ಲಿ IDBI Bank Specialist Officer Vacancy 2024 ರ ನೇಮಕಾತಿ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು, ಗಮನವಿಟ್ಟು ಓದಿರಿ.
Idbi Bank Specialist Officer Recruitment 2024
Shortview of IDBI Bank SO Notification 2024
Organization Name – IDBI Bank Post Name – Specialist Officer (SO) Total Vacancy – 56 Application Process: online Job Location – All Over India
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಸೆಪ್ಟೆಂಬರ್ 01, 2024
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 15, 2024
ಖಾಲಿ ಇರುವ ಹುದ್ದೆಗಳ ವಿವರ:
ಸಹಾಯಕ ಜನರಲ್ ಮ್ಯಾನೇಜರ್ ಹುದ್ದೆಗಳು – 25
ಮ್ಯಾನೇಜರ್ – (ಗ್ರೇಡ್ ಬಿ) ಹುದ್ದೆಗಳು – 31
ವಿದ್ಯಾರ್ಹತೆ:
ಸಹಾಯಕ ಜನರಲ್ ಮ್ಯಾನೇಜರ್ (ಎಜಿಎಂ) (ಗ್ರೇಡ್ ಸಿ) ಹುದ್ದೆಗಳಿಗೆ – ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಾಸ್ ಮಾಡಿರಬೇಕು.
ಕಾರ್ಪೊರೇಟ್ ಹಣಕಾಸು/ ಕಾರ್ಪೊರೇಟ್ ಕ್ರೆಡಿಟ್/ ರಿಟೇಲ್ ಕ್ರೆಡಿಟ್‌ನಲ್ಲಿ ಅಧಿಕಾರಿಯಾಗಿ 7 ವರ್ಷಗಳ ಅನುಭವ ಹೊಂದಿರಬೇಕು.
ಮ್ಯಾನೇಜರ್ – (ಗ್ರೇಡ್ ಬಿ) ಹುದ್ದೆಗಳಿಗೆ – ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಾಸ್ ಮಾಡಿರಬೇಕು.
ಕಮರ್ಷಿಯಲ್ ಬ್ಯಾಂಕ್‌ಗಳಲ್ಲಿ ಕಾರ್ಪೊರೇಟ್ ಫೈನಾನ್ಸ್/ಕಾರ್ಪೊರೇಟ್ ಕ್ರೆಡಿಟ್‌ನಲ್ಲಿ (ಕ್ರೆಡಿಟ್ ಕಾರ್ಯಗಳು ಅಂದರೆ ಮಂಜೂರಾತಿ/ಕ್ರೆಡಿಟ್ ಮಾನಿಟರಿಂಗ್/ ಕ್ರೆಡಿಟ್ ಅಪ್ರೈಸಲ್, ಕ್ರೆಡಿಟ್ ಅಡ್ಮಿನಿಸ್ಟ್ರೇಷನ್/ಆಪರೇಷನ್‌ಗಳು, ಕ್ರೆಡಿಟ್ ರಿಸ್ಕ್, ಇತ್ಯಾದಿ) ಅಧಿಕಾರಿಯಾಗಿ ಅಥವಾ ತತ್ಸಮಾನವಾಗಿ ಕನಿಷ್ಠ 4 ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ:
ಸಹಾಯಕ ಜನರಲ್ ಮ್ಯಾನೇಜರ್ (ಎಜಿಎಂ) (ಗ್ರೇಡ್ ಸಿ) ಹುದ್ದೆಗಳಿಗೆ – ಕನಿಷ್ಠ 28 ಮತ್ತು ಗರಿಷ್ಠ 40 ವರ್ಷಗಳು
ಮ್ಯಾನೇಜರ್ – (ಗ್ರೇಡ್ ಬಿ) ಹುದ್ದೆಗಳಿಗೆ – ಕನಿಷ್ಠ 25 ಮತ್ತು ಗರಿಷ್ಠ 35 ವರ್ಷಗಳು
ಆಯ್ಕೆ ಪ್ರಕ್ರಿಯೆ:
• ಅರ್ಹತೆ, ಅನುಭವ ಮತ್ತು ವಯಸ್ಸು ಇತ್ಯಾದಿಗಳ ಆಧಾರದ ಮೇಲೆ ಪ್ರಾಥಮಿಕ ಸ್ಕ್ರೀನಿಂಗ್ ಮತ್ತು ಶಾರ್ಟ್‌ಲಿಸ್ಟಿಂಗ್ • ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು • ಗುಂಪು ಚರ್ಚೆ / ವೈಯಕ್ತಿಕ ಸಂದರ್ಶನ • ದಾಖಲೆ ಪರಿಶೀಲನೆ • ವೈದ್ಯಕೀಯ ಪರೀಕ್ಷೆ
ವೇತನ ವಿವರ:
ಸಹಾಯಕ ಜನರಲ್ ಮ್ಯಾನೇಜರ್ – ₹1,28,000/- ಮಾಸಿಕ ವೇತನ ನೀಡಲಾಗುತ್ತದೆ.
ಮ್ಯಾನೇಜರ್ – (ಗ್ರೇಡ್ ಬಿ) ಹುದ್ದೆಗಳು – ₹98,000/-ಮಾಸಿಕ ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ/ OBC/ EWS ಅಭ್ಯರ್ಥಿಗಳಿಗೆ – ₹1000
SC/ ST/ ಅಭ್ಯರ್ಥಿಗಳಿಗೆ – ₹200
ಪಾವತಿ ವಿಧಾನ – ಆನ್‌ಲೈನ್ ಮೂಲಕ
How to Apply IDBI Bank Specialist Officer Notification 2024
ಅರ್ಜಿ ಸಲ್ಲಿಸವ ವಿಧಾನ
ಮೊದಲಿಗೆ ಅಧಿಕೃತ ವೆಬ್ ಸೈಟ್ https://ibpsonline.ibps.in/idbiscojul24 ಭೇಟಿ ನೀಡಿ.
ಮುಖಪುಟದಲ್ಲಿ ಕಾಣುವ ‘ನೇಮಕಾತಿ’ ವಿಭಾಗ ಆಯ್ಕೆ ಮಾಡಿ.
ಇತ್ತೀನ ನೇಮಕಾತಿಯಲ್ಲಿ IDBI SO Recruitment 2024 ಆಯ್ಕೆ ಮಾಡಿ.
ಅರ್ಜಿ ನಮೂನೆಯಲ್ಲಿ ಕೇಳಾಗುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ, ಅರ್ಜಿ ಶುಲ್ಕ ವನ್ನು ಪಾವತಿ ಮಾಡಿ.