ಸಮಾಜ ಕಲ್ಯಾಣ ಇಲಾಖೆಯ ಇಂದಿರಾಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ವತಿಯಿಂದ 2025-26ನೇ ಸಾಲಿಗೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ CA ಫೌಂಡೇಶನ್ ಪರೀಕ್ಷಾ ಪೂರ್ವ ತರಬೇತಿ ನೀಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಪ.ಜಾತಿಯ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಚಾರ್ಟರ್ಡ್ ಅಕೌಂಟೆನ್ಸಿ (CA) ಕೋರ್ಸ್ ಪ್ರವೇಶಾತಿಗಾಗಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ನಡೆಸಲಾಗುವ ಕಡ್ಡಾಯ ಪ್ರವೇಶ ಪರೀಕ್ಷೆಯಾಗಿರುವ CA ಫೌಂಡೇಶನ್ ಪರೀಕ್ಷೆಗೆ ಉಚಿತವಾಗಿ ಆನ್ಲೈನ್ ಮೂಲಕ ಪೂರ್ವ ಪರೀಕ್ಷಾ ತರಬೇತಿ ನೀಡಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಸೆ.20 ರೊಳಗೆ https://swdservices.karnataka.gov.in/petccoaching/CAHome.aspx ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಬೆಂಗಳೂರು ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಧಿಕೃತ ಅಧಿಸೂಚನೆಯ ಪ್ರಕಾರ ವಿದ್ಯಾರ್ಥಿಗಳು 2025ರ ಸೆ.20 ರೊಳಗೆ ಮಾನ್ಯತೆ ಪಡೆದ ಸಂಸ್ಥೆಯಿಂದ ಪ್ರಸ್ತುತ 2025-26ನೇ ಸಾಲಿಗೆ ಪ್ರಥಮ ಪಿಯುಸಿ /11ನೇ ತರಗತಿಗೆ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರಬೇಕು.
ವಯೋಮಿತಿ:
20-09-2025 ರಂತೆ ಕನಿಷ್ಠ ವಯಸ್ಸಿನ ಮಿತಿ – 15 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ತರಬೇತಿಯ ವಿವರ:
ಪ್ರಸಕ್ತ ಸಾಲಿನಲ್ಲಿ ಪ್ರಥಮ ಪಿಯುಸಿ/11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಸದರಿ ವಿದ್ಯಾರ್ಥಿಗಳು 2026-27ನೇ ಸಾಲಿಗೆ ಮುಂದುವರೆದು ದ್ವಿತೀಯ ಪಿಯುಸಿ/12ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ನುರಿತ ತರಬೇತಿ ಸಂಸ್ಥೆಯಿಂದ (ತರಬೇತಿಯ ಅವಧಿ 500 ಗಂಟೆಗಳು 2025-26 ರಿಂದ 2026-27ರವರೆಗೆ ) ಸಿ.ಎ. ಫೌಂಡೇಶನ್ ಪರೀಕ್ಷಾ ಪೂರ್ವ ಆನ್ಲೈನ್ ತರಬೇತಿ ನೀಡಲಾಗುವುದು.
ಅರ್ಜಿ ಸಲ್ಲಿಸಲು ಇರಬೇಕಾದ ಸಾಮಾನ್ಯ ಅರ್ಹತೆಗಳು:
ಅಭ್ಯರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
ಅಭ್ಯರ್ಥಿಯು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು
ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಹೊಂದಿರಬೇಕು.
ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ 5 ಲಕ್ಷ ರೂ. ಮೀರಿರಬಾರದು.
ಆಯ್ಕೆ ವಿಧಾನ:
ಮೊದಲು ಅರ್ಜಿ ಸಲ್ಲಿಸದವರಿಗೆ ಪ್ರಥಮ ಆದ್ಯತೆ ನೀಡಿ.
ತರಬೇತಿಯ ನಿಯಮಗಳು ಮತ್ತು ಷರತ್ತುಗಳು:
• ಅಭ್ಯರ್ಥಿಯು ಕಡ್ಡಾಯವಾಗಿ ತರಬೇತಿ ನಿಯಮ, ನಿಬಂಧನೆಗಳನ್ನು ಮತ್ತು ತರಬೇತಿಯ ವೇಳಾಪಟ್ಟಿಯನ್ನು ಪಾಲಿಸಬೇಕಯ
• ತರಬೇತಿ ಸಂಸ್ಥೆ, ಅಧ್ಯಾಪಕ ಸದಸ್ಯರು ಅಥವಾ ಬೋಧಕರ ಕಡೆಗೆ ಅವಿಧೇಯತೆ ಅಥವಾ ದುರ್ನಡತೆ ಪ್ರದರ್ಶಿಸುವ ಯಾವುದೇ ಅಭ್ಯರ್ಥಿಯನ್ನು ತಕ್ಷಣವೇ ಅನರ್ಹಗೊಳಿಸಲಾಗುತ್ತದೆ.
• ಅಭ್ಯರ್ಥಿಯು ಎರಡು ವರ್ಷಗಳ ತರಬೇತಿಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಪರೀಕ್ಷೆಯನ್ನು ನಡೆಸಿ, ಅದರ ಫಲಿತಾಂಶದ ಮೇಲೆ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡುವ ಸಂಪೂರ್ಣ ಅಧಿಕಾರವನ್ನು ಇಲಾಖೆಯು ಹೊಂದಿದೆ.
• ಅಭ್ಯರ್ಥಿಯು ಕಡ್ಡಾಯವಾಗಿ ಪ್ರಥಮ ಪಿಯುಸಿ/11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು.
How to Apply for Free CA Foundation Training 2025
ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಅಧಿಕೃತ https://swdservices.karnataka.gov.in/petccoaching/CAHome.aspx ಜಾಲತಾಣಕ್ಕೆ ಭೇಟಿ ನೀಡಿ.
CA ಫೌಂಡೇಶನ್ ಗಾಗಿ ಪೂರ್ವ-ಪರೀಕ್ಷಾ ಆನ್ಲೈನ್ ತರಬೇತಿಗಾಗಿ ಅರ್ಜಿ – ವಿಭಾಗದ ಕೆಳಗೆ ನೀಡಲಾಗಿರುವ ಅನ್ವಯಿಸು ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಂತರ ನಿಮ್ಮ ಆಧಾರ್ ಸಂಖ್ಯೆ, ಆಧಾರ್ ನಲ್ಲಿರುವಂತೆ ನಿಮ್ಮ ಹೆಸರು ಹಾಗೂ ಕ್ಯಾಪ್ಚ ನಮೂದಿಸಿ ಮುಂದುವರೆಯಿರಿ.
ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ, ಭಾವಚಿತ್ರ ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
2 year commerce naxt yaer ca chartered account choice