ಭಾರತೀಯ ಸೇನೆಯ ಮಿಲಿಟರಿ ಪಡೆಗಳಲ್ಲಿ ಪ್ರತಿ ವರ್ಷದಂತೆ 2024 ರ ಸಾಲಿನ ಟೆಕ್ ಎಂಟ್ರಿ ಸ್ಕೀಮ್ ಮೂಲಕ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ತಾಂತ್ರಿಕ ವಿಷಯಗಳಲ್ಲಿ ಪದವಿ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಶಾರ್ಟ್ ಸರ್ವೀಸ್ ಕಮಿಷನ್(SSE) ಮೂಲಕ 64ನೇ ಟೆಕ್ ಎಂಟ್ರಿ ಕೋರ್ಸ್‌ಗೆ ಪುರುಷ ಅಭ್ಯರ್ಥಿಗಳಿಂದ, 35ನೇ ಬ್ಯಾಚ್ ಟೆಕ್ ಎಂಟ್ರಿ ಕೋರ್ಸ್‌ಗೆ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.:ಈ ಯೋಜನೆಯಡಿ ಒಟ್ಟು 381 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಇದರಲ್ಲಿ SSC ತಾಂತ್ರಿಕ ಅಧಿಕಾರಿ (ಲೆಫ್ಟಿನೆಂಟ್) ಹುದ್ದೆಗಳು ಸೇರಿವೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್ ಸೈಟ್ www.joinindianarmy.nic.in ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು ಗಮನವಿಟ್ಟು ಓದಿರಿ.