Indira Gandhi Pension Scheme: ವೃದ್ಧಾಪ್ಯ ಪಿಂಚಣಿ ಯೋಜನೆ, ಕುಳಿತಲ್ಲೇ ಪ್ರತಿ ತಿಂಗಳು ಹಣ ಪಡೆಯಿರಿ, ಈಗಲೇ ತಿಳಿಯಿರಿ!

By ಕರ್ನಾಟಕ ಹೆಲ್ಪ್ ಡೆಸ್ಕ್

Published On:

ಫಾಲೋ ಮಾಡಿ

Indira Gandhi Pension Scheme Karnataka
Old Age Pension Scheme Karnataka

ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ವತಿಯಿಂದ ಕರ್ನಾಟಕದಾದ್ಯಂತ ಇಂದಿರಾಗಾಂಧಿ ವೃದ್ಧಾಪ್ಯ ಯೋಜನೆ(Indira Gandhi Pension Scheme) ಯಡಿ ಬಡತನ ರೇಖೆಗಿಂತ ಕೆಳಗಿರುವ 60 ವರ್ಷ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರಿಗಾಗಿ ಮಾಸಾಶನವನ್ನು ನೀಡಲಾಗುತ್ತದೆ.

ಹಿರಿಯರ ಸಾಮಾಜಿಕ ಭದ್ರತೆಗಾಗಿ ಸರ್ಕಾರ ವೃದ್ಧಾಪ್ಯ ಪಿಂಚಣಿ ಯೋಜನೆಯನ್ನು 1965 ರಿಂದ ಪ್ರಾರಂಭಿಸಲಾಗಿದೆ. ವಯಸ್ಸಾದಂತೆ ಕೆಲಸ ಮಾಡೋದು ತುಂಬಾ ಕಷ್ಟ ಹೀಗಿರುವಾಗ ಸರ್ಕಾರದ ಈ ಯೋಜನೆಯನ್ನು ವಯೋವೃದ್ದರೂ ಸದುಪಯೋಗ ಪಡಿಸಿಕೊಳ್ಳಬೇಕು. ಈ ಯೋಜನೆಯ ಕುರಿತಂತೆ ಅರ್ಹತಾ ಮಾನದಂಡ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ಪಿಂಚಣಿ ಮೊತ್ತದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

Eligibility for Indira Gandhi Pension Scheme

ಯೋಜನೆಯ ಅರ್ಹತಾ ಮಾನದಂಡಗಳೇನು? ಈ ಕೆಳಗಿನಂತಿವೆ;

  • ಫಲಾನುಭವಿಗಳು 60 ವರ್ಷ ಹಾಗೂ ಮೇಲ್ಪಟ್ಟ ವಯಸ್ಸುಳ್ಳವರಾಗಿರಬೇಕು ಹಾಗೂ ಬಡತನ ರೇಖೆಗಿಂತ (BPL Card) ಕೆಳಗಡೆ ಇರಬೇಕು.
  • ಫಲಾನುಭವಿಯ ವಾರ್ಷಿಕ ಆದಾಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 32 ಸಾವಿರಕ್ಕಿಂತ ಕಡಿಮೆ ಇರಬೇಕು.
  • ಫಲಾನುಭವಿ ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಯೋಜನೆಯಡಿ ಯಾವುದೇ ತರಹದ ಪಿಂಚಣಿ ಇತ್ಯಾದಿಗಳನ್ನು ಸಾರ್ವಜನಿಕ ಅಥವಾ ಖಾಸಗಿ ಮೂಲಗಳಿಂದ ಪಡೆಯುತ್ತಿರಬಾರದು.
  • ಫಲಾನುಭವಿಗಳಿಗೆ ಗಂಡು ಮಕ್ಕಳು ಇದ್ದಾಗ್ಯೂ ಅವರು ಫಲಾನುಭವಿಗಳನ್ನು ಘೋಷಿಸದೇ ಇದ್ದಲ್ಲಿ ಈ ಮಾಸಾಶನವನ್ನು ಪಡೆಯಬಹುದಾಗಿದೆ.
  • ಜನನ ಪ್ರಮಾಣ ಪತ್ರ, ವೈದ್ಯಕೀಯ ದೃಢೀಕರಣ ಪತ್ರ ಅಥವಾ ಭಾರತ ಚುನಾವಣಾ ಆಯೋಗವು ನೀಡಿರುವ ಮತದಾರರ ಗುರುತಿನ ಚೀಟಿಯಲ್ಲಿರುವ ಜನ್ಮ ದಿನಾಂಕವು ವಯಸ್ಸಿಗೆ ಸಂಬಂಧಿಸಿದ ದಾಖಲೆಯಾಗಿರುತ್ತದೆ.

Documents Required for Indira Gandhi Pension Scheme

ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಈ ಕೆಳಗಿನಂತಿವೆ;

  1. ಅರ್ಜಿದಾರರ ಫೋಟೋ
  2. ಪಡಿತರ ಚೀಟಿ
  3. EPIC (ಮತದಾರರ ಗುರುತಿನ ಚೀಟಿ)
  4. ಐಡಿ ಪ್ರೂಫ್
  5. ನಿವಾಸ ಪ್ರಮಾಣಪತ್ರ(ವಾಸಸ್ಥಳ )
  6. ವಯಸ್ಸಿನ ಪ್ರಮಾಣಪತ್ರ
  7. ಆದಾಯ ಪ್ರಮಾಣಪತ್ರ
  8. ಗಂಡನ ಮರಣ ಪ್ರಮಾಣಪತ್ರ (ಅನ್ವಯಿಸಿದರೆ)
  9. ವಿಳಾಸ ಪುರಾವೆ(ಆಧಾರ್ ಕಾರ್ಡ್)
  10. ಬ್ಯಾಂಕ್ ಖಾತೆ (PassBook)

ಪಿಂಚಣಿ ಮೊತ್ತ (Old Age Pension Amount Details):

• ಈ ಯೋಜನೆಯಲ್ಲಿ ಪ್ರತಿ ತಿಂಗಳು 60 ರಿಂದ 64 ವರ್ಷದೊಳಗಿನ ಹಿರಿಯ ನಾಗರೀಕರಿಗೆ 600 ರೂ.

• 65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ 1200 ರೂಗಳನ್ನು ನೇರವಾಗಿ ಸಂಬಂಧಿಸಿದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

How to Apply (ಅರ್ಜಿ ಸಲ್ಲಿಸುವುದು ಹೇಗೆ ?)

ಇಂದಿರಾಗಾಂಧಿ ವೃದ್ಧಾಪ್ಯ ಯೋಜನೆಗೆ ಫಲಾನುಭವಿಗಳು ಆಫ್ ಲೈನ್ ಮೂಲಕ ವಾಸಸ್ಥಳ ವ್ಯಾಪ್ತಿಯ ಅಟಲ್‌ ಜೀ ಜನಸ್ನೇಹಿ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹುದು.

Important Direct Links:

Indira Gandhi Pension Scheme Online Application Form 2025 LinkApply Now
More UpdatesKarnataka Help.in

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

For Feedback - admin@karnatakahelp.in

1 thought on “Indira Gandhi Pension Scheme: ವೃದ್ಧಾಪ್ಯ ಪಿಂಚಣಿ ಯೋಜನೆ, ಕುಳಿತಲ್ಲೇ ಪ್ರತಿ ತಿಂಗಳು ಹಣ ಪಡೆಯಿರಿ, ಈಗಲೇ ತಿಳಿಯಿರಿ!”

  1. ನನ್ನ ಯಜಮಾನಿಗೆ 73 ವರ್ಷ. ಯಾವುದೇ ಆಸ್ತಿ ಅಥವಾ ಆದಾಯ ಇಲ್ಲ. ಹ್ರದಯ ಸಂಬಂಧಿ ಕಾಯಿಲೆಗೆ, ಡಯಾಬಿಟೀಸ್ ಔಷಧಿಗೆ ತಿಂಗಳಿಗೆ 2,500 ರೂಪಾಯಿ ಖರ್ಚು ತಗಲುತ್ತದೆ. ವ್ರದ್ದ್ಯಾಪ್ಯ ವೇತನ ಹೇಗೆ ಪಡೆಯ ಬಹುದು??

    ಉತ್ತರ

Leave a Comment