ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL)ನ ಮಾರ್ಕೆಟಿಂಗ್ ವಿಭಾಗದಲ್ಲಿ 1961ರ ಅಪ್ರೆಂಟಿಸ್ ಕಾಯ್ದೆಯಡಿ ವಿವಿಧ ಅಪ್ರೆಂಟಿಸ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಟ್ರೇಡ್ ಅಪ್ರೆಂಟಿಸ್, ಟೆಕ್ನಿಷಿಯನ್ ಅಪ್ರೆಂಟಿಸ್ ಹಾಗೂ ಗ್ರಾಜುಯೇಟ್ ಅಪ್ರೆಂಟಿಸ್ ಸೇರಿದಂತೆ 501 ಅಭ್ಯರ್ಥಿಗಳಿಗೆ ತರಬೇತಿ ನೀಡಲಿದೆ. ಅರ್ಜಿ ಸಲ್ಲಿಕೆಗೆ ಜ.12 ಕೊನೆಯ ದಿನವಾಗಿದೆ. ಆಸಕ್ತ ಐಟಿಐ ಅಭ್ಯರ್ಥಿಗಳು https://www.apprenticeshipindia.gov.in/ಗೆ ಹಾಗೂ ಡಿಪ್ಲೊಮಾ, ಪದವೀಧರ ಅಭ್ಯರ್ಥಿಗಳು https://nats.education.gov.in/ಗೆ ಭೇಟಿ ನೀಡಿ ಅರ್ಜಿ ಸಲ್ಲಸಬಹುದು.
ನೇಮಕಾತಿಗೆ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಡಿಸೆಂಬರ್ 27, 2025
ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜನವರಿ 12, 2025
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ/ ಸಂಬಂಧಿತ ಟ್ರೇಡ್ನಲ್ಲಿ ಐಟಿಐ/ ಸಂಬಂಧಿತ ವಿಭಾಗದಲ್ಲಿ ಇಂಜಿನಿಯರಿಂಗ್/ ಡಿಪ್ಲೊಮಾ/ ಪದವಿ ಪೂರ್ಣಗೊಳಿಸಿರಬೇಕು.
ಟ್ರೇಡ್ ಅಪ್ರೆಂಟಿಸ್ – ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಟೆಕ್ನಿಷಿಯನ್ ಅಪ್ರೆಂಟಿಸ್ – ಸಂಬಂಧಿತ ವಿಷಯದಲ್ಲಿ ಇಂಜಿನಿಯರಿಂಗ್/ಡಿಪ್ಲೊಮಾ ಗ್ರಾಜುಯೇಟ್ ಅಪ್ರೆಂಟಿಸ್ – ಸಂಬಂಧಿತ ವಿಭಾಗದಲ್ಲಿ ಪದವಿ
ವಯೋಮಿತಿ:
31-12-2025 ರಂತೆ;
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು ಗರಿಷ್ಠ ವಯಸ್ಸಿನ ಮಿತಿ – 24 ವರ್ಷಗಳು
ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯಾ ಟ್ರೇಡ್ ಗಳಿಗೆ ಅನುಗುಣವಾಗಿ ಸರ್ಕಾರವು ಅಪ್ರೆಂಟಿಸ್ ನಿಯಮಗಳ ಅಡಿಯಲ್ಲಿ ನಿಗದಿಪಡಿಸಲಾದ ಸ್ಟೈಫಂಡ್ ಮೊತ್ತ ಹಾಗೂ ಜೊತೆಗೆ 2500ರೂ. ಹೆಚ್ಚುವರಿ ಮೊತ್ತವನ್ನು ಇತರ ವೆಚ್ಚಗಳಾಗಿ ಅಪ್ರೆಂಟಿಸ್ಗಳಿಗೆ ಪಾವತಿಸಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
• ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು NAPS ಅಧಿಕೃತ ವೆಬ್ಸೈಟ್ https://www.apprenticeshipindia.gov.in/ಗೆ ಭೇಟಿ ನೀಡಿ ನೋಂದಾಯಿಸಿ.
• ಟೆಕ್ನಿಷಿಯನ್ ಹಾಗೂ ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು NATS ಅಧಿಕೃತ ವೆಬ್ಸೈಟ್ https://nats.education.gov.in/student_register.php ಗೆ ಭೇಟಿ ನೀಡಿ ನೋಂದಾಯಿಸಿ.
• ಬಳಿಕ ಸರ್ಚ್ ಬಾರ್ ನಲ್ಲಿ “ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ 1961ರ ಅಪ್ರೆಂಟಿಸ್ ಕಾಯ್ದೆಯಡಿಯಲ್ಲಿ ಅಪ್ರೆಂಟಿಸ್ಗಳ ನೇಮಕಾತಿ” ಜಾಹೀರಾತು ಹುಡುಕಿ ನಂತರ ಅನ್ವಯಿಸು ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಅಭ್ಯರ್ಥಿಗಳು ಸಂಬಂಧಿತ ಅವಕಾಶಕ್ಕಾಗಿ ಆಯಾ ಪೋರ್ಟಲ್ ಮೂಲಕ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ಬಳಿಕ.
• ಮೈಕ್ರೋಸಾಫ್ಟ್ ಆಫೀಸ್ ಫಾರ್ಮ್ ಅಧಿಕೃತ ವೆಬ್ಸೈಟ್ https://forms.office.com/r/JtB9aJALr9 ಗೆ ಭೇಟಿ ನೀಡಿ.
• ಫಾರ್ಮ್ ನಲ್ಲಿ ಕೇಳಲಾಗುವ ಅಗತ್ಯ ಮಾಹಿತಿಯನ್ನು ಸಲ್ಲಿಸಬೇಕು.
Laxmi Father name is Narsimha village midagldinni district Raichur Karnataka india