WhatsApp Channel Join Now
Telegram Group Join Now

IPPB Recruitment 2024:ಅಂಚೆ ಪೇಮೆಂಟ್ ಬ್ಯಾಂಕ್ ನಲ್ಲಿ ಪದವಿ ಪಡೆದವರಿಗೆ ನೇರ ನೇಮಕಾತಿ

IPPB Recruitment 2024: ಕೇಂದ್ರ ಸರ್ಕಾರದ ಅಂಚೆ ಇಲಾಖೆಯಲ್ಲಿನ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಗಳಲ್ಲಿ ಖಾಲಿ ಇರುವ ಬ್ಯಾಂಕ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಪದವಿ ಪಡೆದಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಭಾರತದ ಅತ್ಯಂತ 1,55,015 ಪೋಸ್ಟ್ ಆಫೀಸ್‍ಗಳನ್ನು ಭಾರತೀಯ ಅಂಚೆ ಇಲಾಖೆ ಹೊಂದಿದ್ದು ಇದರ ಜೊತೆಗೆ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ಕೂಡ ನೀಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಇನ್ನಷ್ಟು ಬಲಪಡಿಸಲು ಪೇಮೆಂಟ್ಸ್ ಬ್ಯಾಂಕ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಸೇಲ್ಸ್ ಮತ್ತು ಆಪರೇಷನ್ ವಿಭಾಗದಲ್ಲಿ ಖಾಲಿ ಇರುವ ಒಟ್ಟು 47 ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಈ ನೇಮಕಾತಿಗೆ ಸಂಬಂಧಿಸಿದಂತೆ ಅಧಿಕೃತ ಪ್ರಕಟಣೆಯ ಮಾಹಿತಿಯನ್ನು ಈ ಕೆಳಗೆ ನೀಡಿ ಸಂಪೂರ್ಣವಾಗಿ ವಿವರಿಸಲಾಗಿದೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

IPPB Recruitment 2024

Organization Name –India Post Payment Bank
Post Name – Bank Circle Executive
Total Vacancy – 47
Application Process: Online
Job Location – All over India (Karnataka)

Ippb Recruitment 2024
Ippb Recruitment 2024

Qualification, Age Limit, Application Fee and Selection Process Details

Important Dates:

ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಪ್ರಮುಖ ದಿನಾಂಕಗಳು

  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ- 15 ಮಾರ್ಚ್ 2024.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 5 ಏಪ್ರಿಲ್ 2024

ವಿದ್ಯಾರ್ಹತೆ‌:

ಯಾವುದೇ ಪದವಿ ಪಾಸ್ ಮಾಡಿರುವವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. MBA in Sales ಅಥವಾ ಮಾರ್ಕೆಟಿಂಗ್ ವಿಭಾಗದಲ್ಲಿ ಓದಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಫ್ರೆಶರ್ ಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಆಪರೇಷನ್ ಇನ್ ಫೈನಾನ್ಸ್ ನಲ್ಲಿ ಕೆಲಸ ಮಾಡಿದ ಅನುಭವ ಇರುವವರಿಗೆ ಮೊದಲ ಆದ್ಯತೆ ನೀಡಲಾಗುವುದು.

ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ:

ಖಾಲಿ ಇರುವ ಹುದ್ದೆಗಳಿಗೆ‌ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಿರುವಂತೆ ಕನಿಷ್ಟ 21 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.

ಆಯ್ಕೆ ವಿಧಾನ

ಅಭ್ಯರ್ಥಿಗಳ ತಮ್ಮ ಪದವಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಿ‌ ಹಾಗೂ ವೈಯಕ್ತಿಕ ಸಂದರ್ಶನ ಮಾಡಲಾಗುತ್ತದೆ.

ವೇತನ ವಿವರ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 30,000ರೂ ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಎಸ್ಸಿ /ಎಸ್ಟಿ/ ಅಭ್ಯರ್ಥಿಗಳಿಗೆ – 150/-
ಇತರೆ ಎಲ್ಲ ವರ್ಗದವರಿಗೆ – 750/-

How to Apply IPPB Recruitment 2024

ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

  • ಮೊದಲಿಗೆ www.ippbonline.com ವೆಬ್ ಸೈಟ್ ಗೆ ಭೇಟಿ ನೀಡಿ.
  • ತದನಂತರ ಅಲ್ಲಿ ಕಾಣಿಸುವ ‘Careers’ ಮೇಲೆ ಕ್ಲಿಕ್ ಮಾಡಿ.
  • ಪರದೆಯಲ್ಲಿ ಕಾಣುವ ‘Current openings’ ನಲ್ಲಿ ಕಾಣುವ ‘ Recruitment of 47 Circle based Executive on Contract Basis’ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ತದನಂತರ ಅಲ್ಲಿ ಕಾಣಿಸುವ ‘ Apply online’ ಮೇಲೆ ಕ್ಲಿಕ್ ಮಾಡಿ.
  • ಹೊಸದೊಂದು ವೆಬ್ ಪೇಜ್ ತೆರೆಯುತ್ತದೆ ಅಲ್ಲಿ ಕಾಣುವ ‘Click for new Registration’ ಮೇಲೆ ಕ್ಲಿಕ್ ಮಾಡಿ ನೋಂದಣಿ ಯಶಸ್ವಿಯಾದ ಬಳಿಕ ವೈಯಕ್ತಿಕ ವಿವರಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.

Important Links:

Official Notification PDFDownload
Apply OnlineApply Now
Official Websiteippbonline.com
More UpdatesKarnataKahelp

FAQs – IPPB Notification 2024

How to Apply for IPPB Bank Circle Executive Vacancy 2024?

Visit the official Website of ippbonline.com to Apply Online

Leave a Comment