ITBP Constable Pioneer Recruitment 2024: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP) ಕಾನ್ಸ್‌ಟೇಬಲ್ (ಪಯೋನೀರ್) ಹುದ್ದೆಗಳ ಭರ್ತಿಗಾಗಿ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ನೇಮಕಾತಿ ಮೂಲಕ ಒಟ್ಟು 202 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಕಾನ್ಸ್ಟೇಬಲ್
ಕಾರ್ಪೆಂಟರ್, ಪ್ಲಂಬರ್, ಮೇಸನ್, ಎಲೆಕ್ಟ್ರಿಷಿಯನ್ ಹುದ್ದೆಗಳಗೆ ಅರ್ಜಿ ಅಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ITBP ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ITBP ನ ಅಧಿಕೃತ ವೆಬ್ ಸೈಟ್ https://recruitment.itbpolice.nic.in ಭೇಟಿ ನೀಡಿ ಸೆಪ್ಟೆಂಬರ್ 10 ರ ಒಳಗೆ ಅರ್ಜಿಯನ್ನು ಸಲ್ಲಿಸಬೇಕು. ITBP ಕಾನ್ಸ್‌ಟೇಬಲ್ ನೇಮಕಾತಿ 2024 ಕುರಿತಾದ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು ಗಮನವಿಟ್ಟು ಓದಿರಿ.
ಪ್ರಮುಖ ದಿನಾಂಕಗಳು:
- ಅರ್ಜಿ ಪ್ರಾರಂಭದ ದಿನಾಂಕ: 12-08-2024
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 10-09-2024
ಖಾಲಿ ಇರುವ ಹುದ್ದೆಗಳ ವಿವರ:
- ಕಾನ್ಸ್ಟೇಬಲ್ (ಕಾರ್ಪೆಂಟರ್) – 71
- ಕಾನ್ಸ್ಟೇಬಲ್ (ಪ್ಲಂಬರ್) – 52
- ಕಾನ್ಸ್ಟೇಬಲ್ (ಮೇಸನ್) – 64
- ಕಾನ್ಸ್ಟೇಬಲ್ (ಎಲೆಕ್ಟ್ರಿಷಿಯನ್) – 15
ಒಟ್ಟು – 202
ವಿದ್ಯಾರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್ ಅಥವಾ 10ನೇ ತರಗತಿಯಲ್ಲಿ ಪಾಸ್ ಆಗಿರಬೇಕು. ಹಾಗೆಯೇ ಐಟಿಐನಲ್ಲಿ ಸಂಬಂಧಿತ ವಿಷಯದಲ್ಲಿ ಒಂದು ವರ್ಷದ ಕೋರ್ಸ್ ಮಾಡಿರಬೇಕು.
ವಯೋಮಿತಿ:
ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳ ವಯಸ್ಸು ಸೆಪ್ಟೆಂಬರ್ 07, 2024 ರಂತೆ 18 ರಿಂದ 30 ವರ್ಷಗಳ ನಡುವೆ ಇರಬೇಕು.
ಆಯ್ಕೆ ಪ್ರಕ್ರಿಯೆ:
ಶಾರೀರಿಕ ದಕ್ಷತೆ ಪರೀಕ್ಷೆ, ದೈಹಿಕ ಗುಣಮಟ್ಟದ ಪರೀಕ್ಷೆ, ಲಿಖಿತ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ.
ಸಂಬಳ / ಪೇ ಸ್ಕೇಲ್:
ಪೇ ಸ್ಕೇಲ್, ಹಂತ- 3 ಪೇ ಮ್ಯಾಟ್ರಿಕ್ಸ್ ₹21,700- ₹69,100/- (7ನೇ CPC ಪ್ರಕಾರ).
ಅರ್ಜಿ ಶುಲ್ಕ:
• UR/OBC/EWS ವರ್ಗಕ್ಕೆ ಸೇರಿದ ಪುರುಷ ಅಭ್ಯರ್ಥಿಗಳಳಿಗೆ- ರೂ. 100
• SC/ST/ಮಹಿಳೆಯರು ಮತ್ತು ಮಾಜಿ ಸೈನಿಕರಿಗೆ ಸೇರಿದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
How to Apply for ITBP Constable Pioneer Recruitment 2024:
ಅರ್ಜಿ ಸಲ್ಲಿಸುವುದು ಹೇಗೆ..?
- ಅಧಿಕೃತ ವೈಬ್ ಸೈಟ್ https://recruitment.itbpolice.nic.in/rect/index.php ಭೇಟಿ ನೀಡಿ.
- ಈಗ ಹೊಸ “ನೋಂದಣಿ ಬಟನ್” ಕ್ಲಿಕ್ ಮಾಡಿ ಮತ್ತು ಸರಿಯಾದ ವಿವರಗಳೊಂದಿಗೆ ನೋಂದಾಯಿಸಿ
- ನೋಂದಾಯಿಸಿದ ನಂತರ ನೀವು ನೋಂದಾಯಿತ ಮೊಬೈಲ್ ಸಂಖ್ಯೆಗೆ ಮತ್ತು ಇಮೇಲ್ ಐಡಿ ನೋಂದಣಿ ಐಡಿ ಮತ್ತು ಪಾಸ್‌ವರ್ಡ್ ಬರುತ್ತದೆ.
- ಈಗ ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಿ ಮತ್ತು ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
- ನಂತರ ಅಗತ್ಯವಿರುವ ಪ್ರಮುಖ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಅಗತ್ಯವಿದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ.
- ಈಗ ನಿಮ್ಮ ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ.
Important Direct Links:
Official Full Notification PDF | Download |
Official Short Notification PDF | Download |
Online Application Link | Registration ————— Login |
Official Website | itbpolice.nic.in |
More Updates | Karnataka Help.in |