ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರದ ಸುಬೇದಾರ್ ಪಾಳ್ಯ ಮತ್ತು ಗಾಂಧಿಗ್ರಾಮ ಆರೋಗ್ಯ ಕೇಂದ್ರಗಳಲ್ಲಿ ಜನೌಷಧಿ ಮಳಿಗೆಗಳನ್ನು ಪ್ರಾರಂಭಿಸಲು(Janaushadhi Kendra Application 2025) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಾಮಾನ್ಯ ಬಡ ಜನರಿಗೆ ಉತ್ತಮ ಗುಣಮಟ್ಟದ ಜೆನರಿಕ್ ಔಷಧಿಗಳನ್ನು ಕಡಿಮೆ ಕೈಗೆಟುಕುವ ದರದಲ್ಲಿ ಕೇಂದ್ರ ಸರ್ಕಾರದ ಜನೌಷಧಿ ಕಾರ್ಯಕ್ರಮ(PM Bhartiya Janaushadhi Pariyojana)ದಡಿ ಜನೌಷಧಿ ಮಳಿಗೆಗಳ ಮೂಲಕ ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಜನೌಷಧಿ ಮಳಿಗೆಗಳನ್ನು ಪ್ರಾರಂಭಿಸಲು ಅರ್ಹ ಸರ್ಕಾರೇತರ ಸಂಸ್ಥೆಗಳು, ದತ್ತಿ ಸಂಸ್ಥೆಗಳು, ನಿರೂದ್ಯೋಗಿ ಯುವಕರು, ಹಾಗೂ ಪದವಿ ಫಾರ್ಮಸಿಸ್ಟ್ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆಯ ಪ್ರಕಟಣೆಯ ದಿನಾಂಕ – 06-05-2025
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ -12-05-2025
ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆ:
- ಸರ್ಕಾರೇತರ ಸಂಸ್ಥೆಗಳು.
- ದತ್ತಿ ಸಂಸ್ಥೆಗಳು.
- ಫಾರ್ಮಸಿಸ್ಟ್ ಪದವಿ ಹೊಂದಿರುವ ನಿರುದ್ಯೋಗಿ ಯುವಕರು.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:
ಸರ್ಕಾರೇತರ ಸಂಸ್ಥೆಗಳು, ದತ್ತಿ ಸಂಸ್ಥೆಗಳು;
- ಸದರಿ ಸಂಸ್ಥೆಯ ನೊಂದಣಿ ಪತ್ರ ಮತ್ತು ಸದರಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರ.
- ಫಾರ್ಮಸಿಸ್ಟ್‌ಗಳ ಪ್ರಮಾಣ ಪತ್ರ.
- ಆಧಾರ್ ಮತ್ತು ಪಾನ್ ಕಾರ್ಡ್.
- ಅರ್ಜಿ ಸಲ್ಲಿಸುತ್ತಿರುವ ಜನೌಷಧಿ ಕೇಂದ್ರಗಳ ವಿಳಾಸ.
ಫಾರ್ಮಸಿಸ್ಟ್ ಪದವಿ ಹೊಂದಿರುವ ನಿರುದ್ಯೋಗಿ ಯುವಕರು;
- ಫಾರ್ಮಸಿಸ್ಟ್‌ಗಳ ಪ್ರಮಾಣ ಪತ್ರ.
- ಆಧಾರ್ ಮತ್ತು ಪಾನ್ ಕಾರ್ಡ್.
- ಅರ್ಜಿ ಸಲ್ಲಿಸುತ್ತಿರುವ ಜನೌಷಧಿ ಕೇಂದ್ರಗಳ ವಿಳಾಸ
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿಯಲ್ಲಿ ಕೇಳಲಾಗುವ ಸ್ವ-ವಿವರ ಭರ್ತಿ ಮಾಡಿ ಹಾಗೂ ಅಗತ್ಯವಿರುವ ದಾಖಲಾತಿಗಳನ್ನು ಲಗತ್ತಿಸಿ.
- ಭರ್ತಿ ಮಾಡಿದ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಮೇ 12ರ ಬೆಳಗ್ಗೆ 10.30 ರಿಂದ ಸಂಜೆ 4 ಗಂಟೆಯೊಳಗೆ ತಲುಪಿಸಬಹುದು.
ಆರೋಗ್ಯಾಧಿಕಾರಿ (ಪಶ್ಚಿಮ) ರವರ ಕಛೇರಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಭಾಷ್ಯಂ ಪಾರ್ಕ್, ಶೇಷಾದ್ರಿಪುರಂ, ಬೆಂಗಳೂರು-560020
ಹೆಚ್ಚಿನ ಮಾಹಿತಿಗಾಗಿ KarnatakaHelp.in ಗೆ ಭೇಟಿ ನೀಡಿ