ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್ಇಎಬಿ) ದ್ವಿತೀಯ ಪಿಯುಸಿ ಪರೀಕ್ಷೆ – 1 ಅನ್ನು ಮಾರ್ಚ್ 1 ರಿಂದ ಮಾರ್ಚ್ 20 ರ ನಡುವೆ ನಡೆಸಲಾಗಿತ್ತು ಸುಮಾರು 6 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಫಲಿತಾಂಶವನ್ನು ಮಂಡಳಿಯ ಅಧಿಕೃತ ವೆಬ್ ಸೈಟ್ karresults.nic.in ಮೂಲಕ ವೀಕ್ಷಿಸಬಹುದು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್ಇಎಬಿ) ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ – 1 ರ ಫಲಿತಾಂಶ 2025 ಅನ್ನು ಬಿಡುಗಡೆ ಮಾಡುವ ದಿನಾಂಕ ಮತ್ತು ಸಮಯವನ್ನು ಪ್ರಕಟಿಸಿದೆ. ದ್ವಿತೀಯ ಪಿಯುಸಿ ಪರೀಕ್ಷೆ – 1 ರ ಫಲಿತಾಂಶವನ್ನು ಹೇಗೆ ನೋಡುವುದು ಹಾಗೂ ಇತರ ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ
ಫಲಿತಾಂಶದ ದಿನಾಂಕ ನಿಗದಿ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ದ್ವಿತೀಯ ಪಿಯುಸಿ ಪರೀಕ್ಷೆ – 1 ರ ಎಲ್ಲಾ ವಿಷಯಗಳ ಉತ್ತರ ಪತ್ರಿಕೆಯ ಮೌಲ್ಯಮಾಪನವು ಮುಕ್ತಾಯಗೊಂಡಿದ್ದು, ದ್ವಿತೀಯ ಪಿಯುಸಿ ಪರೀಕ್ಷೆ – 1 ರ ಫಲಿತಾಂಶ 2025 ಅನ್ನು ಏಪ್ರಿಲ್ 8 ರಂದು ಮಂಗಳವಾರ ಮಧ್ಯಾಹ್ನ 12:30 ಕ್ಕೆ ಮಂಡಳಿಯ ಅಧಿಕೃತ ವೆಬ್ ಸೈಟ್ karresults.nic.in ನಲ್ಲಿ ಘೋಷಿಸಲಾಗುವುದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
2Nd Puc Result 2025 Date And Time
ಫಲಿತಾಂಶವನ್ನು ಹೇಗೆ ನೋಡುವುದು?
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಅಧಿಕೃತ ವೆಬ್ ಸೈಟ್ karresults.nic.in ಗೆ ಭೇಟಿ ನೀಡಿ
ಪಿಯುಸಿ ಫಲಿತಾಂಶಗಳ ಕುರಿತು ಅಧಿಸೂಚನೆಯನ್ನು ಪರಿಶೀಲಿಸಿ (ಹೊಸ ವಿಂಡೋ ತೆರೆಯುತ್ತದೆ)
ನಿಮ್ಮ ನೋಂದಣಿ ಸಂಖ್ಯೆಯನ್ನು ಭರ್ತಿ ಮಾಡಿ.
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ಅನ್ನು ಸಲ್ಲಿಸಿ ಮತ್ತು ಫಲಿತಾಂಶವನ್ನು ಡೌನ್‌ಲೋಡ್ ಮಾಡಿ/ಮುದ್ರಿಸಿ.
2 puc
Deepu.R
2 puc result
CET exam hall ticket