Karnataka NMMS Result 2024: ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ನಡೆಸಿದ್ದ, ಕರ್ನಾಟಕ NMMS 2024 ಫಲಿತಾಂಶವನ್ನು ಇಂದು (ಏಪ್ರಿಲ್ 4) ರಂದು ಪ್ರಕಟಿಸಿದೆ. ನ್ಯಾಷನಲ್ ಮೀನ್ಸ್ ಕಮ್-ಮೆರಿಟ್ ಸ್ಕಾಲರ್‌ಶಿಪ್ (NMMS) ಪರೀಕ್ಷೆಗಳಿಗೆ ಹಾಜರಾದ ವಿದ್ಯಾರ್ಥಿಗಳು ಫಲಿತಾಂಶವನ್ನು dsert.karnataka.gov.in ನಲ್ಲಿ ಅಧಿಕೃತ ವೆಬ್‌ಸೈಟ್ ನಲ್ಲಿ ಪರಿಶೀಲಿಸಬಹುದು ಅಥವಾ ಈ ಲೇಖನದಲ್ಲಿ ನಾವು ಪಿಡಿಎಫ್ ಡೌನ್ಲೋಡ್ ನೇರ ಲಿಂಕ್ ನೀಡಿದ್ದೇವೆ ಅಲಿ ಕ್ಲಿಕ್ ಮಾಡುವ ಮೂಲಕ ನಿಮ್ಮ ಫಲಿತಾಂಶ ಪರಿಶೀಲಿಸಿ.
ಕರ್ನಾಟಕ NMMS 2024 ಪರೀಕ್ಷೆಯನ್ನು ಜನವರಿ 7, 2024 ರಂದು 3 ಗಂಟೆಗಳ ಕಾಲ ನಡೆಯಿತು, DSERT ಕರ್ನಾಟಕ NMMS 2024 ಗಾಗಿ ಜಿಲ್ಲಾವಾರು ಮೆರಿಟ್ ಪಟ್ಟಿಯನ್ನು ತನ್ನ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಿದೆ. ಈ ಯೋಜನೆಯಲ್ಲಿ ವಿದ್ಯಾರ್ಥಿವೇತನ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ವಾರ್ಷಿಕವಾಗಿ 12,000 ರೂ ಪಡೆಯುತ್ತಾರೆ. ಶಿಕ್ಷಣ ಸಚಿವಾಲಯ ವತಿಯಿಂದ 8 ನೇ ತರಗತಿಯ ಅರ್ಹ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಒಟ್ಟು 1,00,000 ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.