KCET Application Form 2024: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ)ಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ. ಈ ಪರೀಕ್ಷೆಯ ಸಂಕ್ಷಿಪ್ತ ಮಾಹಿತಿ ಈ ಕೆಳಗೆ ನೀಡಲಾಗಿದೆ.
Kcet Application Form 2024
IMP Dates of KCET Registration 2024
Online Application form Start Date
10-01-2024 M-11:00
Last date of KCET Registration 2024
20-02-2024 N- 11:59
Last date of online Application Payment/Fee
23-02-2024
KCET 2024 Admi Card Date
07-04-2024
KCET 2024 Exam Time Table
Exam Date
Day
Exam time
Subjects
18-04-2024
ಗುರುವಾರ
ಬೆಳಿಗ್ಗೆ 10.30 ರಿಂದ 11.50ರ ವರೆಗೆ
ಜೀವಶಾಸ್ತ್ರ (60 Marks)
ಮಧ್ಯಾಹ್ನ 02.30 ರಿಂದ 03.50ರ ವರೆಗೆ
ಗಣಿತಶಾಸ್ತ್ರ (60 Marks)
19-04-2024
ಶುಕ್ರವಾರ
ಬೆಳಿಗ್ಗೆ 10.30 ರಿಂದ 11.50ರ ವರೆಗೆ
ಭೌತಶಾಸ್ತ್ರ (60 Marks)
ಮಧ್ಯಾಹ್ನ 02.30 ರಿಂದ 03.50ರ ವರೆಗೆ
ರಸಾಯನ ಶಾಸ್ತ್ರ (60 Marks)
ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ (ಬೆಂಗಳೂರು, ಬೀದರ್, ಬೆಳಗಾವಿ, ಬಳ್ಳಾರಿ, ವಿಜಯಪುರ, ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ)
ಸಾಮಾನ್ಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕರ್ನಾಟಕ ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು ಇವರು ನಿರ್ಧರಿಸುವ ಮೊದಲನೇ ಮತ್ತು ಎರಡನೇ ಪಿಯುಸಿ ಪಠ್ಯಕ್ರಮವನ್ನು ಅವಲಂಬಿಸಿರುತ್ತದೆ.
ಸಿಇಟಿ-2024 ಅರ್ಹತೆ: ಸಿಇಟಿ-2006ರ 15 (5) ಪ್ರವೇಶ ನಿಯಮಗಳು ಮತ್ತು ಎಮ್ಸಿಸಿ ನಿರ್ದೇಶನಗಳಿಗೆ ಒಳಪಟ್ಟಿರುತ್ತದೆ.
ನಿಗದಿಪಡಿಸಿರುವ ಶೈಕ್ಷಣಿಕೆ ಅರ್ಹತೆ / ಕಾಲೇಜುಗಳ ಪ್ರವೇಶ / ಸೀಟು ಹಂಚಿಕೆ ಇತ್ಯಾದಿಗಳು MCI, DCI, AICTE, COA, NCISM, NCH, PCI, ಸರ್ಕಾರ, ವಿಶ್ವವಿದ್ಯಾಲಯ, ಅಪೆಕ್ಸ್ ಸಂಸ್ಥೆಗಳು ಕಾಲ ಕಾಲಕ್ಕೆ ನಿಗದಿಡಿಸುವ ನಿಯಮಗಳಿಗೆ / ಅನುಮೋದನೆಗೆ / ಷರತ್ತಿಗೆ ಒಳಪಟ್ಟಿರುತ್ತವೆ. 4. ಒಂದಕ್ಕಿಂತ ಹೆಚ್ಚು ಅರ್ಜಿಯನ್ನು ಅಭ್ಯರ್ಥಿಯು ತುಂಬಿರುವುದು ಒಂದುವೇಳೆ ಕಂಡು ಬಂದಲ್ಲಿ ಅಂತಹ ಅಭ್ಯರ್ಥಿಯ ಅಭ್ಯರ್ಥಿತನವು ರದ್ದುಗೊಳ್ಳುವುದಕ್ಕೆ ಒಳಪಡುತ್ತದೆ.
ಅಭ್ಯರ್ಥಿಗಳು ಮಾಹಿತಿ ಪುಸ್ತಕವನ್ನು ಓದಿದ್ದಾರೆ ಮತ್ತು ಅದರಲ್ಲಿ ನೀಡಿರುವ ಷರತ್ತುಗಳನ್ನು ಮತ್ತು ಇತರೆ ನಿಯಮಗಳನ್ನು ಒಪ್ಪಿಕೊಂಡಿದ್ದಾರೆಂದು ಹಾಗು ನಂತರ ಯುಜಿಸಿಇಟಿ-2024 ಕ್ಕೆ ಆನ್‌ಲೈನ್ ಅರ್ಜಿಯನ್ನು ನಿಯಮಾನುಸಾರ ಸಲ್ಲಿಸಿರುತ್ತಾರೆಂದು ಪರಿಗಣಿಸಲಾಗುತ್ತದೆ.
ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡುವ ಬಗ್ಗೆ ಸಂದೇಹಗಳಿದ್ದಲ್ಲಿ, ಅವರು ಕರ್ನಾಟಕದಲ್ಲಿ ವ್ಯಾಸಂಗ ಮಾಡುತ್ತಿರುವ ಆಯಾ ಕಾಲೇಜುಗಳಲ್ಲಿ ಕಾಲೇಜು ಟ್ರೈನರ್ ಗಳನ್ನು ಸಂಪರ್ಕಿಸಿ ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.