WhatsApp Channel Join Now
Telegram Group Join Now

KCET ದಾಖಲೆ ಪರಿಶೀಲನೆ 2023|KCET Document Verification 2023

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ)ಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಕಳೆದ ಮೇ 20 ಮತ್ತು 22 ರಂದು ಮುಕ್ತಾಯವಾಗಿದ್ದವು ಜೂನ್ 15 ರಂದು ಫಲಿತಾಂಶ ಪ್ರಕಟವಾಗಿದೆ. ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಗೆ (KCET Document verification 2023) ದಿನಾಂಕ (Date) ವನ್ನಇಲಾಖೆಯು ನಿಗದಿ ಮಾಡಿದೆ. ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಎಚ್ಚರಿಕೆಯಿಂದ ಓದಿ ಮತ್ತು ಅರ್ಥಮಾಡಿಕೊಳ್ಳಿ.

KCET Document Verification 2023

KCET ದಾಖಲೆ ಪರಿಶೀಲನೆ 2023ಯನ್ನು ಇಲಾಖೆಯು ತಿಳಿಸಿದ ಮಾಹಿತಿಯ ಪ್ರಕಾರ ದಾಖಲಾತಿ ಪರಿಶೀಲನೆಯನ್ನು online ಮೂಲಕವೇ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

List of documents required for KCET Document Verification 2023 (KCET Counselling)

KCET ದಾಖಲೆ ಪರಿಶೀಲನೆ 2023(KCET Counselling 2023) ಗೆ ಬೇಕಾಗುವ ಅಗತ್ಯ ದಾಖಲಾತಿಗಳನ್ನು ಈ ಕೆಳಗೆ ನೀಡಲಾಗಿದೆ.

1) ಯುಜಿಸಿಇಟಿ-2023 ರ ಪ್ರವೇಶ ಪತ್ರ,
2) ಯುಜಿಸಿಇಟಿ-2023 ಅಂತಿಮವಾಗಿ ಅರ್ಜಿ ಪ್ರಿಂಟ್ ಮಾಡಿದ ಪ್ರತಿ,
3) ವಿದ್ಯಾರ್ಥಿ/ನಿಯ ಎಸ್‌ಎಸ್‌ಎಲ್‌ಸಿ 10ನೇ ತರಗತಿಯ ಅಂಕ ಪಟ್ಟಿ 4) ವಿದ್ಯಾರ್ಥಿ/ನಿಯ ದ್ವಿತೀಯ ಪಿಯುಸಿ/ 12ನೇ ತರಗತಿಯ ಅಂಕಪಟ್ಟಿ;
5) ಬಿಇಓ / ಡಿಡಿಪಿಯು ಅವರಿಂದ ಮೇಲು ರುಜು ಮಾಡಿರುವ ವಿದ್ಯಾರ್ಥಿಯ 7 ವರ್ಷದ ವ್ಯಾಸಂಗ ಪ್ರಮಾಣಪತ್ರ (ಹತ್ತನೇ ತರಗತಿ ಅಥವಾ 12ನೇ ತರಗತಿಯನ್ನು ಒಳಗೊಂಡಿರಬೇಕು)

ಈ ಕೆಳಕಂಡ ದಾಖಲೆಗಳು ಅನ್ವಯವಿದ್ದಲ್ಲಿ:

1) ಗ್ರಾಮೀಣ ಕೋಟಾ ಕ್ಷೇಮ್ ಮಾಡಿದ್ದಲ್ಲಿ:- 1ನೇ ತರಗತಿಯಿಂದ 10ನೇ ತರಗತಿಯವರೆಗೆ ಹತ್ತು ಪೂರ್ಣ ವರ್ಷಗಳನ್ನು ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿರುವುದಕ್ಕೆ ಸಂಬಂಧಿಸಿದ ಪ್ರಮಾಣಪತ್ರ: ಸಾಮಾನ್ಯ ವರ್ಗದ ಅಭ್ಯರ್ಥಿಗಳು ಪರಿಶೀಲನಾ ಪ್ರಮಾಣ ಪತ್ರವನ್ನೂ ಸಹ ಸಲ್ಲಿಸಬೇಕು.

2) ಕನ್ನಡ ಮಾಧ್ಯಮ ಕೋಟಾ ಕ್ಷೇಮ್ ಮಾಡಿದ್ದಲ್ಲಿ:- 1ನೇ ತರಗತಿಯಿಂದ 10ನೇ ತರಗತಿವರೆಗೆ ಹತ್ತು ಪೂರ್ಣ ವರ್ಷಗಳನ್ನು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವುದಕ್ಕೆ ಸಂಬಂಧಿಸಿದ ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣಪತ್ರ

3) ಮೀಸಲಾತಿ ಪ್ರಯೋಜನಗಳನ್ನು ಕ್ಷೇಮ್ ಮಾಡಿದ್ದಲ್ಲಿ: ಸಂಬಂಧಪಟ್ಟ ತಹಸೀಲ್ದಾರ್‌ರವರು ಪ.ಜಾ/ ಪ.ಪಂ.ಗಳಿಗೆ ನಮೂನೆ-ಡಿನಲ್ಲಿ, ಪ್ರವರ್ಗ-1ಕ್ಕೆ ನಮೂನೆ-ಇ ನಲ್ಲಿ ಹಾಗೂ 2ಎ, 2ಬಿ, 3ಎ ಮತ್ತು 3ಬಿಗೆ ನಮೂನೆ-ಎಫ್ ನಲ್ಲಿ ನೀಡಿರುವ ಜಾತಿ/ ಜಾತಿ ಮತ್ತು ಆದಾಯ ಪ್ರಮಾಣಪತ್ರ,
ಜಾತಿ / ಜಾತಿ ಆದಾಯ ಪ್ರಮಾಣ ಪತ್ರ / ಆದಾಯ ಪ್ರಮಾಣ ಪತ್ರಗಳು ಅಭ್ಯರ್ಥಿಯ ಹೆಸರಿನಲ್ಲಿ ಪಡೆದಿರಬೇಕು.

Kcet Document Verification 2023
Kcet Document Verification 2023

How to verify KCET documents? (KCET ಡಾಕ್ಯುಮೆಂಟ್ ಅನ್ನು ಹೇಗೆ ಪರಿಶೀಲಿಸುವುದು)

ದಾಖಲಾತಿ ಪರಿಶೀಲನೆಯನ್ನು ಅಧಿಕೃತ ವೆಬ್ ಸೈಟ್ ಮೂಲಕ ಮಾಡಬೇಕು. ಇದಕ್ಕೆ ಸಂಬಂಧ ಪಟ್ಟ ಮಾಹಿತಿಯನ್ನು ಶೀಘ್ರದಲ್ಲೇ ತಿಳಿಸಲಾಗುವುದು.

KCET Document Verification 2023 IMP Date

ದಿನಾಂಕ 27-06-2023 ರಿಂದ 15-07-2023 ರವರೆಗೆ ರಾಜ್ಯದ ಎಲ್ಲಾ ಜಿಲ್ಲೆ/ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು ಆಯಾ ಶಾಲೆಗಳಿಗೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿಗೆ ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ವ್ಯಾಸಂಗ ಪ್ರಮಾಣ ಪತ್ರ, ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ ಹಾಗು ಎರಡನೇ ಪಿಯುಸಿ / 12ನೇ ತರಗತಿ ಅಂಕಪಟ್ಟಿಯೊಂದಿಗೆ ಪರಿಶೀಲನೆಗೆ ಒಳಪಡಿಸಬೇಕಾಗುತ್ತದೆ.

KCET Document Verification 2023 Date27-06-2023 to 15-07-2023

More Information About KCET Document Verification 2023 Download PDF Here
Karnataka Help.in – Home