ಕರ್ನಾಟಕ ಯುಜಿಸಿಇಟಿ 2025 ರ ಪರೀಕ್ಷೆಯನ್ನು ರಾಜ್ಯಾದ್ಯಂತ ಏಪ್ರಿಲ್ 16 ಮತ್ತು 17ರಂದು ನಡೆಸಲಾಗಿದ್ದು, ಸದರಿ ಪರೀಕ್ಷೆಗಳ 16 ವರ್ಷನ್‌ಗಳ ಕೀ ಉತ್ತರ(KEA KCET Key Answer 2025)ಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಯುಜಿಸಿಇಟಿ 2025ರ ಪರೀಕ್ಷೆಯ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಿಗೆ ಏಪ್ರಿಲ್ 16 ಮತ್ತು 17ರಂದು ಪರೀಕ್ಷೆ ನಡೆಸಲಾಗಿತ್ತು, ಇದೀಗ ಪ್ರಾಧಿಕಾರವು ಸದರಿ ಪರೀಕ್ಷೆಗಳ ಕೀ ಉತ್ತರ ಹಾಗೂ ಪ್ರಕಟಿತ ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ವೆಬ್ ಸೈಟ್ cetonline.karnataka.gov.in ಮೂಲಕ ಸಲ್ಲಿಸಬಹುದು. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಆಕ್ಷೇಪಣೆ ಸಲ್ಲಿಸಲು ಏಪ್ರಿಲ್ 18 ರಿಂದ 22, 2025 ರ ಸಂಜೆ 5:00 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿತ್ತು, ಸಲ್ಲಿಕೆಯಾದ ಆಕ್ಷೇಪಣೆಗಳನ್ನು ವಿಷಯ ತಜ್ಞರ ಸಮಿತಿಯು ಪರಿಶೀಲಿಸಿ ತೀರ್ಮಾನಿಸಿ ಪರಿಷ್ಕೃತ ಕೀ ಉತ್ತರಗಳು ಏ.25ರಂದು ಬಿಡುಗಡೆ ಮಾಡಿದೆ.
How to View KCET Revised Key Answer 2025?
ವಿಷಯವಾರು ಕೀ ಉತ್ತರ ನೋಡುವ ವಿಧಾನ ಈ ಕೆಳಗಿನಂತಿದೆ;
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
ಇತ್ತೀಚಿನ ಪ್ರಕಟಣೆಗಳಲ್ಲಿ 25-04 UGCET-2025 ಪರಿಷ್ಕೃತ ಕೀ ಉತ್ತರಗಳು.25/04/2025 ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಭ್ಯರ್ಥಿಗಳು ಲಿಂಕ್ ಅನ್ನು ಕ್ಲಿಕ್ ಮಾಡಿದರೆ UGCET ಉತ್ತರ ಕೀ ಪಿಡಿಎಫ್ ತೆರೆಯುತ್ತದೆ.
ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ಪ್ರತಿಕ್ರಿಯೆಗಳನ್ನು ಹೋಲಿಕೆ ಮಾಡಿ.
ಆಕ್ಷೇಪಣೆಗಳಿದ್ದರೆ ಸಲ್ಲಿಸಿ.
KCET 2025 Revised Key Answers
KCET Physics, Chemistry, Biology Revised Key Answers 2025 PDF