ಕೆಪಿಎಸ್ಸಿ – 2023-24 ನೇ ಸಾಲಿನ ಗ್ರೂಪ್ – ಎ ಮತ್ತು ಗ್ರೂಪ್-ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ನಡೆಸಲಿರುವ ಮುಖ್ಯ ಪರೀಕ್ಷೆಯ ವೇಳಾಪಟ್ಟಿ(KPSC KAS Mains Time table 2025)ಯನ್ನು ಆಯೋಗವು ಇಂದು ಬಿಡುಗಡೆ ಮಾಡಿದೆ.
ಕರ್ನಾಟಕ ಲೋಕಸೇವಾ ಆಯೋಗವು 2025ರ ಫೆಬ್ರವರಿ 13 ರಲ್ಲಿ ಅಧಿಸೂಚಿಸಲಾದ 2023-24 ನೇ ಸಾಲಿನ ಗ್ರೂಪ್- ಎ ಮತ್ತು ಗ್ರೂಪ್-ಬಿ ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಮುಖ್ಯ ಪರೀಕ್ಷೆಯು ಮೇ 03, 05, 07, 09 ರಂದು ನಡೆಸುವುದಾಗಿ ತಿಳಿಸಿದೆ. ಆಯೋಗವು ಪರೀಕ್ಷೆಯ ವೇಳಾಪಟ್ಟಿಯನ್ನು ವೆಬ್ಸೈಟ್ http://kpsc.kar.nic.in ನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದ್ದು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
KPSC KAS Mains Time table 2025 Details
ಕೆಪಿಎಸ್ಸಿ ಕೆಎಎಸ್ ಮುಖ್ಯ ಪರೀಕ್ಷೆ ನಡೆಯುವ ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ;
ಅರ್ಹತಾದಾಯಕ ಪತ್ರಿಕೆಗಳು
ದಿನಾಂಕ: 03-05-2025 ರಂದು ಕನ್ನಡ ಪರೀಕ್ಷೆಯು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ನಡೆಯಲಿದೆ.
ದಿನಾಂಕ: 03-05-2025 ರಂದು ಇಂಗ್ಲಿಷ್ ಪರೀಕ್ಷೆಯು ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ನಡೆಯಲಿದೆ. ಕಡ್ಡಾಯ ಪತ್ರಿಕೆಗಳು
ದಿನಾಂಕ: 05-05-2025 ರಂದು ಪ್ರಬಂಧ ಪರೀಕ್ಷೆಯು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ.
ದಿನಾಂಕ: 07-05-2025 ರಂದು ಸಾಮಾನ್ಯ ಅಧ್ಯಯನ-1 ಪರೀಕ್ಷೆಯು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ನಡೆಯಲಿದೆ.
ದಿನಾಂಕ: 07-05-2025 ರಂದು ಸಾಮಾನ್ಯ ಅಧ್ಯಯನ-2 ಪರೀಕ್ಷೆಯು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ರವರೆಗೆ ನಡೆಯಲಿದೆ.
ದಿನಾಂಕ: 09-05-2025 ರಂದು ಸಾಮಾನ್ಯ ಅಧ್ಯಯನ-3 ಪರೀಕ್ಷೆಯು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ನಡೆಯಲಿದೆ.
ದಿನಾಂಕ: 09-05-2025 ರಂದು ಸಾಮಾನ್ಯ ಅಧ್ಯಯನ-4 ಪರೀಕ್ಷೆಯು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ರವರೆಗೆ ನಡೆಯಲಿದೆ.
ಇದನ್ನೂ ಓದಿ: NCL Recruitment 2025: ವಿವಿಧ ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿ, ಅರ್ಜಿ ಆಹ್ವಾನ
ಶೀಘ್ರದಲ್ಲಿಯೇ ಪರೀಕ್ಷೆಯ ಪ್ರವೇಶ ಪತ್ರವನ್ನು ಆಯೋಗವು ಬಿಡುಗಡೆ ಮಾಡಲಿದೆ.
ಪರೀಕ್ಷಾ ವೇಳಾಪಟ್ಟಿ ಪಿಡಿಎಫ್ ಅನ್ನು ಡೌನ್ಲೋಡ್ ಮಾಡುವ ಲಿಂಕ್ ಕೆಳಗೆ ನೀಡಲಾಗಿದೆ
Important Direct Links:
KPSC KAS Mains Time table 2025 PDF | Download |
KPSC KAS Mains Time table 2025 Notice PDF | Download |
Official Website | kpsc.kar.nic.in |
More Updates | Karnataka Help.in |