WhatsApp Channel Join Now
Telegram Group Join Now

KSAT Judicial Member Recruitment 2024: ರಾಜ್ಯ ಆಡಳಿತ ನ್ಯಾಯ ಮಂಡಳಿ ನೇಮಕಾತಿ

ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಬೆಂಗಳೂರು ಪ್ರಧಾನ ಪೀಠದಲ್ಲಿ ತೆರವಾಗಿರುವ ನ್ಯಾಯಾಂಗ ಸದಸ್ಯರ ಹುದ್ದೆಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅಭ್ಯರ್ಥಿಗಳು ಆಗಸ್ಟ್ 8, 2024 ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿ ನಮೂನೆ ಮತ್ತು ಘೋಷಣೆ ಪತ್ರವನ್ನು ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಂಡು ಅವಶ್ಯ ದಾಖಲೆಗಳೊಂದಿಗೆ ಮತ್ತು 5 ಪ್ರತಿಗಳೊಂದಿಗೆ ಸರ್ಕಾರದ ಕಾರ್ಯದರ್ಶಿಗೆ ಸಲ್ಲಿಸಬೇಕು.

ಅರ್ಜಿ ನಮೂನೆ ಮತ್ತು ಘೋಷಣೆ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು‌‌ dpar.karnataka.gov.in ವೆಬ್’ಸೈಟಿಗೆ ಭೇಟಿ ನೀಡಬೇಕು. ನೇಮಕಾತಿ ಕುರಿತಂತೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಅರ್ಹತೆಗಳು ಇನ್ನಿತರ ಮಾಹಿತಿಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ.

KSAT Judicial Member Recruitment 2024
KSAT Judicial Member Recruitment 2024

Shortview of KSAT Judicial Member Notification 2024

Organization Name – Karnataka State Administrative Tribunal
Post Name – Judicial Member
Total Vacancy – 01
Application Process: Offline
Job Location – Bengaluru

Important Dates:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಜೂನ್,25 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್ 8, 2024

ಅರ್ಹತೆಗಳು:

  • ಈ ಹುದ್ದೆಗೆ ಅರ್ಜಿ ಸಲ್ಲಿಸಲು The Tribunal (Conditions of Service) Rules, 2021 ನಿಯಮ 3 ರ, ಉಪನಿಯಮ 5(b) ರಡಿ ನಿಗಧಿತ ಅರ್ಹತೆಗಳನ್ನು ಹೊಂದಿರಬೇಕು.
  • ಹೈಕೋರ್ಟ್‌ ನ್ಯಾಯಾದೀಶರು ಆಗಿರಬೇಕು.
  • ಭಾರತ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಗಳಾಗಿ ಅಥವಾ ಕಾನೂನು ವ್ಯವಹಾರಗಳ ಸಚಿವಾಲಯದ ಸದಸ್ಯರು, ಕಾರ್ಯದರ್ಶಿ ಆಗಿ ಕಾರ್ಯನಿರ್ವಹಿಸಿರಬೇಕು
  • 10 ವರ್ಷ ಜಿಲ್ಲಾ ನ್ಯಾಯಾಧೀಶರಾಗಿ ಅಥವಾ ಹೆಚ್ಚು ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದವರು ಕನಿಷ್ಠ ಐವತ್ತು ವರ್ಷ ಪೂರೈಸಿರಬೇಕು ಅರ್ಜಿ ಸಲ್ಲಿಸಬಹುದು.

ವಯೋಮಿತಿ:

50 ವರ್ಷ ಮೇಲ್ಪಟ್ಟ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನ‌ ಶ್ರೇಣಿ:

ಈ ಹುದ್ದೆಗೆ ಆಯ್ಕೆಯಾದ ಸದಸ್ಯರಿಗೆ ಮಾಸಿಕ ರೂ.2,25,000 ಮಾಸಿಕ ವೇತನ ಜತೆಗೆ, ಸರ್ಕಾರದ ಗ್ರೂಪ್ ಎ ಹುದ್ದೆಗೆ ನೀಡುವ ಎಲ್ಲ ಸೌಲಭ್ಯಗಳು ಮತ್ತು ಭತ್ಯೆಗಳನ್ನು ಪಡೆಯಲು ಅರ್ಹರು.

How to Apply KSAT Judicial Member Recruitment 2024

ಅರ್ಜಿ ನಮೂನೆ ಮತ್ತು ಘೋಷಣೆ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು‌‌ ನಾವು ಕೆಳಗೆ ನೀಡಲಾದ ಲಿಂಕ್ ಕ್ಲಿಕ್ ಮಾಡಿ ಅಥವಾ https://dpar.karnataka.gov.in ವೆಬ್’ಸೈಟಿಗೆ ಭೇಟಿ ನೀಡಿ ಅರ್ಜಿ ಫಾರಂ ಪಡೆದುಕೊಂಡು ಭರ್ತಿ ಮಾಡಬೇಕು ಹಾಗೂ ಸೂಕ್ತ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ:

ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಕೊಠಡಿ ಸಂಖ್ಯೆ:246, 2ನೇ ಮಹಡಿ, ವಿಧಾನಸೌಧ, ಬೆಂಗಳೂರು-560001

Important Direct Links:

Official Notification & Application FormDownload
More UpdatesKarnatakaHelp.in

Leave a Comment