WhatsApp Channel Join Now
Telegram Group Join Now

KSDC Job Opportunities in UAE: ಬಿಎಸ್ಸಿ ನರ್ಸಿಂಗ್ ಪಡೆದವರಿಗೆ, ಕರ್ನಾಟಕ ಸರ್ಕಾರದಿಂದಲೇ ವಿದೇಶದಲ್ಲಿ ಕೆಲಸ!

ನಮಸ್ತೆ ಬಂಧುಗಳೇ, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ವತಿಯಿಂದ ಯುನೈಟೆಡ್ ಅರಬ್ ಎಮಿರೈಟ್ (UAE) ನಲ್ಲಿ ನಿರುದ್ಯೋಗ ಯುವಕರಿಗೆ ಉದ್ಯೋಗಾವಕಾಶ(KSDC Job Opportunities in UAE) ಕಲ್ಪಿಸಲು ಕರ್ನಾಟಕ ಸರ್ಕಾರವು ಮುಂದಾಗಿದೆ.

ರಾಜ್ಯದ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ UAE ನಲ್ಲಿ ಪುರುಷ ನರ್ಸ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್‌ಲೈನ್ ಮೂಲಕವೇ ಸಂದರ್ಶನ ಮಾಡಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

Ksdc Job Opportunities In Uae
Ksdc Job Opportunities In Uae

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಿಎಸ್ಸಿ ನರ್ಸಿಂಗ್ ಮಾಡಿ ಕನಿಷ್ಠ 2 ವರ್ಷಗಳ ಕಾರ್ಯಾ ಅನುಭವ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ 30 ದಿನಗಳಿಗೆ 1,11,000 ವೇತನ ನೀಡಲಾಗುತ್ತದೆ. ಇದರ ಜೊತೆಗೆ ವೈದ್ಯಕೀಯ ವಿಮೆ ಸಾರಿಗೆ ಮತ್ತು ವಿಮಾನ ಟಿಕೆಟ್, ಆಹಾರ ಸೌಲಭ್ಯ ಮತ್ತು ವೀಸಾ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಕೆಎಸ್‌ಡಿಸಿ ವೆಬ್​ಸೈಟ್ http://imck.kaushalkar.com ಮತ್ತು hr.imck@gmail.com ಮೇಲ್​ ಐಡಿಗೆ ಸ್ವ ವಿವರಗಳನ್ನು ಕಳುಹಿಸುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ವಿದ್ಯಾರ್ಹತೆ:

  • ಬಿ ಎಸ್ಸಿ ನರ್ಸಿಂಗ್ / ಪೋಸ್ಟ್ ಬೇಸಿಕ್ ಬಿ ಎಸ್ಸಿ ನರ್ಸಿಂಗ್
  • ಇದರ ಜೊತೆಗೆ 2 ವರ್ಷಗಳ ಐಸಿಯು ಎಮರ್ಜೆನ್ಸಿ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಇರಬೇಕು.

ಹೆಚ್ಚಿನ ಆದ್ಯತೆ

DOH ತೇರ್ಗಡೆಯಾದವರು ಅಥವಾ DOH ಪರವಾನಿಗೆ ಅಥವಾ DOH ಡಾಟಾಫ್ಲೋ ಪಾಸಿಟಿವ್ ರಿಸಲ್ಟ್​ ಇದ್ದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ವಯೋಮಿತಿ:

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 18ರಿಂದ ಗರಿಷ್ಠ 40 ವರ್ಷಗಳ ಒಳಗಿರಬೇಕು.

ವೇತನ ಶ್ರೇಣಿ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ UAE ನಲ್ಲಿ‌ 5,000AED (₹1,11,000) 30 ದಿನಗಳಿಗೆ ರಜೆ ಸಹಿತ ವೇತನ ನೀಡಲಾಗುತ್ತದೆ. ಇದರ ಜೊತೆಗೆ ವೈದ್ಯಕೀಯ ವಿಮೆ, ವಿಮಾನ ಟಿಕೆಟ್, ಆಹಾರ ಸೌಲಭ್ಯ ವೀಸಾ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವಿದ್ಯಾರ್ಹತೆ ಮತ್ತು ಅನುಭವದ ಮೇಲೆ ಶರ್ಟ್ ಲಿಸ್ಟ್ ಮಾಡಿ ಆನ್ ಲೈನ್ ಮೂಲಕ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಸಂದರ್ಶನದ ವಿವರ:

ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಆನ್ ಲೈನ್ ಮೂಲಕ ಸಂದರ್ಶನ ನಡೆಸಲಾಗುತ್ತದೆ. ಸಂದರ್ಶನ ನಡೆಯುವ ದಿನಾಂಕವನ್ನು ಆಗಸ್ಟ್ ತಿಂಗಳಿನಲ್ಲಿ ಶೀಘ್ರವೇ ಪ್ರಕಟಿಸಲಾಗುತ್ತದೆ.

Also Read: IBPS PO Notification 2024(OUT): ವಿವಿಧ ಬ್ಯಾಂಕ್ ಗಳಲ್ಲಿ ಒಟ್ಟು 4455 ಹುದ್ದೆಗಳ ಬೃಹತ್ ಉದ್ಯೋಗಾವಕಾಶ

How to Apply for KSDC Job Opportunities in UAE

ಅರ್ಜಿ ಸಲ್ಲಿಸುವ ಪ್ರಕ್ರಿಯೆ: ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಎಸ್‌ಡಿಸಿ ವೆಬ್‌ ಸೈಟ್ http://imck.kaushalkar.com ಭೇಟಿ ನೀಡಬಹುದು ಮತ್ತು hr.imck@gmail.com ಮೇಲ್ ಐಡಿ ಮೂಲಕ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ

ಅಂತರಾಷ್ಟ್ರೀಯ ವಲಸೆ ಕೇಂದ್ರ-ಕರ್ನಾಟಕ (IMC-K)
ಕಲ್ಯಾಣ ಸುರಕ್ಷಾ ಭವನ
4ನೇ ಮಹಡಿ
ಡೈರಿ ವೃತ್ತ
ಬನ್ನೇರುಘಟ್ಟ ರಸ್ತೆ
ಬೆಂಗಳೂರು- 560029

ಅಥವಾ ಅಭ್ಯರ್ಥಿಗಳು 9606492213/ 9606492214 ವಾಟ್ಸ್‌ಆ್ಯಪ್ ನಂಬರ್​ಗಳ ಮೂಲಕ ಹೆಚ್ಚಿನ ವಿವರ ಪಡೆಯಬಹುದು.

Important Direct Links:

KSDC Job Opportunities in UAE Online Application LinkApply Here
More UpdatesKarnataka Help.in

Leave a Comment