Mangalore University Recruitment 2024: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ

Follow Us:

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು

ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ವಿವಿಧ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳು ಅರೆಕಾಲಿಕ ಮತ್ತು ಪೂರ್ಣಾವಧಿ ಹುದ್ದೆಗಳಾಗಿವೆ. ಈ ನೇಮಕಾತಿಯಲ್ಲಿ ವಿವಿಧ ವಿಷಯಗಳಿಗೆ ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

Mangalore University Guest Lecturer Recruitment 2024
Mangalore University Guest Lecturer Recruitment 2024

ಸ್ನಾತಕೋತ್ತರ ಪದವಿ ಮತ್ತು ಎನ್ಇಟಿ, ಕೆ ಸೆಟ್, ಪಿ ಎಚ್ ಡಿ ಅಥವಾ ಎಂಪಿಲ್ ಅರ್ಹತೆ ಪಡೆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಂಗಳೂರು ವಿಶ್ವವಿದ್ಯಾಲಯದ ಅಧಿಕೃತ ವೆಬ್ ಸೈಟ್ ಗೆ https://mangaloreuniversity.ac.in ಭೇಟಿ ನೀಡಿ ಅಗಸ್ಟ್ 5 ಒಳಗೆ ಅರ್ಜಿಯನ್ನು ಸಲ್ಲಿಸಬೇಕು. ಈ ಲೇಖನದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರ ನೇಮಕಾತಿ(Mangalore University Recruitment 2024)ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.

Shortview of Mangalore University Notification 2024

Organization Name – Mangalore University
Post Name – Guest Lecturer
Application Process: Online
Job Location – Mangalore

ನೇಮಕಾತಿಯ ಪ್ರಮುಖ ದಿನಾಂಕಗಳು:

  • ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ‌ – ಜುಲೈ 27,2024
  • ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ‌ – ಆಗಸ್ಟ್ 5, 2024

ಖಾಲಿ‌ ಇರುವ ಹುದ್ದೆಗಳ ವಿವರ:

ಇಂಗ್ಲಿಷ್​, ಕನ್ನಡ, ಹಿಂದಿ, ಸಂಸ್ಕೃತ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ಯ, ಸಮಾಜಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಭೂಗೋಳಶಾಸ್ತ್ರ, ದೈಹಿಕ ಶಿಕ್ಷಣ, ರಸಯನಶಾಸ್ತ್ರ, ಭೌತಿಕ ಶಾಸ್ತ್ರ, ಮೈಕ್ರೋಬಯಾಲಜಿ, ಮಥಮೆಟಿಕ್ಸ್​​, ಕಂಪ್ಯೂಟರ್​ ಸೈನ್ಸ್/ಬಿಸಿಎ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಕಾಮರ್ಸ್​, ಬಿಬಿಎ ಕೋರ್ಸ್​ಗಳ ಅತಿಥಿ ಉಪನ್ಯಾಸಕರ ಹುದ್ದೆಗಳಗೆ ನೇಮಕಾತಿ ಮಾಡಲಾಗುತ್ತದೆ.

ವಿದ್ಯಾರ್ಹತೆ:

ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಂಬಂಧಪಟ್ಟ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು ಅಥವಾ ಮಂಡಳಿಯಿಂದ ಸ್ನಾತಕೋತ್ತರ ಪದವಿ ಪಡೆದುಕೊಂಡಿರಬೇಕು

ಎನ್ಇಟಿ, ಕೆ-ಸೆಟ್, ಎಂಫಿಲ್, ಪಿಎಚ್ ಡಿ, ಅರ್ಹತೆ ಪಡೆದುಕೊಂಡಿರಬೇಕು.

ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 18 ವರ್ಷಗಳು ಗರಿಷ್ಠ ವಯೋಮಿತಿಯನ್ನು ಅಧಿಸೂಚನೆಯಲ್ಲಿ ನಿಗದಿಪಡಿಸಿಲ್ಲ

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:

  • ಎಸ್ ಎಸ್ ಎಲ್ ಸಿ ಅಂಕಪಟ್ಟಿ
  • ಸ್ನಾತಕ ಮತ್ತು ಸ್ನಾತಕೋತ್ತರ ಅಂಕಪಟ್ಟಿಗಳು ಮತ್ತು ಪದವಿ ಪ್ರಮಾಣ ಪತ್ರಗಳು
  • NET, Phd, M.phil ಪದವಿ ಪ್ರಮಾಣ ಪತ್ರಗಳು
  • ಸಂಶೋಧನಾ ಪತ್ರಿಕೆಗಳು

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಶುಲ್ಕ:

  • ಸಾಮಾನ್ಯ ಅಭ್ಯರ್ಥಿಗಳಿಗೆ – ₹200
  • SC/ST ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ -₹100

Also Read: SSC JHT Notification 2024(OUT): ವಿವಿಧ ಟ್ರಾನ್ಸ್‌ಲೇಟರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

How to Apply for Mangalore University Guest Lecturer Recruitment 2024

ಅರ್ಜಿ‌ ಸಲ್ಲಿಸುವ ಪ್ರಕ್ರಿಯೆ:

  • ಮೊದಲಿಗೆ ಮಂಗಳೂರು ವಿಶ್ವವಿದ್ಯಾಲಯದ ಅಧಿಕೃತ ವೆಬ್ ಸೈಟಿಗೆ https://mangaloreuniversity.ac.in ಭೇಟಿ ನೀಡಿ.
  • ಮುಖಪುಟದಲ್ಲಿ ಪ್ರಕಟಣೆಯ ವಿಭಾಗದಲ್ಲಿ ‘Guest Faculty application/Online Application for UG Guest Faculty Appointment 2024-25’ ಕ್ಲಿಕ್ ಮಾಡಿ.
  • ಅರ್ಜಿ ವಿವರಗಳನ್ನು ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಆನ್‌ಲೈನ್ ಮೂಲಕವೇ ಶುಲ್ಕ ಪಾವತಿಸಿ E-Receipt ಅಪ್ಲೋಡ್ ಮಾಡಿ.
  • ಕೊನೆಯದಾಗಿ ಅರ್ಜಿಯನ್ನು ಸಲ್ಲಿಸಿ ಮತ್ತು ಅರ್ಜಿ ಸಂಖ್ಯೆಯನ್ನು ಉಳಿಸಿಕೊಳ್ಳಿ.

Important Direct Links:

Official Notification PDFDownload
Online Application Form LinkClick Here
Official Websitemangaloreuniversity.ac.in
More UpdatesKarnataka Help.in

Leave a Comment