2025ನೇ ಸಾಲಿನ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆಸೆಟ್ 2025)ಯ ತಾತ್ಕಾಲಿಕ ಫಲಿತಾಂಶಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಶುಕ್ರವಾರ ಬಿಡುಗಡೆ ಮಾಡಿದೆ.
ಅಂತಿಮ ಕೀ ಉತ್ತರಗಳನ್ವಯ ತಾತ್ಕಾಲಿಕ ಅಂಕಗಳನ್ನು ನ.15 ರಂದು ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ನ.17ರವರೆಗೆ ಅವಕಾಶ ನೀಡಲಾಗಿತ್ತು. ಸದರಿ ಪರೀಕ್ಷೆಯ ವಿಷಯವಾರು ಕಟ್-ಆಫ್ ಅಂಕದೊಂದಿಗೆ ತಾತ್ಕಾಲಿಕ ಫಲಿತಾಂಶ ಪಟ್ಟಿಯನ್ನು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ನಲ್ಲಿ ಬಿಡುಗಡೆ ಮಾಡಲಾಗಿದೆ.
ಯುಜಿಸಿ ಸೂತ್ರ ಮತ್ತು ರಾಜ್ಯ ಮೀಸಲಾತಿ ನೀತಿಯ ಪ್ರಕಾರ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ತಯಾರಿಸಲಾಗಿದೆ.
🠂 ಹೆಚ್.ಪ್ರಸನ್ನ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು
ಕೆಸೆಟ್ 2025ರ ತಾತ್ಕಾಲಿಕ ಫಲಿತಾಂಶ ಪಟ್ಟಿ ಹೇಗೆ ಡೌನ್ಲೋಡ್ ಮಾಡುವುದು?
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
ಮುಂದೆ “ಪ್ರವೇಶಗಳು” ಟ್ಯಾಬ್ನಲ್ಲಿ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್)-2025 ಶಿರ್ಷೀಕೆಯಡಿ ನೀಡಲಾದ “KSET -2025 ತಾತ್ಕಾಲಿಕ ಫಲಿತಾಂಶ ಪಟ್ಟಿ. 21-11-2025” ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮಗೆ ಬೇಕಾದ ವಿಷಯದ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.
ನಂತರ ಪಿಡಿಎಫ್ನಲ್ಲಿ ನಿಮ್ಮ “ಅಪ್ಲಿಕೇಶನ್ ಸಂಖ್ಯೆ” ಸಂಖ್ಯೆಯನ್ನು ಹುಡುಕಿ.
Important Direct Links:
KSET 2025 Provisional Result Notice PDF (Dated on 21/11)
Hello mam
I have to vacancy job