KSET Document Verification 2025: ದಾಖಲೆ ಪರಿಶೀಲನೆಗೆ ಮತ್ತೊಮ್ಮೆ ಅವಕಾಶ!

By ಕರ್ನಾಟಕ ಹೆಲ್ಪ್ ಡೆಸ್ಕ್

Published On:

IST

ಫಾಲೋ ಮಾಡಿ

KSET Document Verification 2025
KSET 2025 Document Verification

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2024 (ಕೆಸೆಟ್-2024) ಅರ್ಹತಾ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ದಿನಾಂಕ: 24.11.2024 ರಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಸಿತ್ತು. ಈ ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು ಮತ್ತು ತಾತ್ಕಾಲಿಕ ಅಂಕಪಟ್ಟಿಯನ್ನು ಕೆಇಎ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು.

ಅಭ್ಯರ್ಥಿಗಳ ಅಂಕಗಳು ಮತ್ತು ಮೀಸಲಾತಿಯನ್ವಯ ಪ್ರಕಟಿಸಿರುವ ತಾತ್ಕಾಲಿಕ ಪಟ್ಟಿಯಲ್ಲಿರುವ ಅರ್ಹ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ(KSET Document Verification 2025)ಗೆ ಹಾಜರಾಗಲು ವೇಳಾ ಪಟ್ಟಿಯನ್ನು ಇಲಾಖೆಯು ಬಿಡುಗಡೆ ಮಾಡಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ.

ದಿನಾಂಕ 13.01.2025 ರಿಂದ 20.01.2025 ರ ವರೆಗೆ ಮತ್ತು 31.01.2025 ರಂದು ಮೂಲ ದಾಖಲೆಗಳ ಪರಿಶೀಲನೆಗೆ ಗೈರಾಗಿರುವ ಅಭ್ಯರ್ಥಿಗಳಿಗೆ ಇದೊಂದು ಅವಕಾಶವನ್ನು ಕೆಇಎ ನೀಡಿದೆ.

Instructions of KSET Document Verification 2025

ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮಾರ್ಗಸೂಚಿಗಳು.

  • ಪ್ರಾಧಿಕಾರ ಅಧಿಕೃತವಾಗಿ ತಿಳಿಸಿದ ದಿನಾಂಕದಂದು ಮಾತ್ರ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು. ಇತರೆ ಬೇರೆ ದಿನದಂದು ಹಾಜರಾಗಲು ಅವಕಾಶವಿರುವುದ್ದಿಲ್ಲ.
  • ಅಭ್ಯರ್ಥಿಗಳು ಸಲ್ಲಿಸುವ ಎಲ್ಲಾ ಮೂಲ ದಾಖಲೆಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಜಾರಿಯಾಗಿರತಕ್ಕದ್ದು.
  • ಮೂಲ ದಾಖಲೆಗಳ ಪರಿಶೀಲನೆಯ ಸಮಯದಲ್ಲಿ ಕಡ್ಡಾಯವಾಗಿ ಮೂಲ ದಾಖಲೆ(original document)ಗಳನ್ನು ತೆಗೆದುಕೊಂಡು ಹಾಜರಾಗಿರಬೇಕು.

KSET 2024 Document Verification Date

ಹೊಸ KSET 2025 ಡಾಕ್ಯುಮೆಂಟ್ ಪರಿಶೀಲನೆ ದಿನಾಂಕ04 ಏಪ್ರಿಲ್ 2025 ಬೆಳಿಗ್ಗೆ 10:00 ಗಂಟೆಗೆ

KSET 2023 Document Verification Date

KSET 2023 ಮೂಲ ದಾಖಲೆ ಪರಿಶೀಲನೆ ದಿನಾಂಕಏಪ್ರಿಲ್ 04, 2025 ಬೆಳಿಗ್ಗೆ 10:00 ಗಂಟೆಗೆ

Required Documents for KSET- 2025 Document Verification

ಅಭ್ಯರ್ಥಿಗಳು ಈ ಕೆಳಕಂಡ ಮೂಲ ದಾಖಲೆಗಳನ್ನು ಮತ್ತು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕೃತವಾದ ಎರಡು ಜೆರಾಕ್ಸ್ ಪ್ರತಿಗಳನ್ನು, ದಾಖಲೆಗಳ ಪರಿಶೀಲನಾ ಸಮಯದಲ್ಲಿ ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು.

  • ಪರೀಕ್ಷೆಯ ಪ್ರವೇಶ ಪತ್ರ.
  • ಆಧಾರ್ ಕಾರ್ಡ್ ಗುರುತಿನ ಚೀಟಿ.
  • ಸ್ನಾತಕೋತ್ತರ ಪದವಿಯ ಎಲ್ಲಾ ವರ್ಷಗಳ/ಸೆಮಿಸ್ಟರ್‌ಗಳ ಅಂಕಪಟ್ಟಿ ಮತ್ತು ಪಾಸಿಂಗ್ ಸರ್ಟಿಫಿಕೇಟ್ ಪತ್ರ.
  • ಪಿ.ಎಚ್‌ಡಿ ಪದವಿ ಪ್ರಮಾಣ ಪತ್ರ. (19.09.1991 ರಂದು ಅಥವಾ ಅದರ ಪೂರ್ವದಲ್ಲಿ ಪಡೆದಿದ್ದರೆ ಮಾತ್ರ)

ಅಭ್ಯರ್ಥಿಗಳು ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಾವು ಕೆಳಗೆ ನೀಡಿರುವ ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಿ

Important Direct Links:

New KSET 2024 Document Verification Date (Dated On 18/03/2025)Download
New KSET 2023 Document Verification Date (Dated On 18/03/2025)Download
New KSET 2025 Document Verification Date (Dated On 21/1/2025)Download
KSET Document Verification 2025 Notice and Instructions PDFDownload
Official Websitekea.kar.nic.in
More UpdatesKarnataka Help.in

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

For Feedback - admin@karnatakahelp.in

Leave a Comment