WhatsApp Channel Join Now
Telegram Group Join Now

KSWDC Loan Scheme Karnataka 2024 Apply Online: ಮಹಿಳಾ ಅಭಿವೃದ್ಧಿ ನಿಗಮದಿಂದ ವಿವಿಧ ಸಬ್ಸಿಡಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ

KSWDC Loan Scheme Karnataka 2024 Apply Online: ಕರ್ನಾಟಕ ಹೆಲ್ಫ್ ಗೆ ಸ್ವಾಗತ ಬಂಧುಗಳೇ ಇಂದು ನಾವು “ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ”ದಿಂದ ನೀಡುವ ವಿವಿಧ ಯೋಜನೆ(KSWDC Subsidy Loan Schemes)ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಮಾಹಿತಿ ನಿಮಗೆ ಉಪಯೋಗವಾಗುತ್ತೆ ಎಂದು ನಾವು ಭಯಸಿದ್ದೇವೆ. ಈ ಮಾಹಿತಿಯನ್ನ ನಿಮ್ಮ ಸ್ನೇಹಿತರಿಗೂ ತಿಳಿಸಿ ಅವರಿಗೂ ಸಹಾಯವಾಗಲಿ. ಎಲ್ಲಾ ಮಾಹಿತಿಯನ್ನ ಗಮನವಿಟ್ಟು ಓದಿ ಅರ್ಥೈಸಿಕೊಳ್ಳಿ.

KSWDC Loan Scheme Karnataka 2024

2023-24ನೇ ಸಾಲಿನಲ್ಲಿ ಅನುಷ್ಠಾನ ಗೊಳಿಸುತ್ತಿರುವ ಈ ಕೆಳಕಂಡ ಯೋಜನೆಗಳಲ್ಲಿ ಸೌಲಭ್ಯ ಪಡೆಯಬಯಸುವವರಿಂದ ಆನ್‌ ಲೈನ್‌ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

☞ ಉದ್ಯೋಗಿನಿ ಯೋಜನೆ(Udyogini Scheme)
☞ ಚೇತನ ಯೋಜನೆ(Chetana Scheme)
☞ ಧನಶ್ರೀ ಯೋಜನೆ(Dhanashree Scheme)
☞ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ
☞ ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ

Kswdc Loan Schemes Karnataka Apply Online
Kswdc Loan Schemes Karnataka Apply Online

ಉದ್ಯೋಗಿನಿ ಯೋಜನೆ:
ಮಹಿಳೆಯರು ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡು ಸ್ವಯಂ ಉದ್ಯೋಗಿಗಳಾಗಲು ಬ್ಯಾಂಕುಗಳ ಮೂಲಕ ಸಾಲ ಮತ್ತು ನಿಗಮದ ಮೂಲಕ ಸಹಾಯಧನ ನೀಡಲಾಗುತ್ತಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ:

  • ಆದಾಯ ಮಿತಿ : ರೂ. 2.00 ಲಕ್ಷಗಳು
  • ಘಟಕ ವೆಚ್ಚ : ಕನಿಷ್ಟ ರೂ. 1.00 ಲಕ್ಷದಿಂದ ಗರಿಷ್ಟ ರೂ. 3.00 ಲಕ್ಷಗಳು
  • ಸಹಾಯಧನ ಶೇ. 50 ರಷ್ಟು
  • ವಯೋಮಿತಿ 18 ರಿಂದ 55 ವರ್ಷಗಳು.

ಸಾಮಾನ್ಯ ವರ್ಗದ ಫಲಾನುಭವಿಗಳಿಗೆ:

  • ಆದಾಯ ಮಿತಿ : ರೂ. 1.50 ಲಕ್ಷಗಳು
  • ಘಟಕ ವೆಚ್ಚ : ಗರಿಷ್ಟ ರೂ. 3.00 ಲಕ್ಷಗಳು
  • ಸಹಾಯಧನ ಶೇ.30 ರಷ್ಟು
  • ವಯೋಮಿತಿ 18 ರಿಂದ 55 ವರ್ಷಗಳು.

ಚೇತನ ಯೋಜನೆ:
ದಮನಿತ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ. 30,000/-ಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ.

  • ವಯೋಮಿತಿ 18 ವರ್ಷ ಮೇಲ್ಪಟ್ಟು

ಧನಶ್ರೀ ಯೋಜನೆ:
ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ರೂ. 30,000/-ಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ.

  • ವಯೋಮಿತಿ 18 ರಿಂದ 60 ವರ್ಷಗಳು.

ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ(Rehabilitation Programmes For Transgender):
ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ. 30,000/- ಗಳ ಪ್ರೋತ್ಸಾಹಧನ ನೀಡಲಾಗುತ್ತದೆ.

ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ(Devadasi Rehabilitation Programme):
1993-94 & 2007-08 ರ ಸಮೀಕ್ಷೆಯಲ್ಲಿ ಗುರುತಿಸಿರುವ ಮಾಜಿ ದೇವದಾಸಿ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ. 30,000/- ಗಳ ಪ್ರೋತ್ಸಾಹಧನ ನೀಡಲಾಗುತ್ತದೆ.

Last Date of KSWDC Loan Scheme Online Application Form 2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ Last Date: 22-12-2023

ಗಮನಿಸಿ: ಅರ್ಹ ಫಲಾಪೇಕ್ಷಿಗಳು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ-ಒನ್, ಕರ್ನಾಟಕ-ಒನ್ ಹಾಗೂ ಬೆಂಗಳೂರು-ಒನ್ ನಾಗರಿಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.

Important Links:

KSWDC Loan Scheme Online Apply Linksevasindhu.karnataka.gov.in
Official Websitekswdc.karnataka.gov.in
More UpdatesKarnatakaHelp.in

ಸ್ವಾವಲಂಬಿ ಸಾರಥಿ ಅರ್ಜಿ ಸಲ್ಲಿಕೆ ಪ್ರಾರಂಭ | Swavalambi Sarathi 2023 Karnataka Apply Online

ಗಂಗಾ ಕಲ್ಯಾಣ ಉಚಿತ ಬೋರ್‌ವೇಲ್ ಯೋಜನೆ ಅರ್ಜಿ ಸಲ್ಲಿಕೆ ಪ್ರಾರಂಭ | Ganga Kalyana Yojane Online Application 2023 Apply Online

ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

KSWDC Loan Scheme 2024 FAQs

How to Apply for Udyogini scheme in Karnataka online?

Apply online through Seva Sindhu Portal at Bangalore-One/Karnataka-One/Atalji Janasnehi Kendra and Civil Service Centers.

What is the Last Date of KSWDC Loan Scheme Karnataka 2023-24?

December 22, 2023