ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ(KSWDC)ದ ವತಿಯಿಂದ 2025-26 ನೇ ಸಾಲಿಗೆ ಉದ್ಯೋಗಿನಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.
ಮಹಿಳೆಯರು ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಿಸುವ ಗುರಿಯನ್ನು ಉದ್ಯೋಗಿನಿ ಯೋಜನೆ ಹೊಂದಿದೆ. ಇದಕ್ಕೆ ಪೂರಕವಾಗಿ ಬ್ಯಾಂಕುಗಳ ಮೂಲಕ ಸಾಲ ಜೊತೆಗೆ ನಿಗಮದಿಂದ ಶೇ.30 ರಿಂದ ಶೇ.50 ರಷ್ಟು ಸಹಾಯಧನ ನೀಡಲಾಗುತ್ತದೆ. 18 ರಿಂದ 55 ವರ್ಷದ ವಯೋಮಾನದ ಮಹಿಳೆಯರು ಅರ್ಜಿ ಸಲ್ಲಿಸಲು ಅರ್ಹರು. ಅರ್ಹ ಫಲಾಪೇಕ್ಷಿಗಳು 2026ರ ಜ.15ರೊಳಗೆ ಸೇವಾಸಿಂಧು ಪೋರ್ಟಲ್ https://sevasindhu.karnataka.gov.in/ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ:
- ಆದಾಯ ಮಿತಿ: ರೂ. 2.00 ಲಕ್ಷಗಳು
- ಘಟಕ ವೆಚ್ಚ: ಕನಿಷ್ಟ ರೂ. 1.00 ಲಕ್ಷದಿಂದ ಗರಿಷ್ಟ ರೂ. 3.00 ಲಕ್ಷಗಳು
- ಸಹಾಯಧನ: ಶೇ. 50 ರಷ್ಟು
ಸಾಮಾನ್ಯ ವರ್ಗದ ಫಲಾನುಭವಿಗಳಿಗೆ:
- ಆದಾಯ ಮಿತಿ: ರೂ. 1.50 ಲಕ್ಷಗಳು
- ಘಟಕ ವೆಚ್ಚ: ಗರಿಷ್ಟ ರೂ. 3.00 ಲಕ್ಷಗಳು
- ಸಹಾಯಧನ: ಶೇ.30 ರಷ್ಟು
ಅರ್ಜಿ ಸಲ್ಲಿಕೆಗ ಬೇಕಾದ ಅರ್ಹತಾ ಮಾನದಂಡಗಳು;
- ಸಾಮಾನ್ಯ ಮತ್ತು ವಿಶೇಷ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಕುಟುಂಬದ ಆದಾಯ ರೂ.1,50,000/- ಗಿಂತ ಕಡಿಮೆಯಿರಬೇಕು.
- ಎಲ್ಲಾ ವರ್ಗಗಳಿಗೆ 18 ರಿಂದ 55 ವರ್ಷಗಳ ನಡುವಿನ ವಯಸ್ಸಿನ ಮಿತಿ.
- ಸಾಲ ಮಂಜೂರಾದ ನಂತರ, ಸಾಲ ಬಿಡುಗಡೆಗೆ ಮುನ್ನ ಈ ಮಹಿಳೆಯರಿಗೆ 3 ರಿಂದ 6 ದಿನಗಳ ಕಾಲ EDP ತರಬೇತಿ ನೀಡಲಾಗುತ್ತದೆ.
- ಮಹಿಳೆಯರು ಹೆಚ್ಚಿನ ಬಡ್ಡಿದರದೊಂದಿಗೆ ಸಾಲಕ್ಕಾಗಿ ಖಾಸಗಿ ಲೇವಾದೇವಿದಾರರು ಅಥವಾ ಇತರ ಹಣಕಾಸು ಸಂಸ್ಥೆಗಳಿಗೆ ಹೋಗುವುದನ್ನು ತಪ್ಪಿಸುವುದು ಯೋಜನೆಯ ಉದ್ದೇಶವಾಗಿದೆ.
ಇದನ್ನೂ ಓದಿ: KSWDC Loan Scheme Karnataka 2025-26: ಮಹಿಳಾ ಅಭಿವೃದ್ಧಿ ನಿಗಮದಿಂದ ವಿವಿಧ ಸಬ್ಸಿಡಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ
ಉದ್ಯೋಗಿ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ.?
ಗಮನಿಸಿ: ಅರ್ಹ ಫಲಾಪೇಕ್ಷಿಗಳು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ-ಒನ್, ಕರ್ನಾಟಕ-ಒನ್ ಹಾಗೂ ಬೆಂಗಳೂರು-ಒನ್ ನಾಗರಿಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
Important Direct Links:
| Udyogini Scheme 2025-26 Online Apply Link | sevasindhu.karnataka.gov.in |
| Official Website | kswdc.karnataka.gov.in |
| More Updates | KarnatakaHelp.in |
ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.
What is the Last Date of Udyogini Scheme in Karnataka 2025-26?
January 15, 2026
No more response in Karnataka scheme s me
Sakkamma
3laksha lone bage
How to apply udyghine yojane