KVS ಎಡಿಇ/ಎಲ್‌ಡಿಸಿಇ ಮೂಲಕ ಬೋಧಕ-ಬೋಧಕೇತರ 2499 ಹುದ್ದೆಗಳ ನೇಮಕ

Published on:

ಕೇಂದ್ರೀಯ ವಿದ್ಯಾಲಯ ಸಂಘಟನೆಯು ಸೀಮಿತ ಇಲಾಖಾ ಪರೀಕ್ಷೆ (LDE) ಹಾಗೂ ಸೀಮಿತ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆ (LDCE)ಯ ಮೂಲಕ ವಿವಿಧ ಬೋಧಕ ಮತ್ತು ಬೋಧಕೇತರ ವೃಂದದ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿ, ಅರ್ಜಿ ಆಹ್ವಾನಿಸಿದೆ.

ಪ್ರಾಂಶುಪಾಲ, ಉಪ ಪ್ರಾಂಶುಪಾಲ, ಪಿಜಿಟಿ ಮತ್ತು ಟಿಜಿಟಿ ಶಿಕ್ಷಕ, ಹೆಡ್ ಮಾಸ್ಟರ್, ಸೆಕ್ಷನ್ ಆಫೀಸರ್ ಹಾಗೂ ಫೈನಾನ್ಸ್ ಆಫೀಸರ್ ಸೇರಿದಂತೆ ಇತರೆ 2499 ಹುದ್ದೆಗಳನ್ನು ಅರ್ಹತೆ ಮತ್ತು ಹಿರಿತನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಅಗತ್ಯ ಶೈಕ್ಷಣಿಕ ಅರ್ಹತೆ ಜೊತೆಗೆ ಕೆವಿಎಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳು ಮಾತ್ರ ಸದರಿ ಪರೀಕ್ಷೆಗೆ ನೋಂದಣಿಗೆ ಅರ್ಹರು. ನಿಗದಿತ ದಾಖಲೆಗಳೊಂದಿಗೆ ಡಿ.26ರೊಳಗೆ ನೋಂದಣಿ ಮಾಡಲು ನಿಯಂತ್ರಣ ಅಧಿಕಾರಿ*ಗಳನ್ನು ಭೇಟಿ ಮಾಡುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

* KVSನ ಪ್ರಾಂಶುಪಾಲರು/ಪ್ರಭಾರ ಪ್ರಾಂಶುಪಾಲರು, ಪ್ರಾದೇಶಿಕ ಅಧಿಕಾರಿಗಳ ಉಪ ಆಯುಕ್ತರು, ZIET ನಿರ್ದೇಶಕರು, ಕೆ.ವಿ.ಎಸ್ ಪ್ರಧಾನ ಕಚೇರಿಯ ಸಹಾಯಕ ಆಯುಕ್ತರು (I/II/III) ಇವರೆಲ್ಲರೂ ನಿಯಂತ್ರಣ ಅಧಿಕಾರಿಗಳಾಗಿರುತ್ತಾರೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಡಿಸೆಂಬರ್ 12, 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್ 26, 2025
  • LDCE/LDE ಪರೀಕ್ಷೆಯ ದಿನಾಂಕ – ಫೆಬ್ರವರಿ 15, 2026

ಹುದ್ದೆಗಳ ವಿವರ:

ಪ್ರಾಂಶುಪಾಲರು – 157 ಹುದ್ದೆಗಳು
ಉಪಪ್ರಾಂಶುಪಾಲರು – 125 ಹುದ್ದೆಗಳು
ಪಿಜಿಟಿ (ಹಿಂದಿ) – 67 ಹುದ್ದೆಗಳು
ಪಿಜಿಟಿ (ಇಂಗ್ಲಿಷ್) – 94 ಹುದ್ದೆಗಳು
ಪಿಜಿಟಿ (ಭೌತಶಾಸ್ತ್ರ) – 138 ಹುದ್ದೆಗಳು
ಪಿಜಿಟಿ (ರಸಾಯನಶಾಸ್ತ್ರ) – 128 ಹುದ್ದೆಗಳು
ಪಿಜಿಟಿ (ಗಣಿತ) – 49 ಹುದ್ದೆಗಳು
ಪಿಜಿಟಿ (ಜೀವಶಾಸ್ತ್ರ) – 74 ಹುದ್ದೆಗಳು
ಪಿಜಿಟಿ (ಇತಿಹಾಸ) – 39 ಹುದ್ದೆಗಳು
ಪಿಜಿಟಿ (ಅರ್ಥಶಾಸ್ತ್ರ) – 80 ಹುದ್ದೆಗಳು
ಪಿಜಿಟಿ (ಭೂಗೋಳ) – 38 ಹುದ್ದೆಗಳು
ಟಿಜಿಟಿ (ಇಂಗ್ಲಿಷ್) – 258 ಹುದ್ದೆಗಳು
ಟಿಜಿಟಿ (ಹಿಂದಿ) – 79 ಹುದ್ದೆಗಳು
ಟಿಜಿಟಿ (ವಿಜ್ಞಾನ) – 143 ಹುದ್ದೆಗಳು
ಟಿಜಿಟಿ (ಗಣಿತ) – 307 ಹುದ್ದೆಗಳು
ಟಿಜಿಟಿ (ಸಾಮಾಜಿಕ ಅಧ್ಯಯನಗಳು) – 253 ಹುದ್ದೆಗಳು
ಹೆಡ್ ಮಾಸ್ಟರ್ – 124 ಹುದ್ದೆಗಳು
ಫೈನಾನ್ಸ್ ಆಫೀಸರ್ – 05 ಹುದ್ದೆಗಳು
ಸೆಕ್ಷನ್ ಆಫೀಸರ್ – 06 ಹುದ್ದೆಗಳು
ಅಸಿಸ್ಟೆಂಟ್ ಸೆಕ್ಷನ್ ಆಫೀಸರ್ – 107 ಹುದ್ದೆಗಳು
ಸೀನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ – 179 ಹುದ್ದೆಗಳು
ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ – 49 ಹುದ್ದೆಗಳು

ಒಟ್ಟು – 2499 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಬಿ.ಎಡ್, ಎಂ.ಎಡ್ (ಹುದ್ದೆಗೆ ಅನುಗುಣವಾಗಿ) ಹೊಂದಿರಬೇಕು ಜೊತೆಗೆ ಕಡ್ಡಾಯವಾಗಿ ಆಯಾ ಹುದ್ದೆಗಳಿಗೆ ಅನುಗುಣವಾಗಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರಬೇಕು.

ಇನ್ನಷ್ಟು ಹೆಚ್ಚಿನ ಸ್ಪಷ್ಟ ವಿವರಗಳಿಗಾಗಿ ಅಭ್ಯರ್ಥಿಗಳು ತಪ್ಪದೆ ಸಂಪೂರ್ಣ ಅಧಿಕೃತ ಅಧಿಸೂಚನೆಯನ್ನು ಓದಿ.

ವಯೋಮಿತಿ:

ವಯಸ್ಸು, ಅನುಭವ ಮತ್ತು ಅರ್ಹತೆಯನ್ನು ಜನವರಿ 01, 2026 ರಂತೆ ಪರಿಗಣಿಸಲಾಗುತ್ತದೆ.

ವಯೋಮಿತಿ ಸಡಿಲಿಕೆ; ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – ಸರ್ಕಾರಿ ನಿಯಮಗಳ ಪ್ರಕಾರ

ಆಯ್ಕೆ ವಿಧಾನ:

  • ಲಿಖಿತ ಪರೀಕ್ಷೆ
  • ಕೌಶಲ್ಯ ಪರೀಕ್ಷೆ/ ಪ್ರಾಯೋಗಿಕ ಪರೀಕ್ಷೆ (ಹುದ್ದೆಗಳಿಗೆ ಅನುಗುಣವಾಗಿ)
  • ಸಂದರ್ಶನ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಹುದ್ದೆಗಳಿಗೆ ಆಧಾರಿತವಾಗಿ ಆಯ್ಕೆ ಪ್ರಕ್ರಿಯೆ ಇರುತ್ತದೆ.

ಸಂಬಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ (7ನೇ CPC ಪೇ ಮ್ಯಾಟ್ರಿಕ್ಸ್) ಪ್ರಕಾರ ಮಾಹೆಯಾನ ವೇತನ, ಭತ್ಯೆ ಹಾಗೂ ಇತರೆ ಸೌಲಭ್ಯಗಳನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಉಲ್ಲೇಖಿಸಲಾಗಿರುವುದಿಲ್ಲ

ಅರ್ಜಿ ಸಲ್ಲಿಸುವ ಪ್ರಕ್ರಿಯೆ:

ಹಂತ-1 ಅರ್ಜಿ ಸಲ್ಲಿಸುವ ಸಿಬ್ಬಂದಿಗಳು ತಾವು ಸೇವೆ ಸಲ್ಲಿಸುತ್ತಿರುವ ಕೇಂದ್ರೀಯ ವಿದ್ಯಾಲಯ ಸಂಘಟನೆಯ ಪ್ರಾಂಶುಪಾಲರು/ಪ್ರಭಾರ ಪ್ರಾಂಶುಪಾಲರು, ಪ್ರಾದೇಶಿಕ ಅಧಿಕಾರಿಗಳ ಉಪ ಆಯುಕ್ತರು, ZIET ನಿರ್ದೇಶಕರು, ಕೆ.ವಿ.ಎಸ್ ಪ್ರಧಾನ ಕಚೇರಿಯ ಸಹಾಯಕ ಆಯುಕ್ತ(I/II/III)ರನ್ನು ಭೇಟಿ ಮಾಡಿ. (ಕಂಟ್ರೋಲಿಂಗ್‌ ಆಫೀಸರ್‌)

ಹಂತ-2 ನಿಮ್ಮ ದಾಖಲೆಗಳನ್ನು ಕಂಟ್ರೋಲಿಂಗ್‌ ಆಫೀಸರ್‌ ಪರಿಶೀಲನೆ ಮಾಡಿ, ನೋಂದಣಿ ಮಾಡಿಕೊಂಡ ನಂತರ ನಿಮಗೆ ಅರ್ಜಿ ಸಲ್ಲಿಕೆ ಲಿಂಕ್‌ ಅನ್ನು ನಿಮಗೆ ಇ-ಮೇಲ್‌ ಮಾಡಲಾಗುತ್ತದೆ.

ಹಂತ-3 ಮುಂದೆ ನೀವು ಅಲ್ಲಿ ಕೇಳಾದ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

ಹಂತ-4 ನೀವು ಅಂತಿಮವಾಗಿ ಸಲ್ಲಿಸಿದ ಅರ್ಜಿಯನ್ನು ನಿಗದಿತ ದಾಖಲೆಗಳ ಎರಡು ಸೆಟ್‌ ಪ್ರತಿಗಳನ್ನು ಕಂಟ್ರೋಲಿಂಗ್‌ ಆಫೀಸರ್‌ಗೆ ಸಲ್ಲಿಸಬೇಕು.

Important Direct Links:

Official Notification PDFDownload
Official Websitekvsangathan.nic.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

1 thought on “KVS ಎಡಿಇ/ಎಲ್‌ಡಿಸಿಇ ಮೂಲಕ ಬೋಧಕ-ಬೋಧಕೇತರ 2499 ಹುದ್ದೆಗಳ ನೇಮಕ”

Leave a Comment