ಭಾರತ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯಾಗಿರುವ ಕೇಂದ್ರೀಯ ವಿದ್ಯಾಲಯ ಸಂಘಟನೆ ಮತ್ತು ನವೋದಯ ವಿದ್ಯಾಲಯ ಸಮಿತಿಯು ಒಟ್ಟು 14,967 ವಿವಿಧ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ.
ಪ್ರಾಂಶುಪಾಲರು, ಸಹಾಯಕ ಆಯುಕ್ತರು, ಉಪ ಪ್ರಾಂಶುಪಾಲರು, ಸ್ನಾತಕೋತ್ತರ ಶಿಕ್ಷಕರು, ತರಬೇತಿ ಪಡೆದ ಪದವೀಧರ ಶಿಕ್ಷಕರು, ಗ್ರಂಥಪಾಲಕ, ಪ್ರಾಥಮಿಕ ಶಿಕ್ಷಕರು ಹಾಗೂ ಬೋಧಕೇತರ ಹುದ್ದೆಗಳು ಸೇರಿದಂತೆ ಇತರೆ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು KVS ಅಧಿಕೃತ ಜಾಲತಾಣ https://kvsangathan.nic.in/en/interview-notice/ ಅಥವಾ https://navodaya.gov.in/ಕ್ಕೆ ಭೇಟಿ ನೀಡಿ. ಡಿ.04ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಡಿಸೆಂಬರ್ 04, 2025
ಹುದ್ದೆಗಳ ವಿವರ:
ಸಹಾಯಕ ಆಯುಕ್ತರು (ಗುಂಪು-ಎ) – 08 ಹುದ್ದೆಗಳು ಸಹಾಯಕ ಆಯುಕ್ತರು (ಶೈಕ್ಷಣಿಕ) – 09 ಹುದ್ದೆಗಳು ಪ್ರಾಂಶುಪಾಲರು (ಗುಂಪು-ಎ) – 227 ಹುದ್ದೆಗಳು ಉಪ ಪ್ರಾಂಶುಪಾಲರು – 58 ಹುದ್ದೆಗಳು ಸ್ನಾತಕೋತ್ತರ ಶಿಕ್ಷಕರು (KVS) – 1465 ಹುದ್ದೆಗಳು ಸ್ನಾತಕೋತ್ತರ ಶಿಕ್ಷಕರು (NVS) – 1513 ಹುದ್ದೆಗಳು ಸ್ನಾತಕೋತ್ತರ ಶಿಕ್ಷಕರು (ಆಧುನಿಕ ಭಾರತೀಯ ಭಾಷೆ) – 18 ಹುದ್ದೆಗಳು ತರಬೇತಿ ಪಡೆದ ಪದವೀಧರ ಶಿಕ್ಷಕರು (KVS) – 2794 ಹುದ್ದೆಗಳು ಗ್ರಂಥಪಾಲಕ – 147 ಹುದ್ದೆಗಳು ತರಬೇತಿ ಪಡೆದ ಪದವೀಧರ ಶಿಕ್ಷಕರು (NVS) – 2978 ಹುದ್ದೆಗಳು ತರಬೇತಿ ಪಡೆದ ಪದವೀಧರ ಶಿಕ್ಷಕರು (ತೃತೀಯ ಭಾಷೆ) – 443 ಹುದ್ದೆಗಳು ಪ್ರಾಥಮಿಕ ಶಿಕ್ಷಕರು (KVS) – 3365 ಹುದ್ದೆಗಳು ಆಡಳಿತ ಅಧಿಕಾರಿ – 12 ಹುದ್ದೆಗಳು ಹಣಕಾಸು ಅಧಿಕಾರಿ – 5 ಹುದ್ದೆಗಳು ಸಹಾಯಕ ಎಂಜಿನಿಯರ್ – 2 ಹುದ್ದೆಗಳು ಸಹಾಯಕ ವಿಭಾಗ ಅಧಿಕಾರಿ – 74 ಹುದ್ದೆಗಳು ಜೂನಿಯರ್ ಟ್ರಾನ್ಸ್ಲೇಟರ್ – 8 ಹುದ್ದೆಗಳು ಹಿರಿಯ ಸಚಿವಾಲಯ ಸಹಾಯಕ – 280 ಹುದ್ದೆಗಳು ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ – 714 ಹುದ್ದೆಗಳು ಸ್ಟೆನೋಗ್ರಾಫರ್ ಗ್ರೇಡ್-1 – 3 ಹುದ್ದೆಗಳು ಸ್ಟೆನೋಗ್ರಾಫರ್ ಗ್ರೇಡ್-2 – 57 ಹುದ್ದೆಗಳು ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (RO ಕೇಡರ್ – 46 ಹುದ್ದೆಗಳು ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (JNV) ಕೇಡರ್ – 552 ಹುದ್ದೆಗಳು ಪ್ರಯೋಗಾಲಯ ಸಹಾಯಕ – 165 ಹುದ್ದೆಗಳು ಬಹು ಕಾರ್ಯ ಸಿಬ್ಬಂದಿ (RO ಕೇಡರ್) – 24 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ 10ನೇ ತರಗತಿ/12ನೇ ತರಗತಿ/ಪದವಿ/ಸ್ನಾತಕೋತ್ತರ ಪದವಿ/ ಸಿಟಿಇಟಿ/ ಬಿ.ಎಡ್.-ಎಂ.ಎಡ್ ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು. ಹೆಚ್ಚಿನ ವಿದ್ಯಾರ್ಹತೆ ವಿವರಗಳಿಗಾಗಿ ಅಭ್ಯರ್ಥಿಗಳು ತಪ್ಪದೆ ಅಧಿಕೃತ ಅಧಿಸೂಚನೆಯನ್ನು ಓದಬೇಕು.
ವಯೋಮಿತಿ:
04-12-2025 ರಂತೆ;
• ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು • ಗರಿಷ್ಠ ವಯಸ್ಸಿನ ಮಿತಿ – 27 ರಿಂದ 50 ವರ್ಷಗಳು (ಹುದ್ದೆಗಳಿಗೆ ಅನುಗುಣವಾಗಿ)
ವಯೋಮಿತಿ ಸಡಿಲಿಕೆ: ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ -05 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ – 10-15 ವರ್ಷಗಳು
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಸಂದರ್ಶನ/ ಕೌಶಲ್ಯ ಪರೀಕ್ಷೆ ದಾಖಲೆ ಪರಿಶೀಲನೆ ವೈದ್ಯಕೀಯ ಪರೀಕ್ಷೆ
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ 18,000ರೂ.ಗಳಿಂದ 2,09,200ರೂ. ವರೆಗೆ ಮಾಹೆಯಾನ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
✓ ಸಹಾಯಕ ಆಯುಕ್ತರು,ಪ್ರಿನ್ಸಿಪಾಲ್ ಹಾಗೂ ವೈಸ್ ಪ್ರಿನ್ಸಿಪಾಲ್ ಹುದ್ದೆಗಳಿಗೆ;
✓ ಹಿರಿಯ ಕಾರ್ಯದರ್ಶಿ ಸಹಾಯಕ, ಸ್ಟೆನೋಗ್ರಾಫರ್ ಗ್ರೇಡ್-II, ಸ್ಟೆನೋಗ್ರಾಫರ್ ಗ್ರೇಡ್-ಎಲ್, ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ, ಲ್ಯಾಬ್ ಅಟೆಂಡೆಂಟ್ ಹಾಗೂ ಬಹು ಕಾರ್ಯ ಸಿಬ್ಬಂದಿ ಹುದ್ದೆಗಳಿಗೆ;
• ಪ.ಜಾತಿ, ಪ.ಪಂಗಡ, ಪಿಡಬ್ಲ್ಯೂಬಿಡಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ ಕೇವಲ ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕು – 500ರೂ.
ಅರ್ಜಿ ಸಲ್ಲಿಸುವ ವಿಧಾನ:
• KVS ಅಧಿಕೃತ ಜಾಲತಾಣ https://kvsangathan.nic.in/en/interview-notice/ ಕ್ಕೆ ಭೇಟಿ ನೀಡಿ.
• ಅಧಿಸೂಚನೆಗಳು/ನೇಮಕಾತಿ – ವಿಭಾಗದ ಕೆಳಗೆ ನೀಡಲಾಗಿರುವ “ನೇರ ನೇಮಕಾತಿ ಮೂಲಕ ವಿವಿಧ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಲಿಂಕ್- ಅಧಿಸೂಚನೆ ಸಂಖ್ಯೆ 1/2025” ಶೀರ್ಷಿಕೆ ಕೆಳಗೆ ನೀಡಿರುವ “ಲಿಂಕ್ ವೀಕ್ಷಿಸಿ” ಆಯ್ಕೆಯ ಮೇಲೆ ಟ್ಯಾಪ್ ಮಾಡಿ.
• ಬಳಿಕ ನಿಮ್ಮನ್ನು ಮತ್ತೊಂದು ಹೊಸ ಪುಟಕ್ಕೆ ಮರು ನಿರ್ದೇಶಿಸಲಾಗುತ್ತದೆ.
• ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ಬಳಕೆದಾರರ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವ-ವಿವರ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಪಾವತಿ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಸಲ್ಲಿಸಿ.
• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.
Is there any opportunity for special D.ed for ID