WhatsApp Channel Join Now
Telegram Group Join Now

Manaswini Scheme: ಮಹಿಳೆಯರಿಗೆ ಪ್ರತಿ ತಿಂಗಳು 800 ರೂಪಾಯಿ ಸರ್ಕಾರದಿಂದ ಪಿಂಚಣಿ ಸೌಲಭ್ಯ!!

ನಮಸ್ಕಾರ ಕರ್ನಾಟಕ ಹೆಲ್ಪ್ ಗೆ ಸ್ವಾಗತ, ಇಂದು ನಾವು “ಮನಸ್ವಿನಿ ಯೋಜನೆ(Manaswini Scheme)” ಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ. ಸಹಾಯವಾಗಿದ್ದಲ್ಲಿ ನಿಮ್ಮ ಹಿತೈಷಿಗಳಿಗೂ ತಪ್ಪದೆ ಶೇರ್ ಮಾಡಿ.

ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅವಿವಾಹಿತ, ವಿಧವೆ ಮತ್ತು ವಿಚ್ಛಿದ್ರಿತ ಮಹಿಳೆಯರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಮನಸ್ವಿನಿ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯು ಈ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಮತ್ತು ಸಮಾಜದ ಮುಖ್ಯವಾಹಿನಿಗೆ ಸೇರಿಕೊಳ್ಳಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಈ ಯೋಜನೆಯ ಸಂಪೂರ್ಣ ಮಾಹಿತಿಗಾಗಿ ಈ ಲೇಖನ ಓದಿರಿ.

Manaswini scheme in Kannada
Manaswini scheme

Eligibility criteria for Manaswini Scheme

  • ಫಲಾನುಭವಿಯು 40 ರಿಂದ 64 ವರ್ಷದೊಳಗಿರಬೇಕು.
  • ವಾರ್ಷಿಕ ಆದಾಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ರೂ.32,000/- ಕ್ಕಿಂತ ಕಡಿಮೆ ಇರಬೇಕು.
  • ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ನಿರ್ಗತಿಕ ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ದೇವದಾಸಿ ವೇತನ ಅಥವಾ ಅಂಗವಿಕಲರ ವೇತನ ಅಥವಾ ಯಾವುದೇ ರೀತಿಯ ಮಾಸಾಶನವನ್ನು ಸಾರ್ವಜನಿಕ ಅಥವಾ ಖಾಸಗಿ ಮೂಲಗಳಿಂದ ಪಡೆಯುತ್ತಿರುವ ವ್ಯಕ್ತಿಗಳು ಈ ಯೋಜನೆಯಡಿಯಲ್ಲಿ ಮಾಸಾಶನ ಪಡೆಯಲು ಅರ್ಹರಾಗಿರುವುದಿಲ್ಲ.

Required Documents for Manaswini Scheme:

  • ಬಿಪಿಲ್‌ ಪಡಿತರ ಚೀಟಿ.
  • ಆದಾಯ ಪ್ರಮಾಣ ಪತ್ರ.
  • ಚುನಾವಣಾ ಗುರುತಿನ ಚೀಟಿ ಅಥವಾ ವಿಳಾಸದ ಬಗ್ಗೆ ದೃಢೀಕರಣ ದಾಖಲೆ.
  • ಅವಿವಾಹಿತರು ತಮಗೆ ವಿವಾಹ ಆಗಿಲ್ಲದಿರುವ ಬಗ್ಗೆ ಸ್ವಯಂ ಘೋಷಿತ ಪ್ರಮಾಣ ಪತ್ರ.
  • ವಿವಾಹ ವಿಚ್ಚೇದಿತರು ವಿಚ್ಚೇದನದ ಸ್ವಯಂ ಘೋಷಿತ ಪ್ರಮಾಣ ಪತ್ರ.
  • ಬ್ಯಾಂಕ್‌ ಮತ್ತು ಅಂಚೆ ಖಾತೆ ವಿವರಗಳು.
  • ಆಧಾರ್‌ ಕಾರ್ಡ್

Benefits of Manaswini Scheme

ಮನಸ್ವಿನಿ ಯೋಜನೆಯ ಪ್ರಯೋಜನಗಳು:

  • ಅನುಕೂಲಗಳು: ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ತಿಂಗಳು ₹800 ಪಿಂಚಣಿ ನೀಡಲಾಗುತ್ತದೆ. ಅವರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ, ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಗೆ ಸಹಾಯವನ್ನು ಸಹ ಒದಗಿಸಲಾಗುತ್ತದೆ.
  • ಅವಿವಾಹಿತ, ವಿಧವೆ ಮತ್ತು ವಿಚ್ಛಿದ್ರಿತ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಯನ್ನು ಒದಗಿಸುತ್ತದೆ.
  • ಅವರಿಗೆ ಸಾಮಾಜಿಕ ಭದ್ರತೆ ಮತ್ತು ಗೌರವದ ಭಾವನೆಯನ್ನು ನೀಡುತ್ತದೆ.
  • ಅವರಿಗೆ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳಿಗೆ ಪ್ರವೇಶವನ್ನು ಒದಗಿಸುತ್ತದೆ.
  • ಸಮಾಜದಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಮನಸ್ವಿನಿ ಯೋಜನೆಯು ಕರ್ನಾಟಕದ ಅವಿವಾಹಿತ, ವಿಧವೆ ಮತ್ತು ವಿಚ್ಛಿದ್ರಿತ ಮಹಿಳೆಯರ ಜೀವನವನ್ನು ಸುಧಾರಿಸುವಲ್ಲಿ ಗಮನಾರ್ಹ ಪಾತ್ರ ವಹಿಸುತ್ತಿದೆ. ಈ ಯೋಜನೆಯು ಅವರಿಗೆ ಸ್ವಾವಲಂಬಿ ಜೀವನ ನಡೆಸಲು ಮತ್ತು ಸಮಾಜದ ಉತ್ಪಾದಕ ಸದಸ್ಯರಾಗಲು ಸಹಾಯ ಮಾಡುತ್ತಿದೆ.

How to Apply for Manaswini Scheme

  • ಅರ್ಜಿದಾರರು ನಿಗದಿದ ದಾಖಲಾತಿಗಳೊಂದಿಗೆ ನಿಮಗೆ ಹತ್ತಿರವಿರುವ ಅಟಲ್‌ ಜೀ ಜನಸ್ನೇಹಿ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಲಿಸಬೇಕು.

ಅಂತಿಮ ನುಡಿ: ನಾವು ನೀಡಿದ ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

Important Links of Manaswini Scheme Karnataka

More UpdatesKarnatakaHelp.in
Official Websitedssp.karnataka.gov.in

Leave a Comment